– ಮಾಜಿ ಸಚಿವರ ಹೈಡ್ರಾಮಾದ ಇನ್ ಸೈಡ್ ಸ್ಟೋರಿ ಇಲ್ಲಿದೆ
ಯಾದಗಿರಿ: ಏಕಲವ್ಯ ಶಾಲೆ ಉದ್ಘಾಟನಾ ಹೈಡ್ರಾಮ ಪ್ರೀ-ಪ್ಲಾನ್ ಎನ್ನುವ ಅನುಮಾನ ಮೂಡಿದೆ. ಬಿಜೆಪಿ ತೊರೆಯಲು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಈ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
ಶಾಲೆ ಉದ್ಘಾಟನೆಯನ್ನು ಗಾಳವಾಗಿ ಬಳಸಿಕೊಂಡು ಬಿಜೆಪಿ ಬಿಟ್ಟು ಮತ್ತೆ ಕಾಂಗ್ರೆಸ್ ಸೇರಲು ಸಿದ್ಧತೆ ನಡೆಸಿದ್ದರು. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜೊತೆಗೆ 3-4 ಬಾರಿ ಮಾತುಕತೆ ನಡೆಸಿರುವ ಬಾಬುರಾವ್, ಏಕಲವ್ಯ ಶಾಲೆ ಉದ್ಘಾಟನೆಯಲ್ಲಿ ಕಡಗಣನೆ ಮತ್ತು ಅಗೌರವ ನೆಪ ಮಾಡಿಕೊಂಡು ಜಂಪ್ ಆಗಲು ಪ್ಲಾನ್ ಮಾಡಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಸ್ವಪ್ರತಿಷ್ಠೆಗೋಸ್ಕರ ಬಡ ಮಕ್ಕಳ ಶಿಕ್ಷಣಕ್ಕೆ ಕೊಳ್ಳಿಯಿಟ್ಟ ಬಾಬುರಾವ್ ಚಿಂಚನಸೂರ್
Advertisement
Advertisement
ಕಾಂಗ್ರೆಸ್ ಬಿಡುವಾಗ ಕೂಡ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಡಗಣನೆ ಮತ್ತು ಅಗೌರವದ ಕಾರ್ಡನ್ನು ಬಾಬುರಾವ್ ಬಳಸಿದ್ದರು. ಆದರೆ ಈ ವಿಚಾರದಲ್ಲಿ ಬಾಬುರಾವ್ ಗೆ ಆಗಿದ್ದೇ ಬೇರೆ. ಬಿಜೆಪಿ ಬಿಡಲು ಏಕಲವ್ಯ ಶಾಲೆಯನ್ನು ನೆಪ ಮಾಡಿಕೊಳ್ಳಲು ಮುಂದಾಗಿದ್ದ ಬಾಬುರಾವ್ ಚಿಂಚನಸೂರ್‍ಗೆ ಬಿಜೆಪಿ ಮಾಸ್ಟರ್ ಸ್ಟ್ರೋಕ್ ನೀಡಿದೆ. ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಚಿಂಚನಸೂರ್ ಪ್ಲಾನ್ ಉಲ್ಟಾಪಲ್ಟಾ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೈಡ್ರಾಮ..!
Advertisement
ಒಂದೇ ಒಂದು ಫೋನ್ ಕಾಲ್ ಇಡೀ ಚಿತ್ರಣವೇ ಬದಲು ಮಾಡಿದೆ. ಆದರೆ ಈ ಪ್ರಕರಣದಲ್ಲಿ ಬಲಿಕಾ ಬಕ್ರಾ ಆಗಿದ್ದು ಸಚಿವ ಶ್ರೀರಾಮುಲು. ಪಬ್ಲಿಕ್ ಟಿವಿಯಲ್ಲಿ ಫೋನ್ ಕಾಲ್ ಎಕ್ಸ್ ಕ್ಲೂಸೀವ್ ದೃಶ್ಯ ಲಭ್ಯವಾಗಿವೆ. ಬಾಬುರಾವ್ ಶಾಲೆ ಉದ್ಘಾಟನೆಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ವಾಲ್ಮೀಕಿ ಸಮುದಾಯದಿಂದ ರಾಮುಲು ಕಾರು ಅಡ್ಡಗಟ್ಟಿ ಪ್ರತಿಭಟನೆ ನಡೆಸಲಾಯಿತು. ಶಾಲೆ ಉದ್ಘಾಟನೆಯನ್ನು ಮಾಡಲೇಬೇಕು ಅಂತ ಪ್ರತಿಭಟನಾಕಾರರು ಹಠಹಿಡಿದರು. ಇದರಿಂದ ಏಕಲವ್ಯ ಶಾಲೆಯನ್ನು ಉದ್ಘಾಟನೆ ಮಾಡುವ ಇಂಗಿತ ವ್ಯಕ್ತಪಡಿಸಿದ ರಾಮುಲು, ಜಿಲ್ಲಾಡಳಿತ ಜೊತೆಗೆ ಚರ್ಚೆ ನಡೆಸಲು ಮುಂದಾದ್ರು.
ರಾಮುಲುಗೆ ಜಿಲ್ಲಾಡಳಿತ ಮತ್ತು ಪೊಲೀಸರು ಸಹ ಸಾಥ್ ನೀಡಿದರು. ಆದರೆ ಈ ವೇಳೆ ಅರುಣ್ ಕುಮಾರ್ ಗೆ ಕಾಲ್ ಮಾಡಿ ಅನುಮತಿ ಕೇಳಿದ ರಾಮುಲು, ಫೋನ್ ಸಂಭಾಷಣೆ ಮುಗಿದ ಮೇಲೆ ಒಂದು ಕ್ಷಣವೂ ಸ್ಥಳದಲ್ಲಿ ನಿಲ್ಲದೆ, ಸ್ಥಳದಿಂದ ರಾಮುಲು ಜಾಗ ಖಾಲಿ ಮಾಡಿದ್ದಾರೆ. ತಮ್ಮ ವಾಹನ ಸಿಗದ ಹಿನ್ನಲೆ ತರಾತುರಿಯಲ್ಲಿ ಡಿಸಿ ಕಾರ್ ನಲ್ಲಿ ರಾಮುಲು ಎಸ್ಕೇಪ್ ಆದರು. ಬಾಬುರಾವ್ ಬಿಜೆಪಿ ಬಿಡಲು ಕಾರಣವೇ ಇಲ್ಲದಂತೆ ಮಾಡುವುದು ಸಂಘನಾ ಕಾರ್ಯದರ್ಶಿ ಅರುಣ್ ಕುಮಾರ್ ಅವರದಾಗಿತ್ತು ಎನ್ನಲಾಗಿದೆ. ಇದಕ್ಕಾಗಿ ಯಾವುದೇ ಕಾರಣಕ್ಕೂ ಶಾಲೆ ಉದ್ಘಾಟನೆ ಮಾಡದೆ ಅಲ್ಲಿಂದ ಹೊರಡುವಂತೆ ರಾಮುಲುಗೆ ಅರುಣ್ ಕುಮಾರ್ ಫೋನ್ ನಲ್ಲಿ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.