ಕೆಜಿಎಫ್ (KGF) ಖ್ಯಾತಿಯ ಛಾಯಾಗ್ರಾಹಕ ಭುವನ್ ಗೌಡಗೆ (Bhvan Gowda) ಕಂಕಣ ಬಲ ಕೂಡಿಬಂದಿದೆ. ನಿಖಿತಾ ಹೆಸರಿನ ಹುಡುಗಿ ಜೊತೆ ಭುವನ್ ಮದುವೆ ನಡೆದಿದೆ. ಬೆಂಗಳೂರು ಹೊರವಲಯದ ಖಾಸಗಿ ರೆಸಾರ್ಟ್‌ನಲ್ಲಿ ಮದುವೆ ನಡೆದಿದ್ದು ಯಶ್ (Yash), ಶ್ರೀಲೀಲಾ, ಶ್ರೀನಿಧಿ ಶೆಟ್ಟಿ, ಗರುಡ ರಾಮ್, ಪ್ರಶಾಂತ್ ನೀಲ್ ಹಾಗೂ ನಟಿ ಆಶಾ ಭಟ್ ಸೇರಿದಂತೆ ಹಲವು ನಟ, ನಟಿಯರು ಮದುವೆಯಲ್ಲಿ ಉಪಸ್ಥಿತರಿದ್ರು.
ಪ್ರಶಾಂತ್ ನೀಲ್ ಗರಡಿಯಲ್ಲಿ ಹೆಸರು ಮಾಡಿರುವ ಭುವನ್ ಗೌಡ ಸ್ಟಿಲ್ ಫೋಟೋಗ್ರಾಫರ್ ಆಗಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟವರು. ಇದೀಗ ವೃತ್ತಿಯ ಮಧ್ಯೆ ವೈಯಕ್ತಿಕ ಬದುಕಿಗೂ ಸಮಯ ಕೊಟ್ಟು ಮದುವೆಯಾಗಿದ್ದಾರೆ. ಕೆಲವೇ ಕೆಲವು ಆಪ್ತರನ್ನ ಭುವನ್ ಆಹ್ವಾನಿಸಿದ್ದರು ಎಂದು ಕೇಳಿಬಂದಿದೆ. ಪ್ರಾಥಮಿಕ ಮೂಲಗಳ ಪ್ರಕಾರ ಭುವನ್ ಕೈಹಿಡಿದ ಹುಡುಗಿ ಸಿನಿಮಾ ಇಂಡಸ್ಟ್ರಿಗೆ ಸಂಬಂಧಿಸಿದವರಲ್ಲ.
ಉಗ್ರಂ ಚಿತ್ರದ ಮೂಲಕ ಪೂರ್ಣ ಪ್ರಮಾಣದ ಛಾಯಾಗ್ರಾಹಕರಾದ ಭುವನ್ ಗೌಡ ಮೊದಲ ಚಿತ್ರದಲ್ಲೇ ಸೈ ಎನ್ನಿಸಿಕೊಂಡ್ರು. ಬಳಿಕ ಕೆಜಿಎಫ್ ಸರಣಿ ಚಿತ್ರದ ಮೂಲಕ ವಿಶ್ವಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಬಳಿಕ ಸಲಾರ್ ಇದೀಗ ಜೂ.ಎನ್‌ಟಿಆರ್ ಡ್ರಾö್ಯಗನ್ ಚಿತ್ರಕ್ಕೂ ಇವರೇ ಛಾಯಾಗ್ರಾಹಕರು.


