ಕೆಜಿಎಫ್ ಸಿನಿಮಾದ ನಂತರ ಯಶ್ ನಡೆ ಏನು ಎನ್ನುವುದು ಈವರೆಗೂ ಕುತೂಹಲಕಾರಿಯಾಗಿಯೇ ಉಳಿದುಕೊಂಡಿದೆ. ಕೆಜಿಎಫ್ 2 ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿರುವ ರಾಕಿ ಭಾಯ್, ಮುಂದೆ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವುದೂ ಕೂಡ ಸಸ್ಪೆನ್ಸ್. ಕನ್ನಡದಲ್ಲಿ ಈಗಾಗಲೇ ಒಂದು ಸಿನಿಮಾದ ಹೆಸರು ಓಡಾಡುತ್ತಿದ್ದರೆ ತಮಿಳು, ತೆಲುಗು ಮತ್ತು ಬಾಲಿವುಡ್ ನಲ್ಲೂ ಸಿನಿಮಾ ಮಾಡಲಿದ್ದಾರೆ ಎಂದೂ ಸುದ್ದಿ ಆಗಿದೆ. ಹಾಗಾಗಿ ಯಶ್ ಅವರ ಮುಂದಿನ ಸಿನಿಮಾಗಳ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ.
ಯಶ್ ಅವರ ಆಪ್ತರ ಪ್ರಕಾರ ಈಗಾಗಲೇ ಅವರಿಗಾಗಿ ನಾಲ್ಕು ಸಿನಿಮಾಗಳು ಕಾಯುತ್ತಿವೆಯಂತೆ. ಅಲ್ಲಿಗೆ ಬರೋಬ್ಬರಿ ಐದು ವರ್ಷಗಳ ಕಾಲ ಯಶ್ ಬುಕ್ ಆಗಿದ್ದಾರೆ ಎನ್ನುವ ಸುದ್ದಿಯೂ ಇದೆ. ಈ ನಾಲ್ಕು ಸಿನಿಮಾಗಳು ಯಾವಾಗೆಲ್ಲ ಬರಬೇಕು ಎನ್ನುವುದು ಕೂಡ ಪಕ್ಕಾ ರೆಡಿಯಾಗಿದೆಯಂತೆ. ಹಾಗಾಗಿ, ಯಶ್ ಯಾವುದೇ ಕಾರಣಕ್ಕೂ ಅವಸರ ಮಾಡುತ್ತಿಲ್ಲವಂತೆ. ಪಕ್ಕಾ ಪ್ಲ್ಯಾನ್ ಜೊತೆಗೆ ಅವರು ಮುಂದಿನ ನಡೆಯನ್ನು ಇಡಲಿದ್ದಾರಂತೆ. ಇದನ್ನೂ ಓದಿ:ತೆಲುಗಿನ ಮಹೇಶ್ ಬಾಬುಗೆ ತಂದೆಯಾಗಿ ನಟಿಸ್ತಾರಾ ರಿಯಲ್ ಸ್ಟಾರ್ ಉಪೇಂದ್ರ
ಮೊದಲು ಕನ್ನಡದಲ್ಲೇ ಸಿನಿಮಾ ಮಾಡಲಿದ್ದು, ಈ ಚಿತ್ರಕ್ಕೆ ನರ್ತನ್ ನಿರ್ದೇಶನವಿದೆ. ಬಹುತೇಕ ಸ್ಕ್ರಿಪ್ಟ್ ಕೂಡ ರೆಡಿಯಿದೆಯಂತೆ. ಮೊದಲು ಇದೇ ಸಿನಿಮಾದಲ್ಲಿ ನಟಿಸಲಿದ್ದಾರಂತೆ ಯಶ್. ನಂತರ ದಿಲ್ ರಾಜುಗಾಗಿ ಒಂದು ಸಿನಿಮಾವನ್ನು ಮಾಡಲಿದ್ದಾರಂತೆ. ಈ ಎರಡೂ ಸಿನಿಮಾಗಳು ಮುಗಿದ ನಂತರ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಗಾಗಿ ಯಶ್ ಸಿನಿಮಾ ಮಾಡಲಿದ್ದಾರಂತೆ. ಈ ಮೂರು ಸಿನಿಮಾಗಳ ನಂತರ ಕೆಜಿಎಫ್ 3 ಸಿನಿಮಾ ಬರಲಿದೆ ಎನ್ನುವುದು ಸದ್ಯಕ್ಕಿರುವ ಮಾಹಿತಿ.