ಮುಂಬೈ: ನವದೆಹಲಿಯಲ್ಲಿ (Delhi) ಫೆ.11 ಮತ್ತು 12 ರಂದು ಚೊಚ್ಚಲ ಆವೃತ್ತಿ ಮಹಿಳಾ ಐಪಿಎಲ್ನ (WIPL) ಆಟಗಾರ್ತಿಯರ ಹರಾಜು (Player Auction) ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳಿಂದ ವರದಿಯಾಗಿದೆ.
Advertisement
ಈಗಾಗಲೇ ಮಹಿಳಾ ಐಪಿಎಲ್ನ ಮೊದಲ ಹಂತವಾಗಿ ಫ್ರಾಂಚೈಸ್ಗಳ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, 5 ತಂಡಗಳು ರೂಪುಗೊಂಡಿವೆ. ಈ ತಂಡಗಳಿಗೆ ಆಟಗಾರ್ತಿಯರನ್ನು ಇನ್ನಷ್ಟೇ ಬಿಡ್ ಮೂಲಕ ಖರೀದಿಸಬೇಕಾಗಿದೆ. ಇದೀಗ ಬಿಸಿಸಿಐ (BCCI) ಆಪ್ತ ಮೂಲಗಳ ಪ್ರಕಾರ ಫೆ. 2ನೇ ವಾರ 11 ಮತ್ತು 12 ರಂದು ಹರಾಜು ಪ್ರಕ್ರಿಯೆ ನಡೆಸಲು ಸಿದ್ಧತೆ ನಡೆದಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: Womens IPL: ದಾಖಲೆಯ 4,669 ಕೋಟಿ ರೂ.ಗೆ ಮಹಿಳಾ ಐಪಿಎಲ್ನ 5 ತಂಡಗಳು ಹರಾಜು
Advertisement
Advertisement
ಹರಾಜಿನಲ್ಲಿ ಭಾರತೀಯರು ಸಹಿತ ವಿದೇಶಿ ಆಟಗಾರ್ತಿಯರ ಖರೀದಿಗೆ 5 ಫ್ರಾಂಚೈಸ್ ಪೈಪೋಟಿ ನಡೆಸಲಿದೆ. ಹರ್ಮನ್ಪ್ರೀತ್ ಕೌರ್, ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್ ಸಹಿತ ರೇಣುಕಾ ಠಾಕೂರ್ ಸ್ಟಾರ್ ಆಟಗಾರ್ತಿಯರಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಮೇಹಾ ಪಟೇಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಕ್ಷರ್ ಪಟೇಲ್
Advertisement
ಕೆಲ ದಿನಗಳ ಹಿಂದೆ ನಡೆದ ಫ್ರಾಂಚೈಸ್ಗಳ ಹರಾಜಿನಲ್ಲಿ ಅದಾನಿ ಗ್ರೂಪ್ದಾಖಲೆಯ ಮೊತ್ತ ನೀಡಿ ಅಹಮದಾಬಾದ್ (Ahmedabad) ಮಹಿಳಾ ಐಪಿಎಲ್ ಫ್ರಾಂಚೈಸಿ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಅದಾನಿ ಗ್ರೂಪ್ 1,289 ಕೋಟಿ ರೂ. ನೀಡಿ ಅಹಮದಾಬಾದ್ ಫ್ರಾಂಚೈಸ್ನ್ನು ಖರೀದಿಸಿತ್ತು. ಇಂಡಿಯಾವಿನ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ 912.99 ಕೋಟಿ ರೂ. ನೀಡಿ ಮುಂಬೈ (Mumbai) ಫ್ರಾಂಚೈಸ್, ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ 901 ಕೋಟಿ ರೂ. ನೀಡಿ ಬೆಂಗಳೂರು (Bengaluru) ಫ್ರಾಂಚೈಸ್, ಜೆಎಸ್ಡಬ್ಲ್ಯೂ ಜಿಎಂಆರ್ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ 810 ಕೋಟಿ ರೂ. ನೀಡಿ ಡೆಲ್ಲಿ (Delhi) ಫ್ರಾಂಚೈಸ್ ಮತ್ತು ಕಾಪ್ರಿ ಗ್ಲೋಬಲ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ 757 ಕೋಟಿ ರೂ. ನೀಡಿ ಲಕ್ನೋ (Lucknow) ಫ್ರಾಂಚೈಸಿಯನ್ನು ಖರೀದಿಸಲು ಯಶಸ್ವಿಯಾಗಿತ್ತು. ಈ ಮೂಲಕ ಒಟ್ಟು 4,669.99 ಕೋಟಿ ರೂ.ಗೆ 5 ಫ್ರಾಂಚೈಸ್ಗಳು ಹರಾಜಾಗಿತ್ತು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k