ಮುಂಬೈ: ದೇಶಾದ್ಯಂತ ಇಂದು ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ ನಡೆದಿದೆ. ಭಾರತದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ವರ್ಲ್ಡ್ ವ್ರೆಸ್ಲಿಂಗ್ ಎಂಟರ್ಟೈನ್ಮೆಂಟ್ (WWE) ಡಬ್ಲ್ಯೂ ಡಬ್ಲ್ಯೂ ಇ ಸೂಪರ್ ಸ್ಟಾರ್ ಜಾನ್ ಸಿನಾ ಮಡಕೆ ಒಡೆಯುತ್ತಿರುವ ಫೋಟೋ ಹಂಚಿಕೊಂಡು ಶುಭ ಕೋರಿದೆ.
ಭಾರತದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಹ್ಯಾಪಿ ಜನ್ಮಾಷ್ಟಮಿ ಇಂಡಿಯಾ ಎಂದು ಹ್ಯಾಷ್ಟ್ಯಾಗ್ ಬಳಕೆ ಮಾಡಿ ಫೋಟೋ ಹಂಚಿಕೊಂಡು WWE ಟ್ವೀಟ್ ಮಾಡಿದೆ. ಫೋಟೋದಲ್ಲಿ ಜಾನ್ ಸಿನಾ ಏಣಿಯ ಮೇಲೆ ಕೂತು ಎರಡು ಕೈ ಮೇಲೆತ್ತಿ ಮಡಕೆಯನ್ನು ಹಿಡಿದಿರುವಂತೆ ಚಿತ್ರಿಸಲಾಗಿದೆ. ಈ ಬಗ್ಗೆ ಕಾಮೆಂಟ್ ಮಾಡಿರುವ ನೆಟ್ಟಿಗರು, ಮನಿ ಇನ್ ದಿ ಬ್ಯಾಂಕ್ಗಿಂತ ಮೊಸರು ಇನ್ ದಿ ಬ್ಯಾಂಕ್ ಚೆನ್ನಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ರಾಷ್ಟ್ರಗೀತೆ ಹಾಡುತ್ತಿದ್ದ ಇಶನ್ ಕಿಶನ್ಗೆ ಕಚ್ಚಿದ ಜೇನುನೊಣ
Happy #Janmashtami, #India! ✨ pic.twitter.com/erlphiYrUD
— WWE India (@WWEIndia) August 19, 2022
ಈ ಫೋಟೋ ಕಂಡ WWE ಅಭಿಮಾನಿಗಳು ಸಂಭ್ರಮಿಸಿದ್ದು, ತಮ್ಮ ನೆಚ್ಚಿನ WWE ಸೂಪರ್ ಸ್ಟಾರ್ ಈ ರೀತಿ ಕಾಣಿಸಿಕೊಂಡಿರುವುದಕ್ಕೆ ಸಂತಸ ಪಟ್ಟಿದ್ದಾರೆ. ಭಾರತ ಸೇರಿದಂತೆ ವಿಶ್ವದಾದ್ಯಂತ WWEಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನದಲ್ಲಿ ಬಿರುಕು – ಚಹಲ್ರನ್ನು ಕೈಬಿಟ್ರಾ ಧನಶ್ರೀ?