ಯಾದಗಿರಿ: ಸರ್ಕಾರದ ಯೋಜನೆಗಳಿಂದ ಜನರ ಖಾತೆಗೆ ಬೀಳುತ್ತಿರುವ ಹಣವನ್ನು ಬ್ಯಾಂಕ್‍ನಿಂದ ಸಾಲಕ್ಕೆ ಜಮೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪ ಖಾನಾಪುರದ ಎಸ್‍ಬಿಐ ಬ್ಯಾಂಕ್ (SBI Bank) ವಿರುದ್ಧ ಕೇಳಿ ಬಂದಿದೆ.
ಗೃಹಲಕ್ಷ್ಮಿ (Gruha Lakshmi), ಅನ್ನಭಾಗ್ಯ, ಪಿಂಚಣಿ, ಪಿಎಂ ಕಿಸಾನ್ ಹಣ ಸೇರಿದಂತೆ ಬೆಳೆ ಪರಿಹಾರದ ಹಣವನ್ನು ಸರ್ಕಾರ ಪಾವತಿ ಮಾಡಿದರೂ ಬ್ಯಾಂಕ್‍ನಲ್ಲಿ ತಡೆಹಿಡಿಯಲಾಗುತ್ತಿದೆ. ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸರ್ಕಾರದ ಆದೇಶ ಇದ್ದರೂ ಸಹ ಆದೇಶ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಜನ ಆರೋಪಿಸಿದ್ದಾರೆ. ಇದನ್ನೂ ಓದಿ: ನಾಗಮಂಗಲ ಗಲಭೆಗೆ ತಲೆದಂಡ – ಟೌನ್ ಇನ್ಸ್‌ಪೆಕ್ಟರ್ ಅಮಾನತು
ಹಣ ಕೇಳಲು ಹೋದರೆ ಸಾಲ ತೀರಿಸಿ ಹಣವನ್ನು ತೆಗೆದುಕೊಳ್ಳಿ ಎಂದು ಬ್ಯಾಂಕ್ ಸಿಬ್ಬಂದಿ ಹಾಗೂ ಮ್ಯಾನೇಜರ್ ಧಮ್ಕಿ ಹಾಕುತ್ತಿದ್ದಾರೆ. ಮಗಳ ಚಿಕಿತ್ಸೆಗೆ ಹಣ ಬೇಕು ಎಂದರೂ ಕೊಡುತ್ತಿಲ್ಲ. ನೂರಾರು ಮಹಿಳೆಯರಿಗೆ ಈ ರೀತಿ ಸಮಸ್ಯೆಯಾಗಿದೆ ಎಂದು ಜನ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
ಒಬ್ಬೊಬ್ಬ ಮಹಿಳೆಯರ ಖಾತೆಗೆ 30 ರಿಂದ 50 ಸಾವಿರ ರೂ. ಸರ್ಕಾರದಿಂದ ಜಮೆಯಾಗಿದೆ. ಆದರೂ ಹಣ ಸಿಗುತ್ತಿಲ್ಲ. ಸರ್ಕಾರ ನಮಗೆ ಹಣ ಪಡೆಯಲು ಅನುಕೂಲ ಮಾಡಿಕೊಡಬೇಕು ಎಂದು ಜನ ಆಗ್ರಹಿಸಿದ್ದಾರೆ. ಇದನ್ನೂ ಓದಿ: ನಾಗಮಂಗಲ ಗಲಭೆ| ಕೇಸ್‌ನಲ್ಲಿ ಹಿಂದೂಗಳು ಟಾರ್ಗೆಟ್ – ಬಿಜೆಪಿ ಆಕ್ರೋಶ