ಬೆಂಗಳೂರು: ಕ್ಸಿಯೋಮಿ ಕಂಪೆನಿಯ ಮೊದಲ ಆಂಡ್ರಾಯ್ಡ್ ಒನ್ ಸ್ಮಾರ್ಟ್ ಫೋನ್ ಬೆಲೆ ಕಡಿಮೆಯಾಗಿದೆ. ಸೆಪ್ಟೆಂಬರ್ ನಲ್ಲಿ ಎಂಐ ಎ1 ಫೋನ್ 14,999 ರೂ. ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಆದರೆ ಈಗ ಈ ಫೋನ್ 13,999 ರೂ. ಬೆಲೆಯಲ್ಲಿ ಲಭ್ಯವಿದೆ.
ಕ್ಸಿಯೋಮಿ ಇಂಡಿಯಾದ ಆಡಳಿತ ನಿರ್ದೇಶಕ ಮನು ಕುಮಾರ್ ಜೈನ್ ಟ್ವೀಟ್ ಮಾಡಿ 1 ಸಾವಿರ ರೂ. ಬೆಲೆ ಇಳಿಕೆಯಾಗಿದೆ ಎಂದು ತಿಳಿಸಿದ್ದಾರೆ. ಬೆಲೆ ಇಳಿಕೆ ಕೆಲ ದಿನಗಳಿಗೆ ಮಾತ್ರ ಇಳಿಕೆಯಾಗಿಲ್ಲ. ಶಾಶ್ವತವಾಗಿ ಎ1 ಫೋನಿನ ಬೆಲೆಯನ್ನು ಇಳಿಸಲಾಗಿದೆ ಎಂದು ಮನು ಕುಮಾರ್ ಜೈನ್ ಟ್ವೀಟ್ ಮಾಡಿದ್ದಾರೆ. ಈ ಫೋನ್ ಕ್ಸಿಯೋಮಿ ಇಂಡಿಯಾದ ಆನ್‍ಲೈನ್ ಸ್ಟೋರ್ Mi.com ಮತ್ತು ಫ್ಲಿಪ್‍ಕಾರ್ಟ್ ನಲ್ಲಿ ಖರೀದಿಸಬಹುದಾಗಿದ್ದು, ಕಪ್ಪು, ಚಿನ್ನ, ಗುಲಾಬಿ ಚಿನ್ನ ಬಣ್ಣದಲ್ಲಿ ಲಭ್ಯವಿದೆ.
Advertisement
ಏನಿದು ಗೂಗಲ್ ಆಂಡ್ರಾಯ್ಡ್ ಒನ್?
ಗೂಗಲ್ ಈ ಹಿಂದೆ ಏಷ್ಯಾ, ಆಫ್ರಿಕಾ ಖಂಡದಲ್ಲಿ ಮಾರುಕಟ್ಟೆ ವಿಸ್ತರಿಸಲು ಆಂಡ್ರಾಯ್ಡ್ ಓಎಸ್ ಆಧಾರಿತ ಆಂಡ್ರಾಯ್ಡ್ ಒನ್ ಫೋನ್‍ಗಳನ್ನು ಬಿಡುಗಡೆ ಮಾಡಿತ್ತು. ಈ ಫೋನ್‍ಗಳ ಬೆಲೆ ಕಡಿಮೆ ಇದ್ದು, ಗೂಗಲ್ ಮಾನದಂಡಕ್ಕೆ ಅನುಗುಣವಾಗಿ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಗಳನ್ನು ಹೊಂದಿದ ಫೋನ್‍ಗಳನ್ನು ಕಂಪೆನಿಗಳು ತಯಾರಿಸಬೇಕಾಗುತ್ತದೆ. ವಿಶ್ವದಲ್ಲೇ ಮೊದಲ ಬಾರಿಗೆ 2014ರಲ್ಲಿ ಭಾರತದಲ್ಲಿ ಆಂಡ್ರಾಯ್ಡ್ ಓನ್ ಫೋನ್‍ಗಳು ಬಿಡುಗಡೆಯಾಗಿತ್ತು. ಭಾರತದಲ್ಲಿ ಕಾರ್ಬನ್, ಮೈಕ್ರೋಮ್ಯಾಕ್ಸ್, ಸ್ಪೈಸ್ ಕಂಪೆನಿಗಳು ಆಂಡ್ರಾಯ್ಡ್ ಓನ್ ಅಡಿಯಲ್ಲಿ ಫೋನ್ ತಯಾರಿಸಿತ್ತು. ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 5 LTE ಫೋನ್‍ಗಳ ಪಟ್ಟಿ
Advertisement
Great news Mi Fans: announcing a permanent price drop of ₹ 1000 on Mi A1! ????#MiA1: picture perfect flagship dual camera phone. Now available for a perfect price of ₹13,999!
Buy it from https://t.co/lzFXOcGyGQ and @Flipkart. pic.twitter.com/PWplnIMC71
— Manu Kumar Jain (@manukumarjain) December 10, 2017
Advertisement
ಕ್ಸಿಯೋಮಿ ಎಂಐ ಎ1 ಗುಣವೈಶಿಷ್ಟ್ಯಗಳು:
ಬಾಡಿ ಮತ್ತು ಡಿಸ್ಪ್ಲೇ:
155.4*75.8*7.3 ಮಿ.ಮೀ, ಹೈ ಬ್ರಿಡ್ ಡ್ಯುಯಲ್ ಸಿಮ್, 5.5 ಇಂಚಿನ ಎಲ್‍ಟಿಪಿಎಸ್ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್( 1080*1920 ಪಿಕ್ಸೆಲ್, 16:9 ಅನುಪಾತ, 403 ಪಿಪಿಐ) ಕಾರ್ನಿಂಗ್ ಗೊರಿಲ್ಲ ಗ್ಲಾಸ್ 3.
Advertisement
ಪ್ಲಾಟ್‍ಫಾರಂ ಮತ್ತು ಮಮೊರಿ:
ಆಂಡ್ರಯ್ಡ್ 7.1.2 ಆಂಡ್ರಾಯ್ಡ್ ನೂಗಟ್ ಓಎಸ್, ಕ್ವಾಲಕಂ ಸ್ನಾಪ್ ಡ್ರಾಗನ್ 625 ಅಕ್ಟಾಕೋರ್ 2.0 GHz ಕಾರ್ಟೆಕ್ಸ್ ಎ53 ಪ್ರೊಸೆಸರ್, ಅಡ್ರಿನೋ 506 ಗ್ರಾಫಿಕ್ಸ್ ಪ್ರೊಸೆಸರ್, ಎರಡನೇ ಸ್ಲಾಟ್ ನಲ್ಲಿ ಎಸ್‍ಡಿ ಕಾರ್ಡ್ ಹಾಕಿದ್ರೆ 128 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 64 ಜಿಬಿ ಆಂತರಿಕ ಮೆಮೊರಿ, 4ಜಿಬಿ RAM
ಕ್ಯಾಮೆರಾ ಮತ್ತು ಇತರೇ:
ಹಿಂದುಗಡೆ ಡ್ಯುಯಲ್ 12 ಎಂಪಿ ಕ್ಯಾಮೆರಾ, ಮುಂದುಗಡೆ 5 ಎಂಪಿ ಕ್ಯಾಮೆರಾ, ಯುಎಸ್‍ಬಿ ಟೈಪ್ 2.0, ಫಿಂಗರ್ ಪ್ರಿಂಟ್ ಸ್ಕ್ಯಾನರ್, ಫಾಸ್ಟ್ ಬ್ಯಾಟರಿ ಚಾರ್ಜಿಂಗ್, ತೆಗೆಯಲು ಅಸಾಧ್ಯವಾದ ಲಿಯಾನ್ 3080 ಎಂಎಎಚ್ ಬ್ಯಾಟರಿ.