ಯಶ್ ನಟನೆಯ ಟಾಕ್ಸಿಕ್ : ಕರೀನಾ ಜಾಗಕ್ಕೆ ಬಂದ ಲೇಡಿ ಸೂಪರ್ ಸ್ಟಾರ್

Public TV
1 Min Read
Nayanthara

ಟಾಕ್ಸಿಕ್ ಸಿನಿಮಾಗೆ ಮತ್ತೋರ್ವ ಸ್ಟಾರ್ ನಟಿ ಎಂಟ್ರಿ ಆಗಲಿದೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿರುವ ನಯನತಾರಾ (Nayanthara) ಅವರು ಎರಡನೇ ಬಾರಿ ಕನ್ನಡ ಸಿನಿಮಾ ರಂಗಕ್ಕೆ ಬರಲಿದ್ದಾರೆ. ಈ ಹಿಂದೆ ಅವರು ಉಪೇಂದ್ರ ನಟನೆಯ ಚಿತ್ರದಲ್ಲಿ ನಟಿಸಿದ್ದರು. ಇದೀಗ ಟಾಕ್ಸಿಕ್ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ.

Nayanthara 2

ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ‘ಟಾಕ್ಸಿಕ್’ (Toxic) ಸಿನಿಮಾದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ (Kareena Kapoor) ನಟಿಸಲಿದ್ದಾರೆ ಎಂದು ಸುದ್ದಿ ಆಗಿತ್ತು. ಯಶ್ ಈ ಸಿನಿಮಾದ ನಾಯಕ, ಗೀತಾ ಮೋಹನ್ ದಾಸ್ ನಿರ್ದೇಶಕಿ, ಯಶ್ ಮತ್ತು ಕೆವಿಎನ್ ಪ್ರೊಡಕ್ಷನ್ ನಿರ್ಮಾಪಕರು ಎನ್ನುವ ವಿಷಯದ ಹೊರತಾಗಿ  ಮತ್ತೊಂದು ಮಾಹಿತಿಯನ್ನೂ ಚಿತ್ರತಂಡ ಹಂಚಿಕೊಂಡಿರಲಿಲ್ಲ. ಆದರೂ, ಹಲವು ವಿಷಯಗಳು ಹರಿದಾಡುತ್ತಲೇ ಇದ್ದವು.

kareena kapoor

ಬಾಲಿವುಡ್ ನ ಬಹುಬೇಡಿಕೆ ನಟಿ ಈ ಸಿನಿಮಾದ ನಾಯಕಿಯಾಗಲಿದ್ದಾರೆ ಎನ್ನುವುದರ ಜೊತೆಗೆ ಕರೀನಾ ಕಪೂರ್ ಪ್ರಮುಖ ಪಾತ್ರ ಮಾಡಲಿದ್ದಾರೆ ಎಂದು ಬಿಟೌನ್ ಮಾತನಾಡಿಕೊಂಡಿತ್ತು. ಇದ್ಯಾವುದೋ ಅಧಿಕೃತ ಮಾಹಿತಿ ಆಗಿರಲಿಲ್ಲ. ಆದರೂ, ಸುದ್ದಿಯಂತೂ ಭರ್ಜರಿ ಸೇಲ್ ಆಗಿತ್ತು. ಈಗ ಕರೀನಾ ಸಿನಿಮಾದಲ್ಲಿ ಇರಲ್ಲ ಎನ್ನುವ ಮತ್ತೊಂದು ಸುದ್ದಿ ಇದೆ.

ಯಶ್ ಅವರ ಸಹೋದರಿಯಾಗಿ ಈ ಸಿನಿಮಾದಲ್ಲಿ ಕರೀನಾ ನಟಿಸಬೇಕಿತ್ತು. ಆದರೆ, ಡೇಟ್ ಹೊಂದಾಣಿಕೆಯ ಕಾರಣದಿಂದಾಗಿ ಅವರು ಚಿತ್ರದಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆ. ಒಡಹುಟ್ಟಿದವರ ಕಥೆಯನ್ನು ಇದು ಒಳಗೊಂಡಿದ್ದರಿಂದ ಯಶ್ ಅವರ ಸರಿಸಮಾನಾಗಿ ಡೇಟ್ ಬೇಕಿತ್ತಂತೆ. ಆದರೆ, ಅಷ್ಟೊಂದು ಸಮಯ ಕರೀನಾ ಬಳಿ ಇಲ್ಲವಂತೆ.

 

ಹಾಗಂತ ಈ ವಿಷಯವಾದರೂ ನಿಜವಾ? ಗೊತ್ತಿಲ್ಲ. ಹಾಗಂತ ಬಾಲಿವುಡ್ ಚಿತ್ರರಂಗ ಹೇಳುತ್ತಿದೆ. ಅಲ್ಲಿನ ಮಾಧ್ಯಮಗಳು ಸುದ್ದಿ ಮಾಡಿವೆ. ಆದರೆ, ಚಿತ್ರತಂಡ ಹೇಳುವ ತನಕ ಎಲ್ಲವೂ ಹೋದ ಪುಟ್ಟ, ಬಂದ ಪುಟ್ಟ ಕಥೆಗಳಾಗಿಯೇ ಉಳಿಯುತ್ತವೆ. ನಯನತಾರಾ ಕಥೆಯೂ ಹಾಗಾಗದಿರಲಿ.

Share This Article