Friday, 20th July 2018

Recent News

ಬೆಂಗಳೂರಿನಲ್ಲಿ ರೆಡ್‍ಮೀ ಕಂಪೆನಿಯ ಆಫ್‍ಲೈನ್ ಸ್ಟೋರ್ ಆರಂಭ: ಜಸ್ಟ್ 12 ಗಂಟೆಯಲ್ಲಿ 5 ಕೋಟಿ ರೂ. ವ್ಯಾಪಾರ!

ಬೆಂಗಳೂರು: ಚೀನಾದ ರೆಡ್‍ಮೀ ಕಂಪೆನಿ ಆಫ್‍ಲೈನ್ ಸ್ಟೋರ್ ಮೂಲಕ ಒಂದೇ ದಿನದಲ್ಲಿ 5 ಕೋಟಿ ರೂ. ವ್ಯವಹಾರ ನಡೆಸಿದೆ.

ಮೇ 20ಕ್ಕೆ ಕ್ಸಿಯೋಮಿ ಕಂಪೆನಿ ಬೆಂಗಳೂರಿನ ಪೋನೆಕ್ಸ್ ಮಾರ್ಕೆಟಿಂಗ್ ಸಿಟಿಯಲ್ಲಿ ತನ್ನ ಆಫ್ ಲೈನ್ ಸ್ಟೋರ್ ಆರಂಭಿಸಿತ್ತು. ಈ ಮಳಿಗೆ ಆರಂಭಗೊಂಡ ಕೇವಲ 12 ಗಂಟೆಯಲ್ಲಿ 5 ಕೋಟಿ ರೂ. ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡಲಾಗಿದೆ ಎಂದು ಕ್ಸಿಯೋಮಿ ಹೇಳಿದೆ.

ರೆಡ್‍ಮೀ 4, ರೆಡ್‍ಮೀ4ಎ, ರೆಡ್‍ಮೀ ನೋಟ್ 4, ಎಂಐ ವಿಆರ್ ಪ್ಲೇ ಸೇರಿದಂತೆ ಇತ್ಯಾದಿ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ ಎಂದು ಕ್ಸಿಯೋಮಿ ತಿಳಿಸಿದೆ.

ಕ್ಸಿಯೋಮಿ ಇಂಡಿಯಾದ ಉಪಾಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಮಂಜು ಜೈನ್ ಮಾತನಾಡಿ, ಕಂಪೆನಿಯ ಪಾಲಿಗೆ ಇದು ಐತಿಹಾಸಿಕ ದಿನ. ಬೆಳಗ್ಗೆ 8 ಗಂಟೆಗೆ ಕ್ಸಿಯೋಮಿ ಅಭಿಮಾನಿಗಳು ಸಾಲಿನಲ್ಲಿ ನಿಂತುಕೊಂಡಿದ್ದರು. ಈ ರೀತಿಯ ಪ್ರತಿಕ್ರಿಯೆ ನಮಗೆ ಸಿಗುತ್ತದೆ ಎಂದು ನಾವು ಭಾವಿಸಿರಲಿಲ್ಲ ಎಂದು ಹೇಳಿದ್ದಾರೆ.

ಮುಂದಿನ 2 ವರ್ಷದಲ್ಲಿ ದೇಶದಲ್ಲಿ 200 ಆಫ್ ಲೈನ್‍ಮಳಿಗೆಗಳನ್ನು ಆರಂಭಿಸಲಾಗುವುದು ಎಂದು ಕ್ಸಿಯೋಮಿ ಹೇಳಿದೆ. ಮುಂದೆ ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್ ನಲ್ಲಿ ಕ್ಸಿಯೋಮಿ
ಆಫ್‍ಲೈನ್ ಮಳಿಗೆ ಆರಂಭಿಸಲಿದೆ.

ಇದನ್ನೂ ಓದಿ: ಭಾರತದ ಫೋನ್ ಮಾರುಕಟ್ಟೆಯಲ್ಲಿ ಕ್ಸಿಯೋಮಿ ಈಗ ಎಷ್ಟನೇ ಸ್ಥಾನದಲ್ಲಿದೆ? ಯಾವ ಕಂಪೆನಿಯ ಪಾಲು ಎಷ್ಟು?

 

Leave a Reply

Your email address will not be published. Required fields are marked *