24 ಕಿ.ಮೀ ಹಿಮ್ಮುಖವಾಗಿ ಟ್ರ್ಯಾಕ್ಟರ್ ಚಲಿಸಿ 1 ಲಕ್ಷದ 45 ಸಾವಿರ ಗೆದ್ದ

Public TV
1 Min Read
YADAGIRI TRACTOR

ಯಾದಗಿರಿ: ಇಲ್ಲೊಬ್ಬ ಅಪರೂಪದ ಸಾಹಸಿ 1 ಗಂಟೆ 43 ನಿಮಿಷಗಳಲ್ಲಿ ಬರೋಬ್ಬರಿ 24 ಕಿಲೋ ಮೀಟರ್ ದೂರ ಹಿಮ್ಮುಖವಾಗಿ ಟ್ರ್ಯಾಕ್ಟರ್ (Tractor) ಚಲಿಸಿ 1 ಲಕ್ಷದ 45 ಸಾವಿರ ರೂಪಾಯಿ ಭರ್ಜರಿ ಮೊತ್ತದ ಬಹುಮಾನವನ್ನು ಬಾಚಿಕೊಂಡಿದ್ದಾನೆ.

YADAGIRI TRACTOR 1

ಯಾದಗಿರಿ (Yadagiri) ಜಿಲ್ಲೆಯ ದೋರನಹಳ್ಳಿ ಗ್ರಾಮದ ನಿವಾಸಿ ಬಸಲಿಂಗಪ್ಪ ಹುರಸಗುಂಡಗಿ ಈ ಅಪರೂಪದ ಸಾಧನೆ ಮಾಡಿ ಬೇಷ್ ಎನಿಸಿಕೊಂಡಿದ್ದಾನೆ. ನಾಗರ ಪಂಚಮಿ ಅಂಗವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ವಿಭಿನ್ನ ಸಾಹಸ ಸ್ಪರ್ಧೆಗಳು ನಡೆಯುತ್ತವೆ. ಆದ್ರೆ ಇದೇ ಮೊದಲ ಬಾರಿಗೆ ಯಾದಗಿರಿ ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ಹಿಮ್ಮುಖವಾಗಿ ಬಹುದೂರ ಚಲಾಯಿಸುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಇದನ್ನೂ ಓದಿ: ಯೋಗಿಗಳ ಕಾಲು ಹಿಡಿಯುವುದು ನನ್ನ ಅಭ್ಯಾಸ : ರಜನಿ ಖಡಕ್ ಉತ್ತರ

ವಿಜಯಪುರ (Vijayapura) ಹೈದ್ರಾಬಾದ್ ಹೆದ್ದಾರಿಯಲ್ಲಿ ಬರುವ ದೋರನಹಳ್ಳಿ ಗ್ರಾಮದಿಂದ ಯಾದಗಿರಿ ಹೊರವಲಯದ ವಡಗೇರಿ ಕ್ರಾಸ್ ವರೆಗೆ ಟ್ರ್ಯಾಕ್ಟರ್ ಹಿಮ್ಮುಖವಾಗಿ ಚಲಾಯಿಸಿಕೊಂಡು ಬಂದು ಒಂದು ತಾಸು 43 ನಿಮಿಷದಲ್ಲಿ ತಲುಪಿದ್ದಾನೆ. ಇನ್ನೋರ್ವ ಪ್ರತಿಸ್ಪರ್ಧಿ ಪರಶುರಾಮ ಟೋಕಾಪುರ ಎಂಬುವವರು ಸಹ ಟ್ರ್ಯಾಕ್ಟರ್ ಹಿಮ್ಮುಖವಾಗಿ ಚಲಾಯಿಸಿಕೊಂಡು ಬಂದರೂ ಸಹ 1 ತಾಸು 45 ನಿಮಿಷದಲ್ಲಿ ದೂರವನ್ನು ಕ್ರಮಿಸಿದರು. ಆದರೆ ಅಂತಿಮವಾಗಿ 2 ನಿಮಿಷ ಮೊದಲು ತಲುಪಿದ ಬಸಲಿಂಗಪ್ಪ ಹುರಸಗುಂಡಿಗಿ ಅವರನ್ನು ವಿಜೇತರನ್ನಾಗಿ ಘೋಷಿಸಲಾಯಿತು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article