– ಬುಮ್ರಾ ಫಿಟ್ ಇಲ್ಲದಿದ್ರೆ 200 ರನ್ ಲೀಡ್ ಇದ್ರೂ ಸಾಲಲ್ಲ: ಗವಾಸ್ಕರ್
– ಬುಮ್ರಾ ಬೌಲಿಂಗ್ ಮಾಡುವ ಬಗ್ಗೆ ಭಾನುವಾರ ನಿರ್ಧಾರ
ಸಿಡ್ನಿ: ಬಾರ್ಡರ್ – ಗವಾಸ್ಕರ್ ಸರಣಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದೆ. ಈ ನಡುವೆ ಪಂದ್ಯದ ನಾಯಕ ಜಸ್ಪ್ರೀತ್ ಬುಮ್ರಾ (Jasprit Bumra) ಮೈದಾನ ತೊರೆದು ಶಾಕ್ ಕೊಟ್ಟಿದ್ದಾರೆ.
Jasprit Bumrah has left the SCG: https://t.co/0nmjl6Qp2a pic.twitter.com/oQaygWRMyc
— cricket.com.au (@cricketcomau) January 4, 2025
ಸಿಡ್ನಿಯಲ್ಲಿ (Sydney) ನಡೆಯುತ್ತಿರುವ ಕೊನೇ ಪಂದ್ಯದಲ್ಲಿ ಭೋಜನ ವಿರಾಮದ ಬಳಿಕ ಬುಮ್ರಾ ಕೇವಲ ಒಂದೇ ಓವರ್ ಬೌಲಿಂಗ್ ಮಾಡಿದರು. ಬಳಿಕ ಸ್ಥಳೀಯ ಕಾಲಮಾನ 2 ಗಂಟೆ ಸುಮಾರಿಗೆ ಮೈದಾನ ತೊರೆದರು. ಬುಮ್ರಾ ಬದಲಿಗೆ ಪ್ರಸಿದ್ಧ್ ಕೃಷ್ಣ ಅವರನ್ನು ಕಣಕ್ಕಿಳಿಸಲಾಯಿತು. ಇದನ್ನೂ ಓದಿ: KSRTC Ticket Price Hike – ಬೆಂಗಳೂರಿನಿಂದ ನಿಮ್ಮ ಜಿಲ್ಲೆಗೆ ಎಷ್ಟು ದರ ಏರಿಕೆ? ಇಲ್ಲಿದೆ ಕಂಪ್ಲೀಟ್ ಲಿಸ್ಟ್
ಮೈದಾನ ತೊರೆದ ಬುಮ್ರಾ ತಂಡದ ವೈದ್ಯ, ಬಿಸಿಸಿಐ ಅಧಿಕಾರಿ ಅಂಶುಮಾನ್ ಉಪಾಧ್ಯಾಯ ಮತ್ತು ಭದ್ರತಾ ಸಿಬ್ಬಂದಿ ಜೊತೆ, ಡ್ರೆಸ್ಸಿಂಗ್ ರೂಂನಿಂದ ಆಸ್ಪತ್ರೆಯ ಕಡೆಗೆ ಹೊರಟರು. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿದ ಬಳಿಕ ಪುನಃ ಡ್ರೆಸ್ಸಿಂಗ್ ರೂಮ್‌ಗೆ ಮರಳಿದ್ದಾರೆ. ಒಂದು ವೇಳೆ, ಗಂಭೀರ ಸಮಸ್ಯೆ ಇದ್ದರೆ, ಆಸ್ಪತ್ರೆಗೆ ದಾಖಲಿಸದೇ ಬೇರೆ ವಿಧಿಯಿಲ್ಲ ಎಂದು ವರದಿಯಾಗಿದೆ.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಸಿದ್ಧ್ ಕೃಷ್ಣ, ಬುಮ್ರಾ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದಾರೆ ಎಂದು ಬಹಿರಂಗಪಡಿಸಿದರು. ಸದ್ಯ ಅವರು 3ನೇ ದಿನದಾಟಕ್ಕೆ ಕಣಕ್ಕಿಳಿಯುತ್ತಾರಾ ಅನ್ನೋ ಅನುಮಾನವೂ ಶುರುವಾಗಿದೆ. ಈ ನಡುವೆ ಬುಮ್ರಾ ಅವರು ಬ್ಯಾಟ್ ಮಾಡುವ ಪರಿಸ್ಥಿತಿಯಲ್ಲಿದ್ದಾರೆ. ಆದ್ರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವ ನಿರ್ಧಾರವನ್ನು ಭಾನುವಾರ (ಜ.5) ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.
ಸದ್ಯ ಆಸೀಸ್ ವಿರುದ್ಧ ನಡೆಯುತ್ತಿರುವ ಈ ಸರಣಿಯ ಕೊನೇ ಪಂದ್ಯದಲ್ಲಿ ಅತಿದೊಡ್ಡ ಜವಾಬ್ದಾರಿ ಬುಮ್ರಾ ಅವರಮೇಲಿದೆ. ಇದುವರೆಗೆ 5 ಟೆಸ್ಟ್ ಪಂದ್ಯದ 9 ಇನ್ನಿಂಗ್ಸ್‌ನಲ್ಲಿ 32 ವಿಕೆಟ್ ಪಡೆದುಕೊಂಡಿದ್ದಾರೆ. ಕೊನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲೂ ಆಸೀಸ್ ಬ್ಯಾಟರ್‌ಗಳನ್ನ ತೀವ್ರವಾಗಿ ಕಾಡಿದರು. ಇದೀಗ ಪಂದ್ಯ ಗೆದ್ದು ಸರಣಿಯನ್ನು ಡ್ರಾಗೊಳಿಸುವ ನಿಟ್ಟಿನಲ್ಲಿ ಬುಮ್ರಾ ಅವರ ಪಾತ್ರ ಪ್ರಮುಖವಾಗಿದೆ. ಹಾಗಾಗಿ ಭಾನುವಾರ ಬುಮ್ರಾ ಅವರ ಬೌಲಿಂಗ್ ಬಗ್ಗೆ ನಿರ್ಧಾರವಾಗಲಿದೆ. ಇದನ್ನೂ ಓದಿ: 32 ವರ್ಷಗಳಿಂದ ಸ್ನಾನವನ್ನೇ ಮಾಡದ ಛೋಟಾ ಬಾಬಾ – ‘ಕುಂಭ ಮೇಳ’ದ ಆಕರ್ಷಣೆ ಕೇಂದ್ರಬಿಂದು ಇವರೇ!
ಸದ್ಯ ಬುಮ್ರಾ ಅವರ ಆರೋಗ್ಯದ ಬಗ್ಗೆ ಮುಖ್ಯ ಕೋಚ್ ಗೌತಂ ಗಂಭೀರ್ ಅಥವಾ ಬಿಸಿಸಿಐನಿಂದ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಒಂದು ವೇಳೆ, 2ನೇ ಇನ್ನಿಂಗ್ಸ್ ನಲ್ಲಿ ಅವರು ಆಡಲು ಸಾಧ್ಯವಾಗದೇ ಇದ್ದರೆ, ಟೀಂ ಇಂಡಿಯಾಗೆ ಬಹುದೊಡ್ಡ ಹೊಡೆತ ಬೀಳಲಿದೆ. ಬುಮ್ರಾಗೆ ಅತಿಯಾದ ವರ್ಕ್ ಲೋಡ್ ಇದೆ ಎಂದು ನಾಯಕ ರೋಹಿತ್ ಶರ್ಮಾ ಕೂಡಾ ಹೇಳಿದ್ದರು.
ಬುಮ್ರಾ ಅವರ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ನಲ್ಲಿ ಬುಮ್ರಾ 10 ಓವರ್ ಎಸೆದು, 2 ವಿಕೆಟ್ ಪಡೆದುಕೊಂಡಿದ್ದಾರೆ. ವೇಗಿಗಳಾದ ಸಿರಾಜ್ 16, ಪ್ರಸಿದ್ದ್ ಕೃಷ್ಣ 15 ಓವರ್ ಗಳನ್ನು ಎಸೆದಿದ್ದಾರೆ. ಇವರಿಬ್ಬರೂ, ತಲಾ ಮೂರು ವಿಕೆಟ್ ಅನ್ನು ಪಡೆದುಕೊಂಡರೆ, ನಿತೀಶ್ ಕುಮಾರ್ ರೆಡ್ಡಿ ಎರಡು ವಿಕೆಟ್ ಪಡೆದರು. ಇದನ್ನೂ ಓದಿ: BMTC Ticket Price Hike| ಮೆಜೆಸ್ಟಿಕ್‌ನಿಂದ ನಿಮ್ಮ ಏರಿಯಾಗೆ ಎಷ್ಟು ರೂ.? ಇಲ್ಲಿದೆ ಕಂಪ್ಲೀಟ್ ಲಿಸ್ಟ್
ಬುಮ್ರಾ ಫಿಟ್ ಇಲ್ಲ ಅಂದ್ರೆ 200 ರನ್ ಕೂಡ ಸಾಲಲ್ಲ:
ಬುಮ್ರಾ ಅವರು ಮೈದಾನ ತೊರೆದ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್, ಬುಮ್ರಾ ಬೌಲಿಂಗ್ ಮಾಡಲು ಫಿಟ್ ಇದ್ದರೆ, 150 ರನ್ ಟಾರ್ಗೆಟ್ ಇದ್ದರೂ ಭಾರತಕ್ಕೆ ಗೆಲ್ಲುವ ಅವಕಾಶವಿದೆ. ಒಂದು ವೇಳೆ ಫಿಟ್ ಇಲ್ಲವಾದ್ರೆ ಭಾರತ 200 ರನ್ ಲೀಡ್ ಕಾಯ್ಡುಕೊಂಡರೂ ಸಾಕಾಗುವುದಿಲ್ಲ. ಸದ್ಯ ಭಾರತ 145 ರನ್‌ಗಳ ಮುನ್ನಡೆಯಲ್ಲಿದೆ. ಇನ್ನೂ 40 ರನ್ ಗಳಿಸಿ 185 ರನ್ ಟಾರ್ಗೆಟ್ ಕೊಟ್ಟರೂ ಭಾರತಕ್ಕೆ ಗೆಲ್ಲುವ ಅವಕಾಶವಿದೆ. ಆದ್ರೆ ಅದು ಬುಮ್ರಾ ಫಿಟ್‌ನೆಸ್ ಮೇಲೆ ನಿರ್ಧಾರವಾಗಲಿದೆ.