– ತವರಲ್ಲಿ ಸೋತ ಆರ್‌ಸಿಬಿ
ಬೆಂಗಳೂರು: ಕೊನೆವರೆಗೂ ರೋಚಕತೆಯಿಂದ ಪಂದ್ಯದಲ್ಲಿ ತವರಲ್ಲೇ ಆರ್‌ಸಿಬಿಗೆ ಮುಂಬೈ ತಂಡ ಸೋಲುಣಿಸಿದೆ. ಕೊನೆಯ ಒಂದು ಬಾಲ್ ಇರುವಾಗಲೇ ಮುಂಬೈ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದ್ದು, ಆರ್‌ಸಿಬಿ ಹ್ಯಾಟ್ರಿಕ್ ಕನಸು ಭಗ್ನವಾಗಿದೆ.
Advertisement
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ ಆರ್‌ಸಿಬಿ 20 ಓವರ್‌ಗಳಿಗೆ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ಆರ್‌ಸಿಬಿ ನೀಡಿದ 168 ರನ್‌ಗಳ ಗುರಿ ಬೆನ್ನತ್ತಿದ ಮುಂಬೈ ಒಂದು ಬಾಲ್ ಬಾಕಿ ಇರುವಾಗ 6 ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಗೆದ್ದು ಬೀಗಿತು.
Advertisement
Advertisement
ಕೊನೇ ಓವರ್ ರೋಚಕತೆಯಿಂದ ಕೂಡಿತ್ತು. ಮುಂಬೈ ಗೆಲುವಿಗೆ 6 ರನ್ ಬೇಕಿತ್ತು. ಈ ವೇಳೆ ಮೊದಲ 4 ಎಸೆತಗಳಲ್ಲಿ ಕ್ರಮವಾಗಿ ಒಂದೊಂದರಂತೆ 4 ರನ್ ಮುಂಬೈ ತಂಡಕ್ಕೆ ಸೇರ್ಪಡೆಯಾಯಿತು. ಆದ್ರೆ ಇನ್ನೆರಡು ಎಸೆತಗಳಲ್ಲಿ 2 ರನ್ ಬೇಕಿದ್ದಾಗ ಕ್ರೀಸ್ ನಲ್ಲಿದ್ದ ಕಮಲಿನಿ ಬೌಂಡರಿ ಚಚ್ಚಿ ಮುಂಬೈಗೆ ಗೆಲುವು ತಂದುಕೊಟ್ಟರು.
Advertisement
ಅರ್ಧಶತಕ ಬಾರಿಸಿದ ಹರ್ಮನ್‌ಪ್ರೀತ್, 42 ರನ್ ಗಳಿಸಿದ ನ್ಯಾಟ್ ಸಿವರ್-ಬ್ರಂಟ್, ಅಮನ್‌ಜೋತ್ ಕೌರ್ (34) ತಂಡದ ಗೆಲುವಿಗೆ ಸಹಕಾರಿಯಾದರು.
ಆರ್‌ಸಿಬಿ ಪ್ರಮುಖ ಬ್ಯಾಟರ್‌ಗಳು ಕಳಪೆ ಪ್ರದರ್ಶನ ನೀಡಿರುವುದು ಕಂಡುಬಂತು. ಡ್ಯಾನಿ ವ್ಯಾಟ್-ಹಾಡ್ಜ್ 9, ರಾಘ್ವಿ ಬಿಸ್ಟ್ 1, ಕನಿಕಾ ಅಹುಜಾ 3 ರನ್ ಗಳಿಸಿ ನಿರಾಸೆ ಮೂಡಿಸಿದರು. ಸ್ಮೃತಿ ಮಂಧಾನ 26, ರಿಚಾ ಘೋಷ್ 28 ಗಳಿಸಿದರು.
ಎಲ್ಲಿಸ್ ಪೆರ್ರಿ ಸ್ಫೋಟಕ ಫಿಫ್ಟಿ ಆಟವು ತಂಡ ಸವಾಲಿನ ಮೊತ್ತ ಪೇರಿಸಲು ನೆರವಾಯಿತು. ಅಬ್ಬರಿಸಿದ ಪೆರ್ರಿ 43 ಬಾಲ್‌ಗಳಿಗೆ 81 ರನ್ (11 ಫೋರ್, 2 ಸಿಕ್ಸರ್) ಚಚ್ಚಿದರು.
ಮುಂಬೈ ಪರ ಅಮನ್‌ಜೋತ್ ಕೌರ್ 3 ವಿಕೆಟ್ ಕಿತ್ತು ಗಮನ ಸೆಳೆದರು. ಶಬ್ನಿಮ್ ಇಸ್ಮಾಯಿಲ್, ನ್ಯಾಟ್ ಸಿವರ್-ಬ್ರಂಟ್, ಹೇಲಿ ಮ್ಯಾಥ್ಯೂಸ್, ಸಂಸ್ಕೃತಿ ಗುಪ್ತಾ ತಲಾ 1 ವಿಕೆಟ್ ಪಡೆದರು.