ತಮಿಳು ಸಿನಿಮಾ ಮಾಡ್ತಾರಾ ಅಥವಾ ಕನ್ನಡದ ನಿರ್ದೇಶಕನಿಗೆ ಮಣೆ ಹಾಕ್ತಾರಾ ಯಶ್?

Public TV
1 Min Read
FotoJet 91

ಶ್ ಸಿನಿಮಾ ವಿಚಾರದಲ್ಲಿ ದಿನಕ್ಕೊಂದು ಸುದ್ದಿ ಹರಿದಾಡುತ್ತಿವೆ. ಮೊನ್ನೆಯಷ್ಟೇ ಯಶ್ ಗಾಗಿ ಖ್ಯಾತ ನಿರ್ಮಾಪಕ ದಿಲ್ ರಾಜು ಸಿನಿಮಾವೊಂದನ್ನು ನಿರ್ಮಾಣ ಮಾಡಲು ಮುಂದೆ ಬಂದಿದ್ದು, 100 ಕೋಟಿ ರೂಪಾಯಿ ಆಫರ್ ಮಾಡಿದ್ದಾರೆ ಎಂದು ಸುದ್ದಿ ಆಯಿತು.  ಅದಕ್ಕೂ ಮುನ್ನ ಕೆವಿಎನ್ ಪ್ರೊಡಕ್ಷನ್ ಹೌಸ್ ಕಡೆಯಿಂದ  ಯಶ್ ಮುಂದಿನ ಸಿನಿಮಾ ನಿರ್ಮಾಣ ಅಂತಾಯಿತು. ತೆಲುಗು ಸಿನಿಮಾ ನಿರ್ದೇಶಕರಿಗೂ ಯಶ್ ಕಾಲ್ ಶೀಟ್ ಕೊಟ್ಟಿದ್ದಾರೆ  ಅನ್ನುವ ಸುದ್ದಿಯೂ ಹರಡಿತ್ತು. ಸದ್ಯ ನರ್ತನ್ ಜೊತೆ ಸಿನಿಮಾ ಮಾಡುವ ವಿಚಾರವೂ ಚಾಲ್ತಿಯಲ್ಲಿದೆ. ಇದೀಗ ಮತ್ತೊಂದು ಹೊಸ ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ.

YASH 1 1

ರಜನಿಕಾಂತ್ ಸೇರಿದಂತೆ ಹಲವು ಖ್ಯಾತ ನಟರಿಗೆ ಅದ್ಭುತವಾದ ಸಿನಿಮಾಗಳನ್ನು ಕಟ್ಟಿಕೊಟ್ಟಿರುವ ಖ್ಯಾತ ನಿರ್ದೇಶಕ ಶಂಕರ್ ಜೊತೆ ಯಶ್ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಶಂಕರ್ ಕೂಡ ತಮ್ಮ ಸಿನಿಮಾದ ಮೂಲಕ ಸಾವಿರಾರು ಕೋಟಿ ಬಾಚಿದವರು. ಯಶ್ ನಟನೆಯ ಕೆಜಿಎಫ್ 2 ಚಿತ್ರ ಕೂಡ ಸಾವಿರ ಕೋಟಿ ಹಣ ಗಳಿಸಿದೆ. ಹಾಗಾಗಿ ಸಾವಿರದ ಸರದಾರರು ಒಟ್ಟಾಗಿ ಸಿನಿಮಾ ಮಾಡಲಿದ್ದಾರೆ ಎನ್ನುವುದು ಲೆಟೆಸ್ಟ್ ನ್ಯೂಸ್. ಇದನ್ನೂ ಓದಿ:ಶಾರುಖ್ ಖಾನ್ ನಟನೆಯ `ಜವಾನ್’ ಚಿತ್ರೀಕರಣದಲ್ಲಿ ನಯನತಾರಾ

yash 1 5

ಹಾಗಂತ ಯಾವುದೇ ತಂಡದಿಂದ ಬಂದಿರುವ ಹೇಳಿಕೆ ಇವಲ್ಲ. ಗಾಸಿಪ್ ರೀತಿಯಲ್ಲೂ ಹರಡಿರಬಹುದು. ಅಥವಾ ದಿಲ್ ರಾಜು ನಿರ್ಮಾಣದಲ್ಲಿ ಮೂಡಿ ಬರಲಿರುವ ಚಿತ್ರಕ್ಕೆ ಶಂಕರ್ ನಿರ್ದೇಶನ ಮತ್ತು ಯಶ್ ನಟ ಅಂತಾನೂ ಆಗಬಹುದು. ಒಟ್ಟಿನಲ್ಲಿ ಯಶ್ ಅವರ ಸಿನಿಮಾ ವಿಚಾರದಲ್ಲಿ ದಿನಕ್ಕೊಂದು ಸುದ್ದಿಗಳು ಹರಡುತ್ತಿವೆ. ಅಭಿಮಾನಿಗಳಿಗಂತೂ ಆ ಸುದ್ದಿಗಳು ಥ್ರಿಲ್ ನೀಡುತ್ತಿವೆ.

Live Tv

Share This Article
Leave a Comment

Leave a Reply

Your email address will not be published. Required fields are marked *