ಮುಂಬೈ: ಬಾಲಿವುಡ್ ನಟಿ ಯಾಮಿ ಗೌತಮಿ ಪೋಲ್ ಡ್ಯಾನ್ಸ್ ಮಾಡಿದ್ದು, ಈಗ ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಯಾಮಿ ಗೌತಮಿ ಆರಿಫಾ ಬಿಂದ್ರೆವಾಲಾ ಅವರ ಪೋಲ್ ನೃತ್ಯ ತರಗತಿಗೆ ಸೇರಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಗೌತಮಿ ಪೋಲ್ ಡ್ಯಾನ್ಸ್ ವಿಡಿಯೋ ಹರಿದಾಡುತ್ತಿದೆ. ಈ ಪೋಲ್ ಡ್ಯಾನ್ಸ್ ನೋಡಿ ಎಲ್ಲರೂ ಬೆರಗಾಗಿದ್ದು, ಎಲ್ಲರೂ ತಾವು ನೋಡಿ ಆ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ.
Advertisement
ತನ್ನ ಪೋಲ್ ಡ್ಯಾನ್ಸ್ ವಿಡಿಯೋವನ್ನು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು 5 ಲಕ್ಷಕ್ಕೂ ಹೆಚ್ಚು ವ್ಯೂ ಕಂಡಿದೆ. ಫಿಟ್ನೆಸ್ ಮತ್ತು ನೃತ್ಯವನ್ನು ನಾನು ತುಂಬಾ ಪ್ರೀತಿಸುತ್ತೀನಿ. ಡ್ಯಾನ್ಸ್ ಅನ್ನು ಯಾವಾಗಲೂ ಆನಂದಿಸುತ್ತೇನೆ. ಪೋಲ್ ಡ್ಯಾನ್ಸ್ ನಮ್ಮ ಫಿಟ್ನೆಸ್ ಸಾಮರ್ಥ್ಯ ಮತ್ತು ನೃತ್ಯದ ಮೇಲೆ ಕಾರ್ಯನಿರ್ವಹಿಸುವ ಉತ್ತಮ ಮಾರ್ಗವಾಗಿದೆ. ಅಷ್ಟೇ ಅಲ್ಲದೇ ಪೋಲ್ ಡ್ಯಾನ್ಸ್ ಮಾಡಿ ತನ್ನ ನೃತ್ಯ ಸಾಮರ್ಥ್ಯ ವನ್ನು ತೋರಿಸಿದ್ದಾರೆ. ಪೋಲ್ ಡ್ಯಾನ್ಸ್ ಮಾಡುವುದರಿಂದ ತುಂಬ ಫಿಟ್ ಆಗಿ ಇರಬಹುದು ಎಂದು ಯಾಮಿ ಗೌತಮಿ ಹೇಳಿದ್ದಾರೆ.
Advertisement
Advertisement
ಯಾಮಿ ಗೌತಮಿ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ತಮ್ಮ ದೇಹದ ಬಗ್ಗೆ ಹೆಚ್ಚು ಕೇರ್ ತಗೆದುಕೊಳ್ಳುವ ಈ ನಟಿ ಆದಷ್ಟು ಸಮಯವನ್ನು ಜಿಮ್ ನಲ್ಲಿ ಕಳೆಯುತ್ತಾರೆ. ಜಿಮ್ ನಲ್ಲಿ ವರ್ಕೌಟ್ ಮಾಡಿ ಫಿಟ್ನೆಸ್ ಆಗಿರುವ ಯಾಮಿ ಇದೀಗ ಪೋಲ್ ಡ್ಯಾನ್ಸ್ ಮಾಡಿದ್ದಾರೆ.
Advertisement
ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾ ಮಾಡಿರುವ ಯಾಮಿ ಗೌತಮಿ ಕನ್ನಡದಲ್ಲಿ ಗಣೇಶ್ ಜೊತೆಗೆ ‘ಉಲ್ಲಾಸ ಉತ್ಸಾಹ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
https://www.instagram.com/p/Bg6FAaznX_M/?taken-by=yamigautam