Cinema

ದುಬೈ ಕಾಫಿಯಲ್ಲಿ ಯಶ್ ಭಾವಚಿತ್ರ

Published

on

Share this

ಬೆಂಗಳೂರು: ರಾಧಿಕಾ, ಯಶ್ ದುಬೈ ಪ್ರವಾಸದಲ್ಲಿ ಇದ್ದಾರೆ. ದಂಪತಿ ಟ್ರಿಪ್ ವೀಡಿಯೋ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಆದರೆ ಒಂದು ವೀಡಿಯೋ ಮಾತ್ರ ಸಖತ್ ಸುದ್ದಿಯಲ್ಲಿದೆ.

ಯಶ್ ದಂಪತಿ ದುಬೈನಲ್ಲಿ ಜಾಲಿಮೂಡ್‍ನಲ್ಲಿದ್ದಾರೆ. ದುಬೈನ ಮಾಲ್‍ವೊಂದರಲ್ಲಿ ಯಶ್ ಹಾಗೂ ರಾಧಿಕಾ ಅಲ್ಲಿನ ವಿಶೇಷ ಖಾದ್ಯಗಳು ಹಾಗೂ ಕಾಫಿ ಸವಿಯುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಈ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಯಶ್, ರಾಧಿಕಾ ದುಬೈ ಟ್ರಿಪ್

ಕಾಫಿ ಕಪ್‍ನಲ್ಲಿ ಯಶ್ ಅವರ ಭಾವಚಿತ್ರ ಇರುವುದು ಸಖತ್ ವಿಶೇಷವಾಗಿದೆ. ದಂಪತಿ ಕಾಫಿ ತುಂಬಿರುವ ಕಪ್‍ಅನ್ನು ನೋಡು ಸಂತೋಷ ಪಟ್ಟಿರುವುದನ್ನು ನಾವು ವೀಡಿಯೋದಲ್ಲಿ ನೋಡಬಹುದಾಗಿದೆ. ಅಭಿಮಾನಗಳು ಮೆಚ್ಚುಗೆ ಸೂಚಿಸಿ ಕಾಮೆಂಟ್ ಮಾಡುತ್ತಿದ್ದಾರೆ. ದೇಶ, ವಿದೇಶಗಳಲ್ಲಿ ಅಭಿಮಾನಿಗಳನ್ನು ಹೊಂದಿರುವ ಯಶ್ ಅವರ ಭಾವ ಚಿತ್ರ ದುಬೈ ಕಾಫಿಯಲ್ಲಿ ಕಾಣಿಸುತ್ತದೆ ಎಂದರೆ ಯಶ್ ಅವರ ಖ್ಯಾತಿ ಎಷ್ಟು ಡೊಡ್ಡದಾಗಿದೆ ಎನ್ನುವುದು ಅರ್ಥ ಮಾಡಿಕೊಳ್ಳಬಹುದಾಗಿದೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪರ್ಸಂಟೇಜ್ ಆರೋಪ – ನನಗೂ, ಪಕ್ಷಕ್ಕೂ ಸಂಬಂಧವಿಲ್ಲದ ವಿಚಾರ ಅಂದ್ರು ಡಿಕೆಶಿ

ಮುಂಬೈನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದ ಯಶ್ ಈಗ ತಮ್ಮ ಮಡದಿ ರಾಧಿಕಾ ಪಂಡಿತ್ ಜೊತೆ ದುಬೈನಲ್ಲಿ ಕಾಣಿಸಿಕೊಂಡಿದ್ದಾರೆ. ರಾಧಿಕಾ ಕೂಡಾ ಇನಸ್ಟಾಗ್ರಾಮ್‍ನಲ್ಲಿ ಕೆಲವು ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ರಾಧಿಕಾ ಪಂಡಿತ್ ಹಾಗೂ ಯಶ್ ಅವರು ದುಬೈಗೆ ಕಾಲಿಡುತ್ತಿದ್ದಂತೆಯೇ ಅಲ್ಲಿನ ಅಧಿಕಾರಿಗಳು ಈ ಜೋಡಿಯನ್ನು ಬರ ಮಾಡಿಕೊಂಡಿದ್ದಾರೆ. ಯಶ್ ಅವರ ಜೊತೆ ಅವರ ಅಭಿಮಾನಿಗಳು ಫೆÇೀಟೋಗಳನ್ನು ತೆಗೆಸಿಕೊಳ್ಳುತ್ತಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಾಧಿಕಾ ನೀಲಿ ಬಣ್ಣದ ಬಟ್ಟೆಯನ್ನು ತೊಟ್ಟು ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ. ಯಶ್ ಹೊಸ ಹೇರ್ ಸ್ಟೈಲ್‍ನಲ್ಲಿ ಖಡಕ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಪರ್ಸಂಟೇಜ್ ಆರೋಪ – ನನಗೂ, ಪಕ್ಷಕ್ಕೂ ಸಂಬಂಧವಿಲ್ಲದ ವಿಚಾರ ಅಂದ್ರು ಡಿಕೆಶಿ

ಮಕ್ಕಳ ಜೊತೆಗೆ ಮಾಲ್ಡೀವ್ಸ್ ಪ್ರವಾಸ ಮಾಡಿದ್ದ ಈ ಜೋಡಿ ಇದೀಗ ದುಬೈಗೆ ಹೋಗಿ ಸುತ್ತಾಡುತ್ತಿದ್ದಾರೆ. ಯಶ್ ಕೆಲವು ದಿನಗಳ ಹಿಂದೆ ಮುಂಬೈ ವಿಮಾನ ನಿಲ್ದಾಣ ಮತ್ತು ಸಲೂನ್‍ವೊಂದರಲ್ಲಿ ಕಾಣಿಸಿಕೊಂಡಿದ್ದರು. ಆಗ ಯಶ್ ಅವರ ಹೇರ್ ಸ್ಟೈಲ್ ಸುದ್ದಿಯಾಗಿತ್ತು. ಯಶ್ ಮುಂಬೈನಲ್ಲಿ ಕಾಣಿಸಿಕೊಂಡಿದ್ದ ವೇಳೆ ಅಭಿಮಾನಿಗಳು ಯಶ್ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು. ಇದನ್ನೂ ಓದಿ: ಪರ್ಸಂಟೇಜ್ ಆರೋಪ – ನನಗೂ, ಪಕ್ಷಕ್ಕೂ ಸಂಬಂಧವಿಲ್ಲದ ವಿಚಾರ ಅಂದ್ರು ಡಿಕೆಶಿ

ಕೆಜಿಎಫ್ ಸಿನಿಮಾದಲ್ಲಿ ಯಶ್ ಉದ್ದ ಕೂದಲು ಮೂಲಕವಾಗಿ ಮಿಂಚಿದ್ದರು. ಅಭಿಮಾನಿಗಳು ಯಶ್ ಅವರ ಉದ್ದ ಗಡ್ಡ, ಕೂದಲಿನ ಸ್ಟೈಲ್ ಇಷ್ಟವಾಗಿತ್ತು. ಇದೀಗ ಕೆಜಿಎಫ್2 ಸಿನಿಮಾದಲ್ಲೂ ಯಶ್ ಅದೇ ಖಡಕ್ ಲುಕ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಬಿಡುಗಡೆಯಾಗಿ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications