ಉಡುಪಿ: ರಂಗದಲ್ಲೇ ಕುಸಿದು ಯಕ್ಷಗಾನ ಕಲಾವಿದ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಜೋಗಿಬೆಟ್ಟು ಗ್ರಾಮದಲ್ಲಿ ನಡೆದಿದೆ.
ಬಡಗು ತಿಟ್ಟಿನ ಖ್ಯಾತ ಕಲಾವಿದ ಉತ್ತರ ಕನ್ನಡ ಮೂಲದ ಹುಡುಗೋಡು ಚಂದ್ರಹಾಸ ಮೃತ ಯಕ್ಷಗಾನ ಪಾತ್ರಧಾರಿ. ಭಾನುವಾರ ರಾತ್ರಿ ಜೋಗಿಬೆಟ್ಟು ಗ್ರಾಮದಲ್ಲಿ ಜಳವಳ್ಳಿ ಮೇಳದ ಭೀಷ್ಮವಿಜಯ ಪ್ರಸಂಗ ನಡೆಯುತ್ತಿತ್ತು.
Advertisement
ಈ ಪ್ರಸಂಗದಲ್ಲಿ ಚಂದ್ರಹಾಸ ಸಾಲ್ವನ ಪಾತ್ರದಲ್ಲಿ ಅಭಿನಯಿಸುತ್ತಿದ್ದರು. ಆದ್ರೆ ರಂಗಸ್ಥಳದಲ್ಲಿ ಅಭಿನಯಿಸುತ್ತಿರುವಾಗಲೇ ಚಂದ್ರಹಾಸ ಅವರಿಗೆ ಹೃದಯಾಘಾತ ಸಂಭವಿಸಿದೆ. ಸಂಭಾಷಣೆ ಮುಗಿಸಿ ಕುಣಿತ ಆರಂಭಿಸುತ್ತಿದ್ದಂತೆ ಹಾರ್ಟ್ ಅಟ್ಯಾಕ್ ಆಗಿದೆ.
Advertisement
Advertisement
ಎಲ್ಲರೂ ನೋಡನೋಡುತ್ತಿದ್ದಂತೆ ಚಂದ್ರಹಾಸ್ ರಂಗಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಆ ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆಯಿತದಾದರೂ ಪ್ರಯೋಜನವಾಗಿಲ್ಲ.
Advertisement
ಚಂದ್ರಹಾಸ್ ಈ ಹಿಂದೆ ಪೆರ್ಡೂರು, ಸಾಲಿಗ್ರಾಮ ಮೇಳದಲ್ಲಿ ಕಲಾವಿದ ಆಗಿದ್ದರು. ಮೂರು ವರ್ಷದ ಹಿಂದೆ ಮೇಳವನ್ನು ಬಿಟ್ಟಿದ್ದರು. ಸದ್ಯ ಸ್ಥಳೀಯ ಪಂಚಾಯತ್ ಸದಸ್ಯ ಆಗಿದ್ದರು. ಭಾನುವಾರ ಜಳವಳ್ಳಿ ಮೇಳದಲ್ಲಿ ತಮ್ಮ ಪ್ರಸಿದ್ಧ ಸಾಲ್ವನ ಪಾತ್ರಕ್ಕೆ ಅತಿಥಿ ಕಲಾವಿದರಾಗಿ ಬಂದಿದ್ದರು. ಆದ್ರೆ ವಿಧಿಯಾಟಕ್ಕೆ ರಂಗದಲ್ಲೇ ಕೊನೆಯುಸಿರು ಎಳೆದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv