ಕಳೆದ ಒಂದು ವರ್ಷದಿಂದ ಸುದ್ದಿ ಮಾಡುತ್ತಿದೆ. ಅವರ್ ಬಿಟ್ ಇವರ್ ಬಿಟ್ ಇನ್ಯಾರ್ ಎನ್ನುವ ಹಂತಕ್ಕೆ ಬಂದು ಹೋಗಿ ಬಹಳ ತಿಂಗಳಾದವು. ಈಗ ನಿರ್ದೇಶಕರು ಪಕ್ಕಾ ಆಗಿದ್ದಾರೆ. ಸಕಲ ತಂತ್ರಜ್ಞರೂ ಯುದ್ಧಕ್ಕೆ ಹೊರಡಲು ಸಿದ್ದರಾಗಿದ್ದಾರೆ. ಕ್ಯಾಮೆರಾ ಆನ್ ಆಗಲು ಚಡಪಡಿಸುತ್ತಿದೆ. ಇಷ್ಟಿದ್ದರೂ ಹೀಗಿದ್ದರೂ ಯಶ್ (Yash) ಮಾತ್ರ ಇನ್ ಸೈಲೆಂಟ್ ಮೋಡ್. ದಸರಾ ಹೊತ್ತಿಗೆ ಹೊಸ ಸಿನಿಮಾ ಘೋಷಣೆ ಎನ್ನಲಾಗಿತ್ತು. ಅದು ಹೋಯಿತು. ದೀಪಾವಳಿಗೆ ಪಕ್ಕಾ ಎಂದರು. ಇಲ್ಲ…ಅದಕ್ಕೂ ಕಲ್ಲು ಬಿದ್ದಿದೆ. ಭಕ್ತಗಣ ಕೊತಕೊತ ಕುದಿಯುತ್ತಿದೆ. ಯಾವಾಗ ಸಿನಿಮಾ ಎನ್ನುತ್ತಾ ಧರಣಿ ಮಾಡಲು ಸಜ್ಜಾಗಿದೆ.
Advertisement
ದೀಪಾವಳಿ (Deepavali) ಹಬ್ಬಕ್ಕೆ ಟೈಟಲ್ ಅನೌನ್ಸ್ಮೆಂಟ್ ಫಿಕ್ಸ್ ಆಗಿದ್ದು ನಿಜವಾ ಅಥವಾ ಅವರವರೇ ಅಂದುಕೊಂಡಿದ್ದಾ ಎಲ್ಲವೂ ನಿಗೂಢ. ಈಗಾಗಲೇ ಕತೆ, ಚಿತ್ರಕತೆ, ಸಂಭಾಷಣೆ ಸಹಿತ ಸಕಲವೂ ಪೇಪರ್ ಮೇಲೆ ಬಂದು ಕುಳಿತಿದೆ. ಅದಕ್ಕೆ ಆಕ್ಷನ್ ಕಟ್ ಹೇಳಲು ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ತಯಾರಾಗಿದ್ದಾರೆ. ಮೊಟ್ಟ ಮೊದಲ ಬಾರಿಗೆ ಕಮರ್ಶಿಯಲ್ ಸಿನಿಮಾ, ಅದೂ ಯಶ್ ಜೊತೆ ? ಹುಡುಗಾಟವಾ ? ಅದಕ್ಕಾಗಿ ಎಲ್ಲರನ್ನೂ ಸಂಭಾಳಿಸುತ್ತಾ…ಅಖಾಡಕ್ಕೆ ಇಳಿಯಲು ತುದಿಗಾಲಲ್ಲಿ ನಿಂತಿದ್ದಾರೆ. ಇತ್ತ ಯಶ್ ಮಾತ್ರ ವಿದೇಶ ಸುತ್ತುತ್ತಿದ್ದಾರೆ. ಅದೇ ಯಾಕಾಗಿ ? ಪ್ರಶ್ನೆ ಹುಟ್ಟಿದೆ. ಉತ್ತರ ಕೊಡಲು ಯಶ್ ತಯಾರಿಲ್ಲ.
Advertisement
Advertisement
ಈಗ ಎಲ್ಲಿದ್ದಾರೆ ಯಶ್ ? ಹುಡುಕಾಡುತ್ತಿದೆ ಅವರ ಭಕ್ತಗಣ. ಬೆಂಗಳೂರು ಮನೆಯಲ್ಲಿದ್ದಾರಾ ? ಮೊನ್ನೆ ಮೊನ್ನೆ ಗೋವಾಕ್ಕೆ ಹೋಗಿ ಬಂದಿದ್ದರು. ಅದಾದ ಮೇಲೆ ವಿದೇಶದಲ್ಲಿ ಕೆಲವು ದಿನ ನೆಲೆ ನಿಂತಿದ್ದರು. ಕೆಲವು ತಂತ್ರಜ್ಞರ ಜೊತೆ ಅಲ್ಲಿಗೆ ಹೋಗಿ ಸಿನಿಮ ತಯಾರಿ ಮಾಡಿಕೊಂಡು ಬಂದಿದ್ದಾರೆ. ಹಾಲಿವುಡ್ ತಂತ್ರಜ್ಞರ ಚರ್ಚೆ ಮಾಡಿದ್ದಾರೆ. ಅದ್ಯರ‍್ಯಾರು ಯಶ್ ಸಿನಿಮಾಕ್ಕೆ ಕೈ ಜೋಡಿಸಲಿದ್ದಾರೆ ? ಅದಕ್ಕೂ ಉತ್ತರ ಇಲ್ಲ. ಇದೀಗ ಯಶ್ ನಾಪತ್ತೆಯಾಗಿದ್ದಾರೆ ಎನ್ನುತ್ತಿದೆ ಅವರ ಭಕ್ತಗಣ. ಮುಂದೇನು ಮಾಡಬೇಕೆಂದು ತಿಳಿಯದೆ ಒದ್ದಾಡುತ್ತಿದೆ. ಅಂತಿಮವಾಗಿ ಯಶ್ ಕಾಣೆಯಾಗಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಮುನಿಸಿಕೊಂಡಿದ್ದಾರೆ.
Advertisement
ಈಗ ಹೇಳುವುದಕ್ಕೂ ಕೇಳುವುದಕ್ಕೂ ಏನು ಉಳಿದಿಲ್ಲ. ಎಲ್ಲವೂ ಯಶ್ ಮಾತಿನ ಮೇಲೆ ನಿಂತಿದೆ. ಎಲ್ಲವೂ ಅವರೇ ಹೇಳಬೇಕು. ಅವರೇ ಇಂಚಿಂಚಾಗಿ ಹರವಿಡಬೇಕು. ಯಾಕೆ ಲೇಟಾಯಿತು ? ಯಾವ ಸಿನಿಮಾವನ್ನು ಕೊಡುತ್ತಿದ್ದೇವೆ ? ಯಾವ ರೀತಿ ಜನರ ಮನಸನ್ನು ರಂಜಿಸಲಿದ್ದೇವೆ ? ಹೇಗಿರಲಿದೆ ನಯಾ ಸಿನಿಮಾ ? ಅದರ ಮಾಹಿತಿ ನೀಡಲು ಬಹುಶಃ ಇದೇ ವರ್ಷದ ಕೊನೆಯಲ್ಲಿ ವೇದಿಕೆ ಏರಲಿದ್ದಾರೆ ಯಶ್. ಡಿಸೆಂಬರ್…ಅದು ಯಶ್‌ಗೆ ಲಕ್ಕಿ ತಿಂಗಳು. ಬಹುಶಃ ಅದೇ ತಿಂಗಳಲ್ಲಿ ಮಹಾ ಘೋಷಣೆ ನಡೆಯಲಿದೆ. ಅಲ್ಲಿವರೆಗೆ ಸುಮ್ಮನಿರದೆ ಬೇರೆ ದಾರಿ ಇಲ್ಲ. ಏನಾದರಾಗಲಿ, ಸಬರ್ ಕಾ ಫಲ್ ಮೀಠಾ ಹೋತಾ ಹೈ ಅಂತಾರಲ್ಲ. ಹಾಗೆ ಕಾದು ಕಾದು ಉಂಡರೆ ಕಲ್ಲಂಗಡಿ ಹಣ್ಣು ಪಕ್ಕಾ. ವೇಟ್.