ನವದೆಹಲಿ: ಚೀನಾ ಮೂಲದ ಕ್ಸಿಯೋಮಿ ಕಂಪನಿ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರುವ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲು ಮುಂದಾಗಿದೆ.
ಕೆಲ ದಿನಗಳ ಹಿಂದೆ 64 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿರುವ ರೆಡ್‍ಮೀ ನೋಟ್ 8 ಪ್ರೋ ಫೋನನ್ನು ಬಿಡುಗಡೆ ಮಾಡಿದ ಬಳಿಕ ಕ್ಸಿಯೋಮಿ ಸ್ಯಾಮ್‍ಸಂಗ್ ಕಂಪನಿ ಅಭಿವೃದ್ಧಿ ಪಡಿಸಿರುವ ಕ್ಯಾಮೆರಾ ಸೆನ್ಸರ್ ಬಳಸಿ ಈ ಫೋನ್ ತಯಾರಿಸಲು ಮುಂದಾಗುತ್ತಿದೆ.
Advertisement
ಸ್ಯಾಮ್‍ಸಂಗ್ ಕಂಪನಿ ಐಎಸ್‍ಒಸಿಇಎಲ್‍ಎಲ್ ಬ್ರೈಟ್ ಎಚ್‍ಎಂಎಕ್ಸ್ ಸೆನ್ಸರ್ ಅಭಿವೃದ್ಧಿ ಪಡಿಸಿದೆ. 108 ರೆಸಲ್ಯೂಷನ್ ಮೆಗಾ ಪಿಕ್ಸೆಲ್ ಚಿತ್ರವನ್ನು ತೆಗೆಯಬಹುದಾದ ಮೊದಲ ಇಮೇಜ್ ಸೆನ್ಸರ್ ಇದಾಗಿದೆ. 10,80,00,000 ಪಿಕ್ಸೆಲ್(10.80 ಕೋಟಿ ಪಿಕ್ಸೆಲ್) 12032*9024 ರೆಸಲ್ಯೂಷನ್ ಹೊಂದಿರುವ ಫೋಟೋವನ್ನು ಈ ಕ್ಯಾಮೆರಾ ಸೆನ್ಸರ್ ಮೂಲಕ ತೆಗೆಯಬಹುದಾಗಿದೆ.
Advertisement
Advertisement
ಕ್ಸಿಯೋಮಿ 108 ಮೆಗಾ ಪಿಕ್ಸೆಲ್‍ನಲ್ಲಿ ಒಟ್ಟು 4 ಫೋನ್ ಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ. ಅಗಸ್ಟ್ ತಿಂಗಳಿನಲ್ಲೇ ಕ್ಸಿಯೋಮಿ ಮತ್ತು ಸ್ಯಾಮ್‍ಸಂಗ್ ಕಂಪನಿಗಳು ಮಾತುಕತೆ ನಡೆಸಿದ್ದು ಈ ಫೋನ್ ತಯಾರಿಸುವ ಕೆಲಸ ಆರಂಭವಾಗಿದೆ.