ಬೀಜಿಂಗ್: ಚೀನಾದ ಅಧ್ಯಕ್ಷನಾಗಿ (China President) ಕ್ಸಿ ಜಿನ್ಪಿಂಗ್ (Xi Jinping) 3ನೇ ಅವಧಿಗೆ ಮತ್ತೆ ಆಯ್ಕೆಯಾಗಿದ್ದು, ಈ ಮೂಲಕ ಅವರು ದಾಖಲೆ ಸೃಷ್ಟಿಸಿದ್ದಾರೆ.
ಸಂಸತ್ತಿನ ಸುಮಾರು 3,000 ಸದಸ್ಯರು ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ನ ಜಿನ್ಪಿಂಗ್ಗೆ ಚೀನಾದ ಅಧ್ಯಕ್ಷರಾಗಲು ಸರ್ವಾನುಮತದಿಂದ ಮತ ಹಾಕಿದ್ದಾರೆ. ಚುನಾವಣೆಯಲ್ಲಿ ಕ್ಸಿಗೆ ಪ್ರತಿಸ್ಪರ್ಧಿಯಾಗಿ ಯಾವುದೇ ಅಭ್ಯರ್ಥಿ ಇರಲಿಲ್ಲ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಆತಂಕ ಸೃಷ್ಟಿಸಿರುವ H3N2ಗೆ ರಾಜ್ಯದಲ್ಲಿ ಮೊದಲಿ ಬಲಿ
- Advertisement 2
- Advertisement 3
ಚೀನಾದ ಹೊಸ ಸಂಸತ್ತಿನ ಅಧ್ಯಕ್ಷರಾಗಿ ಝಾವೊ ಲೆಜಿ ಮತ್ತು ಹೊಸ ಉಪಾಧ್ಯಕ್ಷರಾಗಿ ಹಾನ್ ಝೆಂಗ್ ಅವರನ್ನು ಆಯ್ಕೆ ಮಾಡಲಾಗಿದೆ. ಅವರಿಬ್ಬರೂ ಕ್ಸಿ ಅವರ ಹಿಂದಿನ ಪಾಲಿಟ್ಬ್ಯುರೊ ಸ್ಥಾಯಿ ಸಮಿತಿಯ ಪಕ್ಷದ ನಾಯಕರ ತಂಡದಲ್ಲಿದ್ದರು ಎನ್ನಲಾಗಿದೆ.
- Advertisement 4
ಕಳೆದ ವರ್ಷ ಅಕ್ಟೋಬರ್ನಲ್ಲಿ, ಕ್ಸಿ ಜಿನ್ಪಿಂಗ್ ಅವರು ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ 3ನೇ ಬಾರಿ 5 ವರ್ಷಗಳ ಅವಧಿಗೆ ಮರು ಆಯ್ಕೆಯಾಗಿದ್ದು, ಈ ಮೂಲಕ ದಾಖಲೆ ಸೃಷ್ಟಿಸಿದ್ದರು. ಇದೀಗ ಕ್ಸಿ ಅವರು ಮಾವೋ ಝೆಡಾಂಗ್ ನಂತರ ದೇಶದ ಅತ್ಯಂತ ಶಕ್ತಿಶಾಲಿ ನಾಯಕರಾಗಿ ತಮ್ಮ ಹಿಡಿತವನ್ನು ಬಿಗಿಗೊಳಿಸುತ್ತಿದ್ದಾರೆ. ಇದನ್ನೂ ಓದಿ: ಚರ್ಚ್ ಮೇಲೆ ಗುಂಡಿನ ದಾಳಿ 7 ಮಂದಿ ಸಾವು- ಹಲವರಿಗೆ ಗಾಯ