– ಗೋಲಿಬಾರ್ ಮಾಡಿದ್ದು ತಪ್ಪು
ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್ ಸಿ) ಜಾರಿ ವಿರುದ್ಧ ದೇಶಾದ್ಯಂತ ವಿರೋಧ ವ್ಯಕ್ತವಾಗಿ ಪ್ರತಿಭಟನೆ ಕಾವು ಹೆಚ್ಚಾಗುತ್ತಿದೆ. ಎಲ್ಲೆಡೆ ಪ್ರತಿಭಟನೆ ಜೋರಾಗಿದ್ದು, ರಾಜ್ಯದಲ್ಲೂ ಗೋಲಿಬಾರ್ ನಡೆದು ಇಬ್ಬರು ಮೃತ ಪಟ್ಟಿದ್ದಾರೆ. ಪರ ವಿರೋಧ ಹೆಚ್ಚಾಗುತ್ತಿರುವ ಬೆನ್ನಲ್ಲೇ ಈ ಬಗ್ಗೆ ಹಿರಿಯ ಸಂಶೋಧಕ ಚಿದಾನಂದ ಮೂರ್ತಿ ಅವರು ಪ್ರತಿಕ್ರಿಯಿಸಿದ್ದು, ಪೌರತ್ವ ಕಾಯ್ದೆಯ ಜಾರಿ ಮಾಡಿರುವುದನ್ನು ಸ್ವಾಗತ ಮಾಡಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ಮುಗಿಸಿ ಟೌನ್ ಹಾಲ್ ಬಳಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ಕಾಯ್ದೆಯನ್ನು ಸ್ವಾಗತಿಸುತ್ತೇನೆ. ಮೋದಿ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆಗೆ ಸಂಪೂರ್ಣ ಬೆಂಬಲವಿದೆ. ಯಾವುದೇ ಧರ್ಮದವರಿಗೆ ಅನ್ಯಾಯ ಮಾಡುವ ಕ್ರಮ ಈ ಕಾಯ್ದೆಯದ್ದಲ್ಲ. ಪಾಕಿಸ್ತಾನದಿಂದ ಬಂದಿರುವ ಹಿಂದೂಗಳು, ಕ್ರೈಸ್ತ ಮತ್ತು ಪಾರ್ಸಿಗಳಿಗೆ ಪೌರತ್ವ ಕೊಡುವುದು ಸರಿಯಾದ ಕ್ರಮ. ಇದನ್ನು ವಿರೋಧಿಸುವುದು ಸರಿಯಲ್ಲ ಎಂದರು.
Advertisement
Advertisement
ಇನ್ನೂ ಕೆಲವರು ಪ್ರತಿಭಟನೆ ಮಾಡುತ್ತಿದ್ದಾರೆ. ಕೆಲವರು ಈ ಬಗ್ಗೆ ತಿಳಿಯದೇ ಪ್ರತಿಭಟನೆ ಮಾಡುತ್ತಿದ್ದಾರೆ. ಎಲ್ಲೂ ಕೂಡ ಹಿಂಸಾತ್ಮಕವಾಗಿ ಹೋರಾಟ ಮಾಡಬಾರದು. ಅಲ್ಲದೇ ರಾಜ್ಯದಲ್ಲಿ ಗೋಲಿಬಾರ್ ಆಗಿದ್ದು ಕೂಡ ತಪ್ಪೇ. ಗೋಲಿಬಾರ್ ಮಾಡಬಾರದಿತ್ತು. ಪ್ರತಿಭಟನೆ ಮಾಡುವುದಾದರೆ ಹಿಂಸಾತ್ಮಕ ನಡೆ ಸಲ್ಲದು ಅಹಿಂಸಾತ್ಮಕ ಹೋರಾಟ ಮಾಡಲಿ ಎಂದರು.