ಬೆಂಗಳೂರು: ಇಂದು 2020ರ ಮೊದಲ ದಿನ. ರಾತ್ರಿ 12 ಗಂಟೆಗೇ ಹೊಸ ವರ್ಷವನ್ನು ಎಲ್ಲರೂ ಖುಷಿಯಿಂದ ಬರಮಾಡಿಕೊಂಡಿದ್ದಾರೆ. ಆದರೆ ರಾಕಿಂಗ್ ದಂಪತಿ ಕೊಂಚ ಡಿಫರೆಂಟ್, ಲೇಟ್ ಆದ್ರೂ ಲೇಟೆಸ್ಟ್ ಆಗಿ ತಮ್ಮ ಮುದ್ದು ಮಕ್ಕಳ ಜೊತೆ ಹೊಸ ವರ್ಷದ ಶುಭಕೋರಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮುದ್ದು ಮಗಳು ಐರಾ ಹಾಗೂ ಜೂನಿಯರ್ ಯಶ್ ಜೊತೆಗೆ ಸೇರಿ ಅಭಿಮಾನಿಗಳಿಗೆ ಹೊಸ ವರ್ಷದ ಶುಭಕೋರಿದ್ದಾರೆ. ರಾಧಿಕಾ ಪಂಡಿತ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಕ್ಯೂಟ್ ಫ್ಯಾಮಿಲಿ ಫೋಟೋ ಶೇರ್ ಮಾಡಿಕೊಂಡು ನ್ಯೂ ಇಯರ್ ವಿಶ್ ಮಾಡಿದ್ದಾರೆ.
ನಮ್ಮ ಕುಟುಂಬದ ಕಡೆಯಿಂದ ಎಲ್ಲರಿಗೂ 2020 ಹೊಸ ವರ್ಷದ ಶುಭಾಶಯಗಳು ಎಂದು ಬರೆದು ತಮ್ಮ ಇಬ್ಬರು ಮಕ್ಕಳನ್ನು ದಂಪತಿ ಎತ್ತಿಕೊಂಡಿರುವ ಫೋಟೋವನ್ನು ಹಾಕಿ ರಾಧಿಕಾ ಪಂಡಿತ್ ಪೋಸ್ಟ್ ಮಾಡಿದ್ದಾರೆ. ಕ್ಯೂಟ್ ಫ್ಯಾಮಿಲಿಯ ಸ್ವೀಟ್ ವಿಶ್ ಹಾಗೂ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
https://www.instagram.com/p/B6xg1ukgfYI/
ಅದರಲ್ಲೂ ಫೋಟೋದಲ್ಲಿ ಐರಾಳ ನಗು ಅಭಿಮಾನಿಗಳ ಮನ ಗೆದ್ದಿದೆ. ಯಶ್ ತೋಳಲ್ಲಿ ನಗು ನಗುತ್ತಾ ಫೋಟೋಗೆ ಪೋಸ್ ಕೊಟ್ಟ ಐರಾ ಹಾಗೂ ರಾಧಿಕಾ ತೋಳಲ್ಲಿ ಇದ್ದ ಜ್ಯೂನಿಯರ್ ಯಶ್ ಎಲ್ಲರ ಗಮನ ಸೆಳೆದಿದ್ದಾರೆ. ಲೇಟ್ ಆದ್ರೂ ಲೇಟೆಸ್ಟ್ ಆಗಿ ಹೊಸ ವರ್ಷದ ಶುಭಕೋರಿ ರಾಕಿಂಗ್ ಫ್ಯಾಮಿಲಿ ಅಭಿಮಾನಿಗಳ ಮನ ಕದ್ದಿದ್ದಾರೆ.