ಹಾಲಿವುಡ್ ಸ್ಟಂಟ್ ಡೈರೆಕ್ಟರ್ ಜೊತೆ ಯಶ್: ಹೊಸ ಲುಕ್ ವೈರಲ್

Public TV
2 Min Read
Yash 1

ರಾಕಿಂಗ್ ಸ್ಟಾರ್ ಯಶ್ ಅಚ್ಚರಿ ಮೇಲೆ ಅಚ್ಚರಿಯ ಸುದ್ದಿಗಳನ್ನು ಕೊಡುತ್ತಿದ್ದಾರೆ. ಅವರ ಹೊಸ ಸಿನಿಮಾ ಶುರುವಾಗುವ ಮುಂಚೆ ಹಾಲಿವುಡ್ ನ ಹಲವಾರು ನಿರ್ದೇಶಕರನ್ನು ಮತ್ತು ತಂತ್ರಜ್ಞರನ್ನು ಭೇಟಿ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಲಂಡನ್ ನಲ್ಲಿ ಹಾಲಿವುಡ್ ನ ಖ್ಯಾತ ಸ್ಟಂಟ್ ಡೈರೆಕ್ಟರ್ ಜೆ.ಜೆ.ಪೆರ್ರಿ (JJ Perry) ಭೇಟಿ ಮಾಡಿದ್ದರು. ಆ ಫೋಟೋ ಮತ್ತು ಯಶ್ ಲುಕ್ ವೈರಲ್ ಆಗಿದೆ.

Yash

`ಕೆಜಿಎಫ್ 2′(Kgf 2 Film) ಚಿತ್ರದ ಸಕ್ಸಸ್ ನಂತರ ಯಶ್ (Yash) ಮುಂದಿನ ಚಿತ್ರಕ್ಕಾಗಿ ಭರ್ಜರಿ ತಯಾರಿ ಮಾಡ್ತಿದ್ದಾರೆ. ಅದಕ್ಕಾಗಿ ಅಮೆರಿಕಾದಲ್ಲಿ ಸದ್ಯ ಯಶ್ ನೆಲೆಸಿದ್ದಾರೆ. ಹಾಲಿವುಡ್ ನಿರ್ದೇಶಕ ಜೆಜೆ ಪೆರ್ರಿ ಜೊತೆ ಕಾಣಿಸಿಕೊಂಡಿದ್ದ ಯಶ್, ನಂತರ ಕಾರ್ ರೇಸರ್ ಲೇವಿಸ್ ಹ್ಯಾಮಿಲ್ಟನ್ (Lewis Hamilton) ಅವರನ್ನ ಭೇಟಿ ಮಾಡಿದ್ದರು. ಇದನ್ನೂ ಓದಿ:ನಮಗೇ ನೀರಿಲ್ಲ, ತಮಿಳುನಾಡಿಗೆ ನೀರು ಬಿಡೋದು ಹೇಗೆ? ರಾಗಿಣಿ ದ್ವಿವೇದಿ ಪ್ರತಿಕ್ರಿಯೆ

Yash 2

ನ್ಯಾಷನಲ್ ಸ್ಟಾರ್ ಆಗಿ ದಶದಿಕ್ಕುಗಳಲ್ಲೂ ಯಶ್ ಮಿಂಚ್ತಿದ್ದಾರೆ. `ಕೆಜಿಎಫ್ 2′ ಸೂಪರ್ ಸಕ್ಸಸ್ ನಂತರ ಯಶ್ ಮುಂದಿನ ನಡೆ ಮೇಲೆ ಎಲ್ಲರಿಗೂ ಕಣ್ಣಿದೆ. ಯಶ್ ಮುಂದಿನ ಪ್ರಾಜೆಕ್ಟ್ ಅಪ್‌ಡೇಟ್‌ಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ. ಇತ್ತೀಚೆಗೆ ಹಾಲಿವುಡ್ ನಿರ್ದೇಶಕರನ್ನ ಭೇಟಿ ಮಾಡಿದ್ದ ಯಶ್ ಈಗ ಫಾರ್ಮುಲಾ ಕಾರು ರೇಸರ್ ಲೇವಿಸ್ ಹ್ಯಾಮಿಲ್ಟನ್ ಜೊತೆ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಇದೀಗ ಸಖತ್ ವೈರಲ್ ಆಗುತ್ತಿದೆ.

yash 1 1

ಹ್ಯಾಮಿಲ್ಟನ್ ಅವರನ್ನ ಯಶ್ ಅಮೆರಿಕದ ಲಾಸ್ ಏಂಜಲ್ಸ್‌ನಲ್ಲಿ ಭೇಟಿ ಮಾಡಿದ್ದಾರೆ. ಜಗತ್ತಿನ ಅತ್ತುತ್ತಮ ಕಾರ್ ರೇಸರ್‌ನಲ್ಲಿ ಹ್ಯಾಮಿಲ್ಟನ್ ಕೂಡ ಒಬ್ಬರು. ಹಾಗಾಗಿ ಇವರಿಬ್ಬರ ಭೇಟಿ ಇದೀಗ ನೆಟ್ಟಿಗರ ಕುತೂಹಲಕ್ಕೆ ಕಾರಣವಾಗಿದೆ. ಯಶ್ ಮುಂದಿನ ಚಿತ್ರದಲ್ಲಿ ಕಾರ್ ರೇಸರ್ ಆಗಿ ಕಾಣಿಸಿಕೊಳ್ಳಲಿದ್ದಾರಾ ಎಂಬುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

 

ಹಾಲಿವುಡ್ ನಿರ್ದೇಶಕ ಜೆಜೆ ಪೆರ್ರಿ ಡೈರೆಕ್ಷನ್‌ನಲ್ಲಿ ಯಶ್ ಕಾರ್ ರೇಸರ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅದಕ್ಕಾಗಿ ಯಶ್ ಕಾರ್ ರೇಸಿಂಗ್ ತರಬೇತಿ ಪಡೆಯುತ್ತಿದ್ದಾರಾ ಎಂಬುದು ಯಶ್ ಅಭಿಮಾನಿಗಳ ಅಚ್ಚರಿ. ಎಲ್ಲದಕ್ಕೂ ಉತ್ತರ ರಾಕಿಭಾಯ್ ಕಡೆಯಿಂದಲೇ ಅಧಿಕೃತ ಅಪ್‌ಡೇಟ್ ಬರುವವರೆಗೂ ಕಾದುನೋಡಬೇಕಿದೆ.

Web Stories

Share This Article