ನವದೆಹಲಿ: ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ(ಎಫ್‌ಇಎಮ್‌ಎ) 1999ರ ಅಡಿಯಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಚೀನಾ ಮೂಲದ ಪ್ರಸಿದ್ಧ ಸ್ಮಾರ್ಟ್ಫೋನ್ ಕಂಪನಿ ಶಿಯೋಮಿಯ 5,551.25 ಕೋಟಿ ರೂ. ಆಸ್ತಿಯನ್ನು ವಶಪಡಿಸಿಕೊಂಡಿದೆ.
ಈ ವರ್ಷದ ಫೆಬ್ರವರಿಯಲ್ಲಿ ಕಂಪನಿ ಮಾಡಿದ ಅಕ್ರಮ ಹಣಕ್ಕೆ ಸಂಬಂಧಿಸಿದಂತೆ ಇಡಿ ತನಿಖೆಯನ್ನು ಪ್ರಾರಂಭಿಸಿತ್ತು. ಶಿಯೋಮಿ ಭಾರತದಲ್ಲಿ 2014ರಿಂದ ತನ್ನ ಕಾರ್ಯಾಚರಣೆ ಪ್ರಾರಂಭಿಸಿ, 2015ರಿಂದ ಕಾನೂನು ಬಾಹಿರ ಹಣ ವರ್ಗಾಯಿಸಲು ಪ್ರಾರಂಭಿಸಿತ್ತು ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಇದನ್ನೂ ಓದಿ: ಏಷ್ಯಾ ಪೆಸಿಫಿಕ್ ವಲಯದಲ್ಲೇ ಫಸ್ಟ್ – ಸ್ವದೇಶಿ ನ್ಯಾವಿಗೇಷನ್ ಬಳಸಿ ಲ್ಯಾಂಡಿಂಗ್
Advertisement
Advertisement
ಕಂಪನಿ ಶಿಯೋಮಿ ಗ್ರೂಪ್ ಸೇರಿದಂತೆ ಒಟ್ಟು 3 ವಿದೇಶಿ ಘಟಕಗಳಿಗೆ ಸುಮಾರು 5,551.27 ಕೋಟಿ ರೂ. ಯಷ್ಟು ಹಣವನ್ನು ವರ್ಗಾಯಿಸಿದೆ ಎಂದು ಇಡಿ ಆರೋಪಿಸಿದೆ. ಇದನ್ನೂ ಓದಿ: ಜೂನ್ ಆರಂಭದಲ್ಲಿ 5ಜಿ ಸ್ಪೆಕ್ಟ್ರಂ ಹರಾಜು: ಅಶ್ವಿನಿ ವೈಷ್ಣವ್
Advertisement
ಶಿಯೋಮಿ ಭಾರತದಲ್ಲಿ ಎಂಐ ಹೆಸರಿನಲ್ಲಿ ಮೊಬೈಲ್ ಫೋನ್‌ಗಳ ಮಾರಾಟ ಮಾಡುತ್ತಿದ್ದು ಭಾರತದಲ್ಲೇ ತಯಾರಾದ ಬಿಡಿ ಭಾಗಗಳನ್ನು ಬಳಸುತ್ತಿತ್ತು. ಇದು ಹಣ ವರ್ಗಾಯಿಸಿದ ಘಟಕಗಳಿಂದ ಯಾವುದೇ ಸೇವೆ ಅಥವಾ ವಸ್ತುಗಳನ್ನು ಖರೀದಿ ಮಾಡಿಲ್ಲ ಎಂದು ಇಡಿ ತಿಳಿಸಿದೆ.