ಯಶ್ ನಟಿಸಿ ನಿರ್ಮಿಸುತ್ತಿರುವ `ರಾಮಾಯಣ’ ಚಿತ್ರದ (Ramayana Movie) ಮೊದಲ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು, ಮೊದಲ ಗ್ಲಿಂಪ್ಸ್ ಕೂಡ ರಿಲೀಸ್ ಆಗಿದೆ. ಈ ಹೊತ್ತಲ್ಲಿ ಸ್ಫೋಟಕ ವಿಚಾರವೊಂದು ವೈರಲ್ ಆಗುತ್ತಿದ್ದು, ರಾಮಾಯಣ ಮೊದಲ ಭಾಗದಲ್ಲಿ ಯಶ್ (Yash) 15 ನಿಮಿಷ ಮಾತ್ರವೇ ಸ್ಕ್ರೀನ್‌ನಲ್ಲಿ ಇರ್ತಾರಂತೆ.
ರಾಮಾಯಣದಲ್ಲಿ ರಾವಣನ ಪಾತ್ರದ ಹೊರತು ಬೇರೆ ಪಾತ್ರವನ್ನ ತಾವು ಆಯ್ಕೆ ಮಾಡ್ತಿರಲಿಲ್ಲ ಎಂದು ಯಶ್ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ರಾವಣನ ಪಾತ್ರಕ್ಕಿರುವ ಬಹುಮುಖತೆಗೆ ಯಶ್ ಉತ್ಸುಕರಾಗಿದ್ದರು. ಅದರಂತೆ ಯಶ್ ಕೂಡ ನಟಿಸಿದ್ದಾರೆ. ಬಿಡುಗಡೆಯಾದ ಸಣ್ಣದೊಂದು ಗ್ಲಿಮ್ಸ್ ಅಲ್ಲೇ ಯಶ್ ಅಬ್ಬರಿಸಿದ್ದಾರೆ. ಈ ಮೂಲಕ ಸಿನಿಮಾ ಇತಿಹಾಸದಲ್ಲಿ ಮೊದಲ ಬಾರಿಗೆ ನಾಯಕನ ವಿರುದ್ಧ ಬರುವ ಖಳನಾಯಕನ ಪಾತ್ರವೇ ಚಿತ್ರದ ಹೈಲೈಟ್ ಆಗೋಕೆ ಯಶ್ ಕಾರಣ. ಈ ಹೊತ್ತಲ್ಲೇ ರೋಚಕ ವಿಷಯವೊಂದು ಸುದ್ದಿಯಾಗುತ್ತಿದೆ. ಯಶ್ ಇಡೀ ಚಿತ್ರದಲ್ಲಿ ಹದಿನೈದು ನಿಮಿಷ ಮಾತ್ರ ಕಾಣಿಸ್ಕೊಳ್ಳಲಿದ್ದಾರಂತೆ. ಹೀಗೆಂದು ಟೆಲ್ಲಿಚಕ್ಕರ್ ವರದಿ ಮಾಡಿದೆ. ರಾಮನ ಪಟ್ಟಾಭಿಷೇಕ, ಸೀತಾ ರಾಮ ಕಲ್ಯಾಣ, ಅಯೋಧ್ಯೆಯ ಚಿತ್ರಣಗಳೇ ಮೊದಲ ಭಾಗದಲ್ಲಿ ಹೆಚ್ಚಿರುವುದರಿಂದ ಬಹುಶಃ ರಾವಣನ ಪಾತ್ರ ಹೆಚ್ಚು ಕಾಲ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುವ ಪ್ರಮೇಯ ಬರುವುದಿಲ್ಲ.
ರಾಮಾಯಣ ಚಿತ್ರಕ್ಕೆ ಯಶ್ ಕೂಡ ಓರ್ವ ನಿರ್ಮಾಪಕರು. ಹೀಗಾಗಿ ಅವರಿಗೆ ಬೇಕಾದಂತೆ ಜಾಗ ಪಡೆದುಕೊಳ್ಳಬಹುದಿತ್ತು. ಆದರೆ ಪಾತ್ರ ಹಾಗೂ ಚಿತ್ರಕ್ಕೆ ಏನು ಬೇಕೋ ಅಷ್ಟಕ್ಕೆ ಮಾತ್ರ ಯಶ್ ಆದ್ಯತೆ ನೀಡಿ ತಮ್ಮ ಭಾಗದ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರಂತೆ. ಆದರೆ ಆ ಹದಿನೈದು ನಿಮಿಷವೂ ಯಶ್ ಆವರಿಸಿಕೊಳ್ಳಲಿದ್ದಾರೆ ಅನ್ನೋದಂತೂ ನಿಶ್ಚಿತ. ಆದರೆ ರಾಮಾಯಣ ಎರಡನೇ ಭಾಗದಲ್ಲಿ ಯಶ್ ಅಭಿನಯಿಸಿರುವ ರಾವಣ ಪಾತ್ರ ಚಿತ್ರದುದ್ದಕ್ಕೂ ಇರಲಿದೆ ಅನ್ನೋದು ರಾಮಾಯಣ ಚಿತ್ರದ ಇನ್‌ಸೈಡ್ ಸ್ಕೂಪ್.