ಮೈಸೂರು: ಸಾಮಾನ್ಯವಾಗಿ ಗಣ್ಯರಿಗೆ ಮಳೆ ಬಂದಾಗ ಛತ್ರಿ ಹಿಡಿದು ಕೊಂಡು ಹಿಂಬಾಲಕರು ಅಥವಾ ಸಹಾಯಕರು ನಿಂತಿರುತ್ತಾರೆ. ತಮಗೆ ತಾವೇ ಛತ್ರಿ ಹಿಡಿದು ಕೊಳ್ಳುವುದು ಘನತೆ ಕಡಿಮೆ ಮಾಡಿಕೊಂಡಂತೆ ಅಂತಾ ಕೆಲವರು ಭಾವಿಸುತ್ತಾರೆ.
ಇಂತಹದರ ನಡುವೆ ಮೈಸೂರಿನ ಯದುವಂಶದ ಮಹಾರಾಜ ತಮ್ಮ ಛತ್ರಿಯನ್ನು ತಾವೇ ಹಿಡಿದುಕೊಂಡು ಸರಳತೆ ಪ್ರದರ್ಶಿಸಿದರು. ಮೈಸೂರಿನಲ್ಲಿ ಯದುವೀರ್ ಒಡೆಯರ್ ಇವತ್ತು ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮಕ್ಕೆ ಮಳೆ ಅಡ್ಡಿಯಾಯಿತು.
Advertisement
ಆಗ ಅವರಿಗೆ ಛತ್ರಿ ಹಿಡಿಯಲು ಆಯೋಜಕರು ಮುಂದಾದರು. ಆಗ ಅದನ್ನು ನಿರಾಕರಿಸಿದ ಯದುವೀರ್ ತಾವೇ ಛತ್ರಿ ಹಿಡಿದುಕೊಂಡು ಸರಳತೆ ಮೆರೆದರು. ಮಳೆ ಬಂದರು ಯದುವೀರ್ ಕಾರ್ಯಕ್ರಮದಿಂದ ನಿರ್ಗಮಿಸದೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಜನರ ಮೆಚ್ಚುಗೆಗೆ ಪಾತ್ರವಾಯಿತು.