-ಯಶ್ ಮೊದಲ ಶೋ ಎಲ್ಲಿ ನೋಡ್ತಾರೆ?
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮಂಗಳವಾರ ಸಂಜೆ ಪಬ್ಲಿಕ್ ಟಿವಿ ಫೇಸ್‍ಬುಕ್ ಲೈವ್ ನಲ್ಲಿ ಬಂದು ಅಭಿಮಾನಿಗಳ ಜೊತೆ ಕೆಜಿಎಫ್ ಚಿತ್ರದ ಅನುಭವಗಳನ್ನು ಹಂಚಿಕೊಂಡರು. ಈ ವೇಳೆ ಯುನಿಕ್ ರೀತಿಯಲ್ಲಿ ಮೂಡಿಬಂದಿರುವ ಸಿನಿಮಾ ಕೆಜಿಎಫ್. ಹಾಗಾಗಿ ವೀಕ್ಷಕರು ಚಿತ್ರಮಂದಿರಗಳಿಗೆ ಫ್ರೆಶ್ ಮೈಂಡ್ ನಲ್ಲಿ ಬಂದು ಯುನಿಕ್ ಆಗಿಯೇ ನೋಡಬೇಕೆಂದು ಮನವಿ ಮಾಡಿಕೊಂಡರು.
ಚಿತ್ರ ಎರಡು ಭಾಗಗಳಲ್ಲಿ ತೆರೆಕಾಣಲಿದ್ದು, ಮೊದಲ ಮತ್ತು ಎರಡನೇ ಭಾಗದ ಪಾತ್ರಗಳ ಪರಿಚಯ ಒಂದಕ್ಕೊಂದು ಲಿಂಕ್ ಹೊಂದಿರುತ್ತವೆ. ಸಿನಿಮಾ ನೋಡುವಾಗ ಎರಡನೇ ಭಾಗದ ಪಾತ್ರವೊಂದು ಒಂದು ಕ್ಷಣದಲ್ಲಿ ಬಂದು ಮಾಯವಾಗುತ್ತದೆ. ಮುಂದೆ ಆ ಪಾತ್ರದ ಹೆಸರು ಚಿತ್ರದ ಉದ್ದಕ್ಕೂ ಬಳಕೆ ಆಗಿರುತ್ತದೆ. ಸಿನಿಮಾ ನೋಡುವಾಗ ಐದು ನಿಮಿಷ ಅಂತಾ ಮೊಬೈಲ್ ನೀಡಿದ್ರೆ, ಸಿನಿಮಾದ ಮೂಲ ಪಾತ್ರ ಕ್ಷಣಾರ್ಧದಲ್ಲಿ ಬಂದು ಮರೆಯಾಗುತ್ತದೆ. ಮುಂದೆ ಪಾತ್ರದ ಹೆಸರು ಬಂದಾಗ ಗೊಂದಲ ಉಂಟಾಗಬಹುದು. ಹಾಗಾಗಿ ಸಿನಿಮಾವನ್ನು ಯುನಿಕ್ ರೀತಿಯಲ್ಲಿ ನೋಡಿ ಎಂದು ಯಶ್ ಹೇಳಿದರು.
ಸಿನಿಮಾದ ಮೊದಲ ಶೋ ಅಭಿಮಾನಿಗಳ ಜೊತೆಯಲ್ಲಿಯೇ ನೋಡಬೇಕೆಂದು ಆಸೆ ಇದೆ. ಆದರೆ ಚಿತ್ರತಂಡದ ಪ್ಲಾನ್ ಬೇರೆ ಇದೆ. ಹಾಗಾಗಿ ಮೊದಲ ಶೋ ಎಲ್ಲಿ ನೋಡ್ತಿನಿ ಎಂಬುವುದು ನನಗೆ ಗೊತ್ತಾಗುತ್ತಿಲ್ಲ. ಕುಟುಂಬ ಅಥವಾ ಚಿತ್ರತಂಡ ಅಥವಾ ಅಭಿಮಾನಿಗಳಾ? ಯಾರ ಜೊತೆ ಎನ್ನುವುದನ್ನು ಇನ್ನು ನಿರ್ಧರಿಸಿಲ್ಲ. ಈಗಾಗಲೇ ಕೆಲವು ಚಿತ್ರಮಂದಿರಗಳಲ್ಲಿ ಟಿಕೆಟ್ ಓಪನಿಂಗ್ ಆಗಿದೆ. ಮೊದಲ ದಿನ ಟಿಕೆಟ್ ಸಿಕ್ಕಲ್ಲಿ ಅಂದ್ರೆ ಎರಡನೇ ದಿನ ನೋಡಬಹುದು. ಮುಂಬೈನಲ್ಲಿ ಬುಧವಾರ ಅಥವಾ ಗುರುವಾರ ಟಿಕೆಟ್ ಕೌಂಟರ್ ತೆರೆಯಲಿದೆ ಎಂದು ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಿದರು.
ಸತತ ಎರಡು ವರ್ಷಗಳ ಪರಿಶ್ರಮದಿಂದ ಕೆಜಿಎಫ್ ಎಂಬ ಅದ್ಭುತ ಸಿನಿಮಾ ತಯಾರಾಗಿದೆ. ಹಾಗಾಗಿ ಅಭಿಮಾನಿಗಳು ಚಿತ್ರಮಂದಿರದಲ್ಲಿ ಸಿನಿಮಾವನ್ನು ರೆಕಾರ್ಡ್ ಮಾಡಿಕೊಳ್ಳುವುದು ಅಥವಾ ಫೇಸ್‍ಬುಕ್ ಲೈವ್ ಮಾಡಬೇಡಿ. ಪೈರಸಿ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಲು ಚಿತ್ರತಂಡ ಸಿದ್ಧಗೊಂಡಿದೆ. ಇಂದು ಕನ್ನಡದ ಕೆಜಿಎಫ್ ಚಿತ್ರವನ್ನ ಇಡೀ ಭಾರತವೇ ನೋಡುತ್ತಿದೆ. ಹಾಗಾಗಿ ಸಿನಿಮಾವನ್ನ ರೆಕಾರ್ಡ್ ಮಾಡಿಕೊಳ್ಳಬೇಡಿ ಎಂದು ಯಶ್ ಮನವಿ ಮಾಡಿಕೊಂಡರು.
https://www.facebook.com/publictv/videos/2279238428971842/
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv