ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಈ ಬಾರಿ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಕರೆ ಕೊಟ್ಟಿದ್ದಾರೆ. ಅವರ ಮನ್ ಕೀ ಬಾತ್ ಸರಣಿಯಲ್ಲಿ ಈ ಕುರಿತು ವಿಶೇಷವಾಗಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆಗಸ್ಟ್ 13 ಮತ್ತು 15ರ ನಡುವೆ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ದೇಶಭಕ್ತಿ ಸಾರುವಂತೆ ಕರೆ ನೀಡಿದ್ದಾರೆ.
ಮನೆ ಮನದಲ್ಲೂ ತ್ರಿವರ್ಣ ಧ್ವಜ ಹಾರಿಸುವ ‘ಹರ್ ಘರ್ ತಿರಂಗಾ’ ಆಂದೋಲನಕ್ಕೆ ಸಾಕ್ಷಿಯಾಗಲು ಕನ್ನಡದ ಅನೇಕ ಸಿಲೆಬ್ರಿಟಿಗಳು ಮುಂದೆ ಬಂದಿದ್ದು, ತಮ್ಮ ಅಭಿಮಾನಿಗಳಿಗೆ ಈ ಆಂದೋಲನದಲ್ಲಿ ಭಾಗಿ ಆಗುವಂತೆ ಕರೆ ನೀಡಿದ್ದಾರೆ. ಕಿಚ್ಚ ಸುದೀಪ್, ಯಶ್, ನಟ ಜಗ್ಗೇಶ್, ತಾರಾ, ಪ್ರಣೀತಾ ಸೇರಿದಂತೆ ಅನೇಕ ಕಲಾವಿದರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಡಿಪಿ ಕೂಡ ಬದಲಾಯಿಸಿಕೊಂಡಿದ್ದಾರೆ. ಇದನ್ನೂ ಓದಿ:‘ಆಪರೇಷನ್ ಲಂಡನ್ ಕೆಫೆ’ ಚಿತ್ರತಂಡದಿಂದ ಮೇಘಾ ಶೆಟ್ಟಿ ಹುಟ್ಟು ಹಬ್ಬಕ್ಕೆ ಗಿಫ್ಟ್
ಅಕ್ಷಯ್ ಕುಮಾರ್, ಸೋನು ನಿಗಮ್, ಆಶಾ ಭೋಂಸ್ಲೆ, ಅಮಿತಾಭ್ ಬಚ್ಚನ್, ಪ್ರಭಾಸ್, ಕೀರ್ತಿ ಸುರೇಶ್, ಅಜಯ್ ದೇವಗನ್, ಅನುಷ್ಕಾ ಶರ್ಮಾ ಹೀಗೆ ಬಾಲಿವುಡ್ ನ ಅನೇಕ ತಾರೆಯರು ಈ ಆಂದೋಲನದಲ್ಲಿ ಭಾಗಿಯಾಗಿದ್ದಾರೆ. ಈಗಾಗಲೇ ದೇಶಭಕ್ತಿ ಸಾರುವಂತಹ ಮತ್ತು ಧ್ವಜದ ಮಹತ್ವವನ್ನು ತಿಳಿಸುವಂತಹ ಹಾಡೊಂದನ್ನು ರಿಲೀಸ್ ಆಗಿದ್ದು, ಈ ಹಾಡಿನಲ್ಲಿ ಸಿನಿಮಾ ರಂಗದ ಗಣ್ಯರು ಮತ್ತು ಕ್ರೀಡಾ ಪಟುಗಳು ಕಾಣಿಸಿಕೊಂಡಿದ್ದಾರೆ.