ಬಾಲಿವುಡ್ ಖ್ಯಾತ ನಿರ್ಮಾಪಕಿ, ನಿರ್ದೇಶಕಿ ಏಕ್ತಾ ಕಪೂರ್ (Ekta Kapoor) ನಿರ್ಮಾಣದ ವೆಬ್ ಸರಣಿ ಬಗ್ಗೆ ಸುಪ್ರೀಂ ಕೋರ್ಟ್ (Court) ಅಸಮಾಧಾನ ವ್ಯಕ್ತಪಡಿಸಿದೆ. XXX ನಂತಹ ಚಿತ್ರಗಳಿಂದ ನೀವು ಯುವಕರನ್ನು ಹಾಳು ಮಾಡುತ್ತಿದ್ದೀರಿ ಎಂದು ತರಾಟೆಗೆ ತಗೆದುಕೊಂಡಿದೆ. ಏಕ್ತಾ ಕಪೂರ್ ನಿರ್ಮಾಣದಲ್ಲಿ ಈ ವೆಬ್ ಸರಣಿ ಮೂಡಿ ಬರುತ್ತಿದ್ದು, ಯುವ ಜನತೆಯ ಮನಸ್ಸನ್ನು ಹಾಳು ಮಾಡುವಂತಹ ವಿಷಯವನ್ನು ಅದು ಒಳಗೊಂಡಿದೆ ಎನ್ನಲಾಗುತ್ತಿದೆ.
Advertisement
ಇದೇ ವೆಬ್ ಸರಣಿಯಲ್ಲಿ ಯೋಧರಿಗೆ ಅವಮಾನ ಮಾಡುವಂತಹ ಸರಣಿಯೊಂದು ಪ್ರಸಾರವಾಗಿದ್ದು, ಅದರಲ್ಲಿ ಯೋಧರಿಗೆ ಮತ್ತು ಅವರ ಪತ್ನಿಗೆ ಅಪಮಾನ ಮಾಡಲಾಗಿದೆ ಎಂದು ಬಿಹಾರದ ಮಾಜಿ ಯೋಧ ಶಂಭು ಕುಮಾರ್ ದೂರು ನೀಡಿದ್ದರು. ಯೋಧರು ಗಡಿ ಕಾಯುತ್ತಿದ್ದರೆ, ಅವರ ಪತ್ನಿ ಬೇರೆಯವರೊಂದಿಗೆ ಸಂಬಂಧ ಬೆಳೆಸಿರುತ್ತಾರೆ ಎಂಬ ಅರ್ಥ ಬರುವಂತಹ ಕಂಟೆಂಟ್ ಅನ್ನು ಅದು ಒಳಗೊಂಡಿತ್ತು ಎನ್ನಲಾಗುತ್ತಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರಾಜಣ್ಣ ಮೇಲೆ ಪ್ರಶಾಂತ್ ಸಂಬರ್ಗಿ ವಾಗ್ದಾಳಿ
Advertisement
Advertisement
ಈ ದೂರಿಗೆ ಸಂಬಂಧಪಟ್ಟಂತೆ ಸತತವಾಗಿ ಏಕ್ತಾ ಕಪೂರ್ ಮತ್ತು ಅವರ ತಾಯಿ ಕೋರ್ಟಿಗೆ ಹಾಜರಾಗದ ಕಾರಣ, ಬಂಧನ ವಾರೆಂಟ್ ಜಾರಿ ಮಾಡಲಾಗಿತ್ತು. ಇದನ್ನು ರದ್ದು ಮಾಡುವಂತೆ ಏಕ್ತಾ ಮತ್ತೆ ಕೋರ್ಟಿಗೆ ಮೊರೆ ಹೋಗಿದ್ದರು. ಈ ಸಮಯದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ವೆಸ್ ಸರಣಿ ಬಗ್ಗೆ ಕಿಡಿಕಾರಿದ್ದಾರೆ. ನೀವು ಯಾವ ರೀತಿಯ ಸಂದೇಶವನ್ನು ನೀಡುತ್ತಿದ್ದೀರಿ ಮತ್ತು ಯಾರು ಅದನ್ನು ನೋಡಬೇಕು ಎಂದು ಬಯಸಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
ವೆಬ್ ಸರಣಿಗೆ (Web Series) ಸಂಬಂಧಿಸಿದಂತೆ ಈಗಾಗಲೇ ಹಲವು ದೃಶ್ಯಗಳನ್ನು ತಗೆದುಹಾಕಿರುವುದಾಗಿ ಈ ಹಿಂದೆಯೇ ಏಕ್ತಾ ಹೇಳಿಕೊಂಡಿದ್ದರು. ಯಾವ ದೃಶ್ಯಗಳು ಆಕ್ಷೇಪಾರ್ಹ ಎಂದು ಜನರು ಹೇಳಿದ್ದರೋ, ಅದೆಲ್ಲವನ್ನೂ ಕಿತ್ತು ಹಾಕಲಾಗಿದೆ ಎಂದೂ ತಿಳಿಸಿದ್ದರು. ಹಾಗಾಗಿ ಕೋರ್ಟಿಗೆ ಹಾಜರಾಗುತ್ತಿಲ್ಲ ಎಂದು ಅವರ ಪರ ವಕೀಲರು ತಿಳಿಸಿದ್ದರು. ಆದರೆ, ಈ ಮಾತನ್ನು ಕೋರ್ಟ್ ಒಪ್ಪಲಿಲ್ಲ. ಬಿಹಾರದಲ್ಲಿ ನಡೆಯುತ್ತಿರುವ ಕೇಸ್ ಬಗ್ಗೆಯೂ ಸುಪ್ರೀಂ ಕೋರ್ಟ್ ವರದಿ ಕೇಳಿದೆ.