ಯಾದಗಿರಿ: ರಾಜ್ಯದ ವಿವಿಧ ಕಡೆಗಳಲ್ಲಿ ಕೋವಿಡ್ ಲಸಿಕೆಗಾಗಿ ಜನ ಮುಗಿಬೀಳುತ್ತಿದ್ದಾರೆ. ಕಿಲೋಮೀಟರ್ ಗಟ್ಟಲೆ ಕ್ಯೂ ನಿಂತು ಲಸಿಕೆ ಪಡೆದುಕೊಂಡಿದ್ದಾರೆ. ಆದರೆ ಯಾದಗಿರಿ ಜನ ಮಾತ್ರ ಫುಲ್ ಡಿಫೆರೆಂಟ್ ಆಗಿದ್ದಾರೆ. ಕೋವಿಡ್ ಲಸಿಕೆ ಬಗ್ಗೆ ಯಾದಗಿರಿಯ ಜನರಲ್ಲಿ ಮೂಢನಂಬಿಕೆ ಮೂಡಿದೆ.
ಕೋವಿಡ್ ಲಸಿಕೆ ಅಂದ್ರೆ ಯಾದಗಿರಿ ಮಂದಿಗೆ ಇನ್ನಿಲ್ಲದ ಕೋಪ ಬರುತ್ತೆ. ವ್ಯಾಕ್ಸಿನ್ ಹಾಕಿಸಿಕೊಳ್ಳಿ ಅಂದರೆ ಲೋಗೋ ತಳ್ಳುತ್ತಾರೆ. ಮುಖದ ಮೇಲೆ ಬಟ್ಟೆ ಹಾಕಿಕೊಂಡು ಮನೆಯೊಳಗೆ ಓಡಿಹೋಗಿ ಬಾಗಿಲು ಹಾಕಿಕೊಳ್ಳತ್ತಾರೆ. ಅಧಿಕಾರಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ ಬಾಯಿ ಬಂದಂಗೆ ಬೈತ್ತಾರೆ. ನಾವು ಸತ್ರೆ ಇಲ್ಲಿಯೇ ಸಾಯತ್ತೀವಿ ಆದರೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲ್ಲ ಅಂತಾರೆ. ಕೋವಿಡ್ ಲಸಿಕೆ ಬಗ್ಗೆ ಮೂಢನಂಬಿಕೆ ಹೊಂದಿರುವ ಯಾದಗಿರಿ ಜನರಿಂದ ಅನಾಗರಿಕ ವರ್ತನೆ ಪ್ರದರ್ಶನವಾಗುತ್ತಿದೆ. ಇದನ್ನೂ ಓದಿ: ಎಚ್‍ಡಿಡಿ ಫೋಟೋ ತೆಗೆದಿದ್ದು ಯಾಕೆ – ಹಾಸನದಲ್ಲಿ ಜನಪ್ರತಿನಿಧಿಗಳ ಮಧ್ಯೆ ಗಲಾಟೆ
Advertisement
Advertisement
ಜನರ ಅತಿರೇಕದ ವರ್ತನೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಬಟಾಬಯಲಾಗಿದೆ. ಗ್ರಾಮೀಣ ಭಾಗದಲ್ಲಂತೂ ಲಸಿಕೆ ಅಂದ್ರೆ ವಿಷ ಎಂಬಂತೆ ಜನ ವರ್ತನೆ ಮಾಡುತ್ತಿದ್ದಾರೆ. ಕೊರೊನಾ ಮೂರನೇ ಅಲೆಯ ಡೆಂಜರ್ ಝೋನ್ ನಲ್ಲಿರುವ ಯಾದಗಿರಿ ಜಿಲ್ಲಾಡಳಿತಕ್ಕೆ, ಲಸಿಕೆ ಟಾರ್ಗೆಟ್ ಟೆನ್ಸನ್ ಹೆಚ್ಚಾಗಿದೆ. ಲಸಿಕೆ ಹಾಕಲು ಅಧಿಕಾರಿಗಳು ಮನೆ, ಮನೆಗೆ ತೆರಳುತ್ತಿದ್ದಾರೆ. ಆದರೆ ಅಧಿಕಾರಿಗಳ ಮೇಲೆ ಜನ ದಬ್ಬಾಳಿಕೆ ನಡೆಸುತ್ತಿದ್ದು, ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.