ಉಡುಪಿ: ಮಹಾಮಾರಿ ಕೊರೊನಾ ವಿರುದ್ಧ ಉಡುಪಿ ಕೃಷ್ಣಮಠದಲ್ಲಿ ಧನ್ವಂತರಿ ಮಹಾಯಾಗ ನಡೆಯುತ್ತಿದೆ. ಪರ್ಯಾಯ ಅದಮಾರು ಮಠ ನೇತೃತ್ವದಲ್ಲಿ ಯಾಗ ಆರಂಭವಾಗಿದ್ದು, ಕೇವಲ ಏಳು ಮಂದಿ ಋತ್ವಿಜರು ಮಾತ್ರ ಮಹಾ ಯಾಗದಲ್ಲಿ ಪಾಲ್ಗೊಂಡರು.
ಕರೊನಾದ ಭೀತಿ ಆರಂಭವಾದ ಸಂದರ್ಭದಲ್ಲಿ ಶ್ರೀಕೃಷ್ಣ ಮಠ ಧನ್ವಂತರಿ ಮಹಾಯಾಗ ಕೈಗೊಳ್ಳುವ ಚಿಂತನೆ ನಡೆಸಿತ್ತು. ಐದು ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಮಠಕ್ಕಿತ್ತು. ಆದರೆ ದೇಶ ಲಾಕ್‍ಡೌನ್ ಆಗಿರುವುದರಿಂದ ಭಕ್ತರು ಸೇರಬಾರದು ಎಂದು ಜಿಲ್ಲಾಡಳಿತ ಕೃಷ್ಣ ಮಠಕ್ಕೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಭಕ್ತರು ಮನೆಯಲ್ಲೇ ಇರಬೇಕೆಂದು ಮಠ ಪ್ರಕಟಣೆ ಹೊರಡಿಸಿತು.
Advertisement
Advertisement
ಶುಕ್ರವಾರ ಪ್ರಾತಃ ಕಾಲದಲ್ಲಿ ಆರಂಭವಾದ ಧನ್ವಂತರಿ ಮಹಾಯಾಗದಲ್ಲಿ ಋತ್ವಿಜರು ಮಾತ್ರ ಪಾಲ್ಗೊಂಡಿದ್ದಾರೆ. ಒಬ್ಬ ಭಕ್ತರೂ ಯಾಗದಲ್ಲಿ ಪಾಲ್ಗೊಂಡಿಲ್ಲ. ಮಠದ ಸಿಬ್ಬಂದಿ ಕೂಡ ಯಾಗದ ಚೌಕಟ್ಟಿನ ಒಳಗೆ ಪ್ರವೇಶ ಮಾಡಿಲ್ಲ.
Advertisement
ಇಡೀ ವಿಶ್ವಕ್ಕೆ ಮಹಾಮಾರಿ ವೈರಸ್ ಆವರಿಸಿದೆ ಕೃಷ್ಣಮಠ ಮತ್ತು ಆದಮಾರು ಮಠಾಧೀಶರು ಧನ್ವಂತರಿ ಮಹಾಯಾಗ ಮಾಡುವ ಸಂಕಲ್ಪವನ್ನು ಮಾಡಿದ್ದಾರೆ. ಧನ್ವಂತರಿ ಎಂದರೆ ಸಂಸಾರಕ್ಕೆ ಓದಿದಂತಹ ದುಃಖವನ್ನು ಪರಿಹರಿಸುವ ದೇವರು ಎಂಬ ಅರ್ಥ ಇದೆ. ಇದೀಗ ಭಾರತ ಎಂಬ ಕುಟುಂಬಕ್ಕೆ ಮಹಾಮಾರಿ ವೈರಸ್ ಆವರಿಸಿದೆ. ಕರಣದ ವಿರುದ್ಧ ಭಾರತ ಏನು ಮಾಡುತ್ತಿದೆ ಎಂದು ಇಡೀ ವಿಶ್ವ ಕಾತುರದಿಂದ ಕಾಯುತ್ತಿದೆ. ಹಾಗಾಗಿ ಭಾರತದಲ್ಲಿ ಕೈಗೊಂಡ ನಿರ್ಧಾರಗಳಿಂದ ವೈರಸ್‍ನ ಪ್ರಭಾವ ಕಡಿಮೆ ಆಗಲಿ ಎಂದು ಪ್ರಾರ್ಥಿಸಲಾಯಿತು.
Advertisement
ದೇಶದ ಜನತೆಗೆ ಮತ್ತು ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗಾಗಿ ಪೂರ್ಣಾಹುತಿ ಸಂದರ್ಭ ಪ್ರಾರ್ಥನೆ ನಡೆದಿದೆ. ಅದಮಾರು ಮಠಾಧೀಶರಾದ ವಿಶ್ವಪ್ರಿಯ ತೀರ್ಥ ಶ್ರೀಪಾದರು ಪರ್ಯಾಯ ಸ್ವಾಮೀಜಿ ಈಶಪ್ರಿಯ ತೀರ್ಥ ಸ್ವಾಮೀಜಿ ಸೋದೆ ಮಠಾಧೀಶರು ಕಾಣಿಯೂರು ಶ್ರೀಗಳು ಧನ್ವಂತರಿ ಮಹಾ ಯಾಗದಲ್ಲಿ ಪಾಲ್ಗೊಂಡರು. ಕೃಷ್ಣಮಠದ ವ್ಯವಸ್ಥಾಪಕ ಗೋವಿಂದರಾಜ್ ಶ್ರೀಕೃಷ್ಣ ಸೇವಾ ಸಮಿತಿಯ ಪ್ರದೀಪ್, ರಾಮಚಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು.