ಯಶ್ ವೃತ್ತಿ ಜೀವನದಲ್ಲಿ ತುಂಬಾ ಸ್ಟೈಲೀಶ್ ಆಗಿ ಕಾಣಿಸಿಕೊಂಡಿರುವ ಸಿನಿಮಾ ಯಾವುದು ಎಂದು ಕೇಳಿದರೆ, ಥಟ್ಟನೆ ನೆನಪಾಗುವ ಚಿತ್ರವೇ ಲಕ್ಕಿ. ರಮ್ಯಾ ಮತ್ತು ಯಶ್ ಕಾಂಬಿನೇಷನ್ ನಲ್ಲಿ ಮೂಡಿ ಬಂದ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಡಾ.ಸೂರಿ. ನಿರ್ಮಾಪಕರು ರಾಧಿಕಾ ಕುಮಾರಸ್ವಾಮಿ. ಈ ಸಿನಿಮಾದಲ್ಲಿ ಯಶ್ ಸಖತ್ ಸ್ಟೈಲೀಶ್ ಆಗಿ ಕಂಡಿದ್ದಾರೆ. ಇದನ್ನೂ ಓದಿ: ಕಾಶ್ಮೀರ ಟಿವಿ ಸ್ಟಾರ್ ನಟಿ ಹತ್ಯೆ ಮಾಡಿದ ಭಯೋತ್ಪಾದಕರು
ರಮ್ಯಾ ಮತ್ತು ಯಶ್ ಕಾಂಬಿನೇಷನ್ ನ ಮೊದಲ ಸಿನಿಮಾ ಇದಾಗಿದ್ದು, ಪ್ರೇಮಕಥೆಯನ್ನು ಹಾಸ್ಯಮಯವಾಗಿ ಹೇಳುವ ಪಯತ್ನ ಮಾಡಲಾಗಿತ್ತು. ಯಶ್ ಈ ಸಿನಿಮಾದಲ್ಲಿ ಹಲವು ವೇಷಗಳನ್ನು ಹಾಕಿದ್ದಾರೆ ಮತ್ತು ನಾಯಕಿಯನ್ನು ತನ್ನತ್ತ ಸೆಳೆಯಲು ಹಲವು ತಂತ್ರಗಳನ್ನೂ ರೂಪಿಸುತ್ತಾರೆ. ಇಂತಹ ಸಿನಿಮಾ ಕನ್ನಡದಲ್ಲಿ ರಿಲೀಸ್ ಆಗಿ ಹತ್ತು ವರ್ಷಗಳೇ ಕಳೆದಿವೆ.
ಇದೀಗ ಲಕ್ಕಿ ತೆಲುಗಿನಲ್ಲಿ ಡಬ್ ಆಗಿ ರಿಲೀಸ್ ಆಗಲು ಸಿದ್ಧತೆ ನಡೆಸಲಾಗುತ್ತಿದೆ. ಈಗಾಗಲೇ ತೆಲುಗಿನಲ್ಲಿ ಡಬ್ ಮಾಡಿ, ಸೆನ್ಸಾರ್ ಕೂಡ ಮಾಡಿಸಲಾಗಿದೆ. ರಿಲೀಸ್ ದಿನಾಂಕ ಮಾತ್ರ ಇನ್ನೂ ಅನೌನ್ಸ್ ಆಗಿಲ್ಲ. ಕೆಜಿಎಫ್ 2 ಸಿನಿಮಾ ಯಶಸ್ವಿ ಬೆನ್ನೆಲ್ಲೆ ಯಶ್ ನಟನೆಯ ಚಿತ್ರಕ್ಕೆ ಬೇಡಿಕೆ ಬಂದಿದೆ. ಇವರ ನಟನೆಯ ಅನೇಕ ಚಿತ್ರಗಳನ್ನು ಡಬ್ ಮಾಡಲು ಬೇರೆ ಬೇರೆ ಭಾಷೆಯ ನಿರ್ಮಾಪಕರು ತುದಿಗಾಲಲ್ಲಿ ನಿಂತಿದ್ದಾರಂತೆ. ಇದನ್ನೂ ಓದಿ: ಸಿನಿಮಾಗಾಗಿ ಕಂಬಳದ ಕೋಣ ಓಡಿಸಿದ ರಿಯಲ್ ಹೀರೋ ಶ್ರೀನಿವಾಸ್ ಗೌಡ
ಲಕ್ಕಿ ಸಿನಿಮಾ ವಿಶೇಷವಾಗಿದೆ. ನಾಯಕ ನಾಯಕಿಯ ಪ್ರೇಮಕಥೆಯಲ್ಲಿ ನಾಯಿಗೂ ವಿಶೇಷ ಸ್ಥಾನವನ್ನು ಕಲ್ಪಿಸಲಾಗಿದೆ. ಅಲ್ಲದೇ, ಯಶ್ ಗೆಳೆಯನಾಗಿ ಶರಣ್ ನಟಿಸಿದ್ದಾರೆ. ಸಾಧು ಕೋಕಿಲಾ ಕೂಡ ವಿಭಿನ್ನ ಬಗೆಯ ಪಾತ್ರವನ್ನು ಮಾಡಿದ್ದಾರೆ.