– ನನ್ನ ಸೊಸೆ ಆಗುವುದಕ್ಕೂ ಮೊದಲಿನಿಂದಲೂ ರಾಧಿಕಾಗೆ ನಾನು ಅಭಿಮಾನಿ ಎಂದ ಅತ್ತೆ
ಸ್ಟಾರ್ ನಟ ಯಶ್ (Yash) ತಾಯಿ ‘ಕೊತ್ತಲವಾಡಿ’ ಸಿನಿಮಾ ನಿರ್ಮಿಸುವ ಮೂಲಕ ಸ್ಯಾಂಡಲ್‌ವುಡ್‌ಗೆ ನಿರ್ಮಾಪಕಿಯಾಗಿ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರದ ಟೀಸರ್ ಲಾಂಚ್‌ನಲ್ಲಿ ಮಗ ಯಶ್ ಮತ್ತು ಸೊಸೆ ರಾಧಿಕಾ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ, ಕಥೆ ಆಯ್ಕೆ ಮಾಡೋದ್ರಲ್ಲಿ ಯಶ್‌ಗಿಂತ (Yash) ರಾಧಿಕಾ ಕಿಲಾಡಿ ಎಂದು ಪುಷ್ಪ ಅರುಣ್ ಕುಮಾರ್ (Pushpa Arun Kumar) ಹೇಳಿದ್ದಾರೆ. ಇದನ್ನೂ ಓದಿ:ಯಶ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ದಾಂಪತ್ಯದ ಪಾಠ ಹೇಳಿದ ರಾಧಿಕಾ ಪಂಡಿತ್
‘ಕೊತ್ತಲವಾಡಿ’ ಸಿನಿಮಾದ ಟೀಸರ್ ಲಾಂಚ್‌ನಲ್ಲಿ ಯಶ್ ತಾಯಿ ರಾಧಿಕಾ ಪಂಡಿತ್ (Radhika Pandit) ಕಥೆ ಆಯ್ಕೆ ಮಾಡೋದ್ರಲ್ಲಿ ಎಷ್ಟು ಸೆಲೆಕ್ಟಿವ್ ಎಂದು ರಿವೀಲ್ ಮಾಡಿದ್ದಾರೆ. ನನ್ನ ಮಗಳಾಗಲಿ ಅಥವಾ ಮಗನಿಗೂ ಈ ಬಗ್ಗೆ ಗೊತ್ತಿರಲಿಲ್ಲ. ನಾನು ಹೊಸದಾಗಿ ಚಿಕ್ಕ ಪ್ರಯತ್ನ ಮಾಡುತ್ತಿದ್ದೇನೆ. ನಮ್ಮ ರಾಧಿಕಾ ತುಂಬಾ ಚೆನ್ನಾಗಿ ಕಥೆ ಸೆಲೆಕ್ಟ್ ಮಾಡುತ್ತಾಳೆ. ಕಥೆ ಆಯ್ಕೆ ಮಾಡೋದರಲ್ಲಿ ರಾಧಿಕಾ ಯಶ್‌ಗಿಂತಲೂ ಕಿಲಾಡಿ. ನನ್ನ ಸೊಸೆ ಆಗುವುದಕ್ಕೂ ಮೊದಲಿನಿಂದಲೂ ನಾನು ರಾಧಿಕಾಗೆ ಫ್ಯಾನ್. ಕಥೆ ವಿಚಾರದಲ್ಲಿ ತುಂಬಾ ಚೆನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾಳೆ. ಆ ವಿಚಾರದಲ್ಲಿ ನಾನು ಅವಳಿಂದ ಕಲಿಯಬೇಕಾಗಿರೋದು ತುಂಬಾ ಇದೆ ಎಂದು ಸೊಸೆ ರಾಧಿಕಾ ಬಗ್ಗೆ ಪುಷ್ಪ ಅವರು ಹೊಗಳಿದ್ದಾರೆ. ಇದನ್ನೂ ಓದಿ:ಯಶ್ ತಾಯಿ ನಿರ್ಮಾಣದ ‘ಕೊತ್ತಲವಾಡಿ’ ಚಿತ್ರದ ಟೀಸರ್ ಔಟ್- ಸಾಥ್ ಕೊಟ್ಟ ನಟ ಶರಣ್
ಯಶ್ ಅವರು ಈಗಾಗಲೇ ಒಂದು ಮಾನ್‌ಸ್ಟರ್ ಕ್ರಿಯೇಷನ್ಸ್ ಬ್ಯಾನರ್ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿದ್ದಾರೆ. ಈ ಕಡೆ ಅವರ ತಾಯಿ ಪುಷ್ಪ ಅವರು ಕೂಡ ಪಿಎ ಪ್ರೊಡಕ್ಷನ್ಸ್ ಶುರು ಮಾಡಿದ್ದಾರೆ. ಎರೆಡೆರೆಡು ಪ್ರೊಡಕ್ಷನ್ ಹೌಸ್ ಯಾಕೆ ಎಂಬುದರ ಬಗ್ಗೆ ಪುಷ್ಪ ಮಾತನಾಡಿ, ಎಲ್‌ಐಸಿಯಲ್ಲಿ ನಿಮ್ಮ ಹಣವನ್ನು ನೀವೆ ಪಾವತಿಸಬೇಕು. ಗಂಡನ ಅಕೌಂಟ್‌ನಿಂದ ಹಣ ಕೊಡುತ್ತೇವೆ ಅಂತಂದರೆ ಎಲ್‌ಐಸಿ ಒಪ್ಪಿಕೊಳ್ಳುವುದಿಲ್ಲ. ಅದನ್ನು ರಿಜೆಕ್ಟ್ ಮಾಡುತ್ತದೆ. ಆಗ ಮಗ ಬೇರೆ, ಗಂಡ ಬೇರೆ, ಮಗಳು ಬೇರೆ, ಸಂಪಾದನೆ ಎಲ್ಲರದ್ದೂ ಬೇರೆ ಬೇರೆ ಅನ್ನೋ ಪಾಠವನ್ನು ಆಗಲೇ ನಾನು ಕಲಿತದ್ದು. ಯಶ್ ದುಡಿಯುತ್ತಿರುವುದು ಅವನ ಸಾಮರ್ಥ್ಯದಿಂದ, ಹಾಗಂತ ಯಶ್ ಅವರ ಅಮ್ಮ ಎಂದು ನನಗೆ ಎಷ್ಟು ದಿನ ಗೌರವ ಕೊಡುತ್ತೀರಾ? ನಿರ್ಮಾಪಕಿಯಾದ ಮೇಲೆ ನನ್ನದೇ ಒಂದು ಸ್ಥಾನವಿರುತ್ತದೆ ಎಂದಿದ್ದಾರೆ ಯಶ್ ತಾಯಿ.
‘ಕೊತ್ತಲವಾಡಿ’ ಚಿತ್ರದ ಟೀಸರ್ ನಿರೀಕ್ಷೆಗಿಂತಲೂ ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಇಷ್ಟು ದಿನ ರೋಸ್ ಹಿಡಿಯುತ್ತಿದ್ದ ಪೃಥ್ವಿ ಈಗ ಕಂಪ್ಲೀಟ್ ರಗಡ್ ಹಾಗೂ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ಕ್ವಾಲಿಟಿ ಚೆನ್ನಾಗಿದೆ. ಕೊತ್ತಲವಾಡಿ ಎಂಬ ಹಳ್ಳಿಯಲ್ಲಿ ನಡೆಯುವ ಕಥೆಯನ್ನು ನಿರ್ದೇಶಕ ಶ್ರೀರಾಜ್ ಹೇಳೋದಿಕ್ಕೆ ಹೊರಟಿದ್ದಾರೆ. ವಿಕಾಸ್ ವಸಿಷ್ಠ ಅವರು ಸಂಗೀತ, ಅಭಿನಂದನ್ ಕಶ್ಯಪ್ ಹಿನ್ನೆಲೆ ಸಂಗೀತ ಟೀಸರ್ ಹೈಲೆಟ್.
ಹಿರಿಯ ನಿರ್ದೇಶಕರಾದ ಕೆವಿ ರಾಜು, ರವಿಶ್ರೀವತ್ಸ ಗರಡಿಯಲ್ಲಿ ಕೆಲಸ ಮಾಡಿರುವ ಶ್ರೀರಾಜ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೆಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಕನ್ನಡದ ಪ್ರತಿಭಾನ್ವಿತ ನಾಯಕ ಪೃಥ್ವಿ ಅಂಬರ್ ನಾಯಕನಾಗಿ ನಟಿಸುತ್ತಿದ್ದು, ಕಿರುತೆರೆ ನಟಿ ಕಾವ್ಯಾ ಶೈವ ನಾಯಕಿಯಾಗಿ ನಟಿಸುತ್ತಿದ್ದಾರೆ. ಪಿಎ ಪ್ರೊಡಕ್ಷನ್ಸ್ ಪ್ರಮುಖ ಉದ್ದೇಶ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕೆಂಬ ನಿಟ್ಟಿನಲ್ಲಿ ಪುಷ್ಪ ಅರುಣ್ ಕುಮಾರ್ ನಿರ್ಮಾಣ ಸಂಸ್ಥೆಯನ್ನು ಹುಟ್ಟಾಕಿದ್ದಾರೆ. ಅದರಂತೆ ಕೊತ್ತಲವಾಡಿ ಚಿತ್ರದಲ್ಲಿಯೂ ಹೊಸ ಪ್ರತಿಭೆಗಳಿಗೆ ಅವಕಾಶ ದೊರೆತಿದೆ. ಯುವ ನಿರ್ದೇಶಕರ ಜೊತೆಗೆ ಹಿನ್ನೆಲೆ ಸಂಗೀತ ಕೊಟ್ಟಿರುವ ಅಭಿನಂದನ್ ಕಶ್ಯಪ್, ಸಾಹಸ ನಿರ್ದೇಶಕ ಸಾಗರ್ ಕೂಡ ಹೊಸಬರೇ.
ಕಾರ್ತಿಕ್ ಎಸ್ ಕ್ಯಾಮೆರಾ ಕೈಚಳಕ, ರಾಮಿಸೆಟ್ಟಿ ಪವನ್ ಸಂಕಲನ, ವಿಕಾಸ್ ವಸಿಷ್ಠ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ, ಡಾ.ವಿ.ನಾಗೇಂದ್ರ ಪ್ರಸಾದ್, ಕಿನ್ನಾಳ್ ರಾಜ್ ಹಾಗೂ ಪ್ರಮೋದ್ ಮರವಂತೆ, ಗೌಸ್ ಪಿರ್ ಸಾಹಿತ್ಯ ‘ಕೊತ್ತಲವಾಡಿ’ ಸಿನಿಮಾಗೆ ಇದೆ.