ವಾಜಪೇಯಿಗೆ ಚಿನ್ನದ ಪದಕ ಅರ್ಪಿಸಿದ ಭಜರಂಗ್ ಪೂನಿಯಾ

Public TV
1 Min Read
Bajrang Punia ATAL

ಜಕಾರ್ತ: ಏಷ್ಯನ್ ಕ್ರೀಡಾ ಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದು ಕೊಟ್ಟ ಕುಸ್ತಿಪಟು ಬಜರಂಗ್ ಪೂನಿಯಾ ತಮ್ಮ ಪದಕವನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಅರ್ಪಿಸಿದ್ದಾರೆ.

ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದು ಕೊಂಡಿರುವ ಬಜರಂಗ್ ಪೂನಿಯಾ, ನನ್ನ ಏಷ್ಯನ್ ಗೇಮ್ಸ್ ಚಿನ್ನದ ಪದಕವನ್ನು ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಅರ್ಪಿಸುತ್ತಿರುವುದಾಗಿ ತಿಳಿಸಿದ್ದಾರೆ.

ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಪುರುಷರ ಫ್ರೀ ಸ್ಟೈಲ್ ಕುಸ್ತಿಯ 65 ಕೆಜಿ ವಿಭಾಗದಲ್ಲಿ ಬಜರಂಗ್ ಪೂನಿಯಾ ಸ್ವರ್ಣದ ಪದಕ ಗೆದ್ದಿದ್ದರು. ಈ ಮೂಲಕ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕದ ತಂದಿದ್ದರು. ಜಪಾನ್ ದೇಶದ ಟಕಟಾನಿ ಡೈಚಿ ವಿರುದ್ಧ ನಡೆದ ಅಂತಿಮ ಸುತ್ತಿನಲ್ಲಿ 11-8 ಅಂಕಗಳ ಅಂತರದಿಂದ ಗೆಲ್ಲುವ ಪಡೆದಿದ್ದರು. ಇದಕ್ಕೂ ಮೊದಲು ಖಸನೋವಾ ಸಿರೋಜಿದ್ದಿನ್ (ಉಝಬೇಕಿಸ್ತಾನ), ಫಯಾಝೀವ್ ಅಬ್ದುಲ್‍ಖಾಸೀಮ್ (ತಜಕೀಸ್ತಾನ್) ಮತ್ತಿ ಬಚ್ಚೂಲೂನ್ ಬತಮಗನೈ(ಮಂಗೋಲಿಯಾ) ವಿರುದ್ಧ ಗೆಲುವು ಸಾಧಿಸಿ ಪೂನಿಯಾ ಫೈನಲ್ ಗೆ ಪ್ರವೇಶ ಪಡೆದಿದ್ದರು.

2014ರಲ್ಲಿ ದಕ್ಷಿಣ ಕೊರಿಯಾದ ಇಂಚಿಯಾನ್ ಏಷ್ಯನ್ ಕ್ರೀಡಾ ಕೂಟದಲ್ಲಿ ಯೋಗೇಶ್ವರ್ ದತ್ ಪುರಷರ ಫ್ರೀ ಸ್ಟೈಲ್ 65 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದರು. ಯೋಗೇಶ್ವರ್ ಗರಡಿಯಲ್ಲಿ ಪಳಗಿರುವ ಪೂನಿಯಾ ಗುರುವಿನ ದಾಖಲೆಯನ್ನು ಸರಿಗಟ್ಟಿದ್ದಾರೆ. ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆದಿದ್ದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿಯೂ ಪೂನಿಯಾ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. 2014ರಸ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *