ಕನ್ನಡ ಸಿನಿ ರಂಗದ ಕೀರ್ತಿ ಪತಾಕೆಯನ್ನ ವಿಶ್ವಮಟ್ಟದಲ್ಲಿ ಹಾರಿಸಿದ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರಿಂದು 40ನೇ ವರ್ಷದ ಹುಟ್ಟುಹಬ್ಬ (Yash Birthday) ಸಂಭ್ರಮದಲ್ಲಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಸದ್ಯ ಕನ್ನಡ ಚಿತ್ರರಂಗ ಅಲ್ಲದೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟ. ಜನವರಿ 8ರ ಈ ದಿನವನ್ನು ಯಶ್ ಅಭಿಮಾನಿಗಳು (Yash Fans) ಹಬ್ಬದಂತೆ ಆಚರಿಸುತ್ತಿದ್ದಾರೆ. ಅದರಂತೆ, ಸಾಮಾಜಿಕ ಜಾಲತಾಣಗಳಲ್ಲಿ ಯಶ್ ಅವರ ಹೊಸ ಸಿನಿಮಾಗಳ ಪೋಸ್ಟರ್, ಡೈಲಾಗ್ ರೀಲ್ಸ್ ಮತ್ತು ಕಾಮನ್ ಡಿಪಿಗಳನ್ನು ಹಂಚಿಕೊಳ್ಳುವ ಮೂಲಕ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಈ ವಿಶೇಷ ದಿನಕ್ಕೆ ಕೆಲವೇ ಕ್ಷನಗಳಿಗೂ ಮೊದಲೇ ಅಭಿಮಾನಿಗಳಿಗೆ ʻರಾಮಾಚಾರಿʼ ಒಂದು ಸಂದೇಶ ನೀಡಿದ್ದಾರೆ. ಈ ಸಲವೂ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ.. ಬದಲಾಗಿ ಟಾಕ್ಸಿಕ್ ಸಿನಿಮಾದ ದೊಡ್ಡ ಸಂಭ್ರಮವನ್ನು ಮಾರ್ಚ್ 19 ರಂದು ಜೊತೆಯಾಗಿ ಆಚರಿಸೋಣವೆಂದು ಯಶ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಕಹಿ ಘಟನೆ ನಡೆಯದಿರಲಿ
2024ರಂದು ಗದಗ ಜಿಲ್ಲೆಯ ಸುರನಗಿ ಗ್ರಾಮದಲ್ಲಿ ಅಭಿಮಾನಿಗಳು ಬ್ಯಾನರ್ ಕಟ್ಟುವ ಸಂದರ್ಭದಲ್ಲಿ ವಿದ್ಯುತ್ ತಗುಲಿ ಮೂವರು ಅಭಿಮಾನಿಗಳು ಮೃತಪಟ್ಟಿದ್ದರು. ಈ ಘಟನೆಯ ಬಳಿಕ ಅಭಿಮಾನಿಗಳ ಜೊತೆ ಯಶ್ ತಮ್ಮ ಹುಟ್ಟುಹಬ್ಬ ಆಚರಿಕೊಳ್ಳದಿರಲು ನಿರ್ಧರಿಸಿದ್ದು, ಕಳೆದ ವರ್ಷ ಕೂಡ ಯಶ್ ಅಭಿಮಾನಿಗಳಿಗೆ ಸಿಕ್ಕಿರಲಿಲ್ಲ. ಈ ಬಾರಿ ನನ್ನ ಟಾಕ್ಸಿಕ್ ಸಿನಿಮಾದ ಟೀಸರ್ ಅನ್ನು ಸಂಭ್ರಮಿಸೋಣ ಎಂದಿದ್ದಾರೆ.
ಇನ್ನೂ ಯಶ್ ಅವರು ಕೊನೆಯದಾಗಿ ತೆರೆಮೇಲೆ ಕಾಣಿಸಿಕೊಂಡಿದ್ದು 2022ರ ಏಪ್ರಿಲ್‌ನಲ್ಲಿ. ಇದೀಗ ಬಹು ನಿರೀಕ್ಷೆಯ ಟಾಕ್ಸಿಕ್ ಚಿತ್ರ ಇದೇ ಮಾರ್ಚ್ನಲ್ಲಿ ಬಿಡುಗಡೆ ಆಗಲಿದ್ದು, ಈಗಾಗಲೇ ಈ ಚಿತ್ರದಲ್ಲಿ ಅಭಿನಯಿಸಿರುವ ಪಾತ್ರಗಳ ಪೋಸ್ಟರ್ ಅನ್ನು ಚಿತ್ರತಂಡ ರಿವೀಲ್ ಮಾಡುತ್ತಾ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚು ಮಾಡುತ್ತಿದೆ. ಮತ್ತೊಂದು ಕಡೆ ನಾಲ್ಕು ವರ್ಷಗಳ ನಂತರ ಯಶ್ ಅವರು ತೆರೆಮೇಲೆ ಕಾಣಿಸಿಕೊಳ್ಳಲಿದ್ದು ದೊಡ್ಡ ಮಟ್ಟದ ಕ್ರೇಜ್ ಹುಟ್ಟಿಸಿದೆ.





