ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ವಿಧಿವಶರಾಗಿ ಇಂದಿಗೆ ನಾಲ್ಕು ದಿನ ಕಳೆದಿದೆ. ನಾಳೆ 5ನೇ ದಿನವಾಗಿರುವುದರಿಂದ ಪುನೀತ್ ಸಮಾಧಿಗೆ ಕುಟುಂಬಸ್ಥರು ಭೇಟಿ ನೀಡಿ ಹಾಲು ತುಪ್ಪ ಕಾರ್ಯನೆರವೇರಿಸಲಿದ್ದಾರೆ. ಈ ಮಧ್ಯೆ ನಟ ಶಿವರಾಜ್ ಕುಮಾರ್ ತಮ್ಮನೊಗೆ ಹಾಲು ತುಪ್ಪ ಮಾಡುವ ನೋವು ಯಾರಿಗೂ ಬರಬಾರದು ಎಂದು ತಮ್ಮ ಅಳನ್ನು ತೊಡಿಕೊಂಡಿದ್ದಾರೆ.
Advertisement
ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪುನೀತ್ ಹೋಗಿದ್ದೆ ಒಂದು ದೊಡ್ಡ ಸಂಕಟವಾಗಿದೆ. ಅವನು ಹುಟ್ಟಬೇಕಾದರೆ ನನಗೆ 13 ವರ್ಷವಾಗಿತ್ತು. ನಾನು ಎತ್ತಿ ಆಡಿಸಿ ಬೆಳೆಸಿದ ಮಗು, ಅವನಿಗೆ ಹಾಲು ತುಪ್ಪ ಮಾಡುವುದು ಎಷ್ಟು ಸರಿ ಅಂತ ನಮಗೆ ಅರ್ಥ ಆಗುತ್ತಿಲ್ಲ. ಆ ನೋವು ಯಾರಿಗೆ ಬರಬಾರದು ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಪುನೀತ್ ಓದಿಸುತ್ತಿದ್ದ 1,800 ಮಕ್ಕಳ ಜವಾಬ್ದಾರಿ ಹೊತ್ತ ನಟ ವಿಶಾಲ್
Advertisement
Advertisement
ನಾಳೆ ಹಾಲು ತುಪ್ಪ ಆದ ಮೇಲೆ ಅಭಿಮಾನಿಗಳಿಗೆ ನೋಡಲು ಅವಕಾಶ ಮಾಡಲು ಸಿಎಂ ಜೊತೆ ಮಾತನಾಡಿತ್ತೇವೆ. ಸಿಎಂ ಸಹ ಈ ಬಗ್ಗೆ ಹೇಳುತ್ತಿದ್ದರು. ನಾಳೆ ಹಾಲು ತುಪ್ಪ ಮಾಡುವಾಗ ಅಭಿಮಾನಿಗಳನ್ನು ಬಿಡಲು ಆಗುವುದಿಲ್ಲ. ಆದರೆ ಕಾರ್ಯನೆರವೇರಿದ ಬಳಿಕ ಆದಷ್ಟು ಬೇಗ ಅಭಿಮಾನಿಗಳಿಗೆ ಸಮಾಧಿ ವೀಕ್ಷಿಸಲು ಅನುಕೂಲ ಮಾಡಿಕೊಡುತ್ತೇವೆ. ಅಭಿಮಾನಿಗಳು ನಮಗಿಂತ ಹತ್ತು ಪಟ್ಟು ನೋವು ಅನುಭವಿಸುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ನಾಲ್ವರ ಬಾಳಿಗೆ ಬೆಳಕಾದ ಅಪ್ಪು
Advertisement
ಅಭಿಮಾನಿಗಳ ಪ್ರೀತಿ ಪಡೆಯಲು ಮಕ್ಕಳು, ಕುಟುಂಬದವರು ಎಷ್ಟು ಪುಣ್ಯ ಮಾಡಿದ್ದೇವೋ. ಅಪ್ಪಾಜಿಯವರು ಅಷ್ಟು ಪ್ರೀತಿ ಗಳಿಸಿ ಕೊಟ್ಟು ಹೋಗಿದ್ದಾರೆ. ಪುನೀತ್ ಕೂಡ ಅಷ್ಟೇ ಪ್ರೀತಿ ಗಳಿಸಿಕೊಂಡು ಹೋಗಿದ್ದಾನೆ. ಅಭಿಮಾನಿಗಳು ಬೇರೆ ತರಹದ ಕೆಟ್ಟ ನಿರ್ಧಾರ ತೆಗೆದುಕೊಳ್ಳಬೇಡಿ. ಅಪ್ಪು ನಿಧನದ ಬಳಿಕ ಎಷ್ಟೋ ಫ್ಯಾನ್ಸ್ ಜೀವ ಬಿಟ್ಟಿದ್ದಾರಂತೆ ಅಂತ ಗೊತ್ತಾಯಿತು ದಯವಿಟ್ಟು ಯಾರು ಅಂತಹ ನಿರ್ಧಾರ ಕೈಗೊಳ್ಳಬೇಡಿ ನಿಮ್ಮ ಫ್ಯಾಮಿಲಿಗೆ ನಿಮ್ಮ ಜೀವ ಮುಖ್ಯವಾಗಿರುತ್ತದೆ ಎಂದರು.