ಉಡುಪಿ: ಟಿಪ್ಪು ಹೆಸರಿನಲ್ಲಿ ದೇವರಿಗೆ ಪೂಜೆ ಮಾಡುವುದು ಸರಿಯಲ್ಲ. ಅದು ದೇವರಿಗೆ ಮಾಡುವ ಅಪಮಾನ. ಇದರಿಂದ ದೇವರ ಶಕ್ತಿ ಕಡಿಮೆಯಾಗುತ್ತದೆ ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.
ಶೃಂಗೇರಿಯ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ನಡೆಯುವ ಸಲಾಂ ಆರತಿ ಪೂಜೆಗೆ ಸಂಬಂಧಿಸಿದಂತೆ ಉಡುಪಿಯ ಬೈಂದೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸಲಾಂ ತೆಗೆದು ದೇವರ ಹೆಸರಿನಲ್ಲಿ ಪೂಜೆ ಮಾಡಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಟಿಪ್ಪು ಹಿಂದೂ ವಿರೋಧಿ ಎಂಬುದಕ್ಕೆ ಆಧಾರವೇನಿದೆ..?: ಪ್ರೊ.ಟಿ ಮುರುಗೇಶಿ
Advertisement
Advertisement
ಟಿಪ್ಪು ನಮ್ಮ ಹಿಂದೂ ದೇವರನ್ನು ಅವಹೇಳನ ಮಾಡಿದ್ದಾನೆ. ಹಿಂದೂ ಸಮಾಜವನ್ನು ನಾಶ ಮಾಡಿದ್ದಾನೆ. ಇಂತಹ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ದೇವರಿಗೆ ಪೂಜೆ ಮಾಡುವುದು ಸರಿಯಲ್ಲ. ಅದು ದೇವರಿಗೆ ಮಾಡುವಂತಹ ಅಪಮಾನ. ಸಲಾಂ ಹೆಸರನ್ನು ಎಷ್ಟು ಬೇಗ ತೆಗೆದು ಹಾಕುತ್ತಾರೋ ಅಷ್ಟು ಶ್ರೇಯಸ್ಸು. ಇಲ್ಲದಿದ್ದರೆ ದೇವರ ಶಕ್ತಿ ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟಿಪ್ಪು ಹೆಸರಿನಲ್ಲಿ ನಿತ್ಯ ಸಲಾಂ ಮಂಗಳಾರತಿ ಬೇಡ – ಹೆಸರು ಬದಲಾಯಿಸುವಂತೆ ಕೊಲ್ಲೂರು ದೇವಾಲಯಕ್ಕೆ ಮನವಿ
Advertisement
ಶೀಘ್ರವಾಗಿ ಸಲಾಂ ತೆಗೆದು, ದೇವರ ಹೆಸರಿನಲ್ಲಿ ಪೂಜೆ ಮಾಡಲಿ. ಸಲಾಂ ಇನ್ನೂ ಸ್ವಲ್ಪ ವರ್ಷ ಕಳೆದರೆ, ಅಲ್ಲಾಹು ಸಲಾಂ ಎಂದು ಬರುವ ಸಾಧ್ಯತೆ ಇದೆ. ಅವರಲ್ಲಿ ಬೇಕಾದರೆ ಮಾಡಲಿ, ನಮ್ಮಲ್ಲಿ ಬೇಡ. ನಮ್ಮ ದೇವಸ್ಥಾನದಲ್ಲಿ ನಮ್ಮ ನಮ್ಮತನ ಇರಬೇಕು. ಹಿಂದೂ ದೇವರಿಗೆ ಇಂತಹ ಸಲಾಂ ಪೂಜೆ ನಡೆಯಬಾರದು ಎಂದು ಕಿಡಿ ಕಾರಿದ್ದಾರೆ.
Advertisement