– ಚಪ್ಪಲಿ ಕೈಯಲ್ಲಿಡಿದು ಕೆಸರು ಗದ್ದೆಯಲ್ಲೇ ಓಡಿದ ಯುವಕ
ಯಾದಗಿರಿ: ಕೊರೊನಾ ಲಸಿಕೆ ಬಗ್ಗೆ ಇರುವ ಮೌಢ್ಯತೆ ಮುಂದುವರಿದಿದ್ದು, ಇದಕ್ಕೆ ಪೂರ ಎಂಬಂತೆ ಯಾದಗಿರಿಯಲ್ಲಿ ಜನ ಅಧಿಕಾರಿಗಳ ಮುಂದೆ ಕುಂಟು ನೆಪ ಹೇಳಿ ಎಸ್ಕೇಪ್ ಆದ ಪ್ರಸಂಗ ಇಂದು ನಡೆದಿದೆ.
Advertisement
ಹೌದು. ಜಿಲ್ಲೆಯ ಜನರಿಗೆ ಕೋವಿಡ್ ಲಸಿಕೆ ಹಾಕಲು ಜಿಲ್ಲಾಡಳಿತದ ಹರಸಹಾಸ ಮತ್ತೆ ಮುಂದುವರಿದಿದೆ. ವ್ಯಾಕ್ಸಿನ್ ಹಾಕಲು ಬಂದ ಅಧಿಕಾರಿಗಳನ್ನ ನೋಡಿ ಎತ್ತಿನ ಬಂಡಿ ಇಳಿದು ಯುವಕ ಓಡಿದ ಘಟನೆ ಸೇರಿದಂತೆ, ಅಧಿಕಾರಿಗಳ ಮತ್ತು ಆರೋಗ್ಯ ಸಿಬ್ಬಂದಿ ನಡುವೆ ಗ್ರಾಮೀಣ ಭಾಗದ ಜನ ಮಾತಿನ ಚಕಮಕಿ ನಡೆಸಿದ್ದಾರೆ.
Advertisement
Advertisement
ಲಸಿಕೆ ಹಾಕಲು ಬಂದ ಅಧಿಕಾರಿಗಳನ್ನು ನೋಡಿ ಚಪ್ಪಲಿ ಕೈಯಲ್ಲಿ ಹಿಡಿದುಕೊಂಡು ಕೆಸರು ಗದ್ದೆಯಲ್ಲೇ ಯುವಕನೋರ್ವ ಓಡಿದ್ದಾನೆ. ಅಲ್ಲದೆ ಬೇರೆ ಟ್ಯಾಬ್ಲೇಟ್ ತಗೊಂಡಿದ್ದೀನಿ, ನಾನು ಎಣ್ಣೆ ಹೊಡಿಯೋಕೆ ಹೋಗಬೇಕು. ನಾಳೆ ಬಂದು ವ್ಯಾಕ್ಸಿನ್ ತಗೊತೀನಿ ಅಂತ ನಾನಾ ಕಾರಣಗಳನ್ನು ಜನ ಅಧಿಕಾರಿಗಳಿಗೆ ನೀಡುತ್ತಿದ್ದಾರೆ. ಇದನ್ನೂ ಓದಿ: ಮೈಸೂರಲ್ಲಿ ಮತ್ತೊಂದು ಅಮಾನವೀಯ ಘಟನೆ- ತಿಂಡಿ ಆಸೆ ತೋರಿಸಿ 12ರ ಬಾಲೆ ಮೇಲೆ ಲೈಂಗಿಕ ದೌರ್ಜನ್ಯ
Advertisement
ಯಾದಗಿರಿ ತಾಲೂಕಿನ ಹೆಡಗಿಮುದ್ರಾ ಗ್ರಾಮದಲ್ಲಿನ ಜನ ಕೋವಿಡ್ ವ್ಯಾಕ್ಸಿನ್ ಕಂಡು ಮಾರುದ್ದ ಓಡುತ್ತಿದ್ದಾರೆ. ಜಿಲ್ಲಾಮಟ್ಟದ ಅಧಿಕಾರಿಗಳೆ ಖುದ್ದಾಗಿ ಮನೆ ಮನೆಗೆ ಹೋಗಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಹೀಗಿದ್ದರೂ ಸಹ ಜನ ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಬದಲಾಗಿ ಅಧಿಕಾರಿಗಳೊಂದಿಗೆ ವಾದ ಮಾಡುತ್ತಿದ್ದಾರೆ. ಜನರ ಈ ವರ್ತನೆಯಿಂದ ಜಿಲ್ಲಾಡಳಿತ ಕಂಗಾಲಾಗಿದೆ.