LatestMain PostNational

ದೇಶದ ಭವಿಷ್ಯದ ಬಗ್ಗೆ ಚಿಂತಿತನಾಗಿದ್ದೇನೆ: ವರುಣ್‍ ಗಾಂಧಿ

ಲಕ್ನೋ: ಖಾಸಗೀಕರಣದಿಂದಾಗಿ ಉದ್ಯೋಗಗಳು ಸೀಮಿತವಾಗುತ್ತವೆ. ಇದರಿಂದಾಗಿ ಭಾರತದ ಭವಿಷ್ಯದ ಬಗ್ಗೆ ಚಿಂತಿತನಾಗಿದ್ದೇನೆ ಎಂದು ಸಂಸದ ವರುಣ್ ಗಾಂಧಿ ಕಳವಳ ವ್ಯಕ್ತಪಡಿಸಿದರು.

ಸುದ್ದಿಗರಾರರೊಂದಿಗೆ ಮಾತನಾಡಿದ ಅವರು, ನಿರುದ್ಯೋಗ ಸಮಸ್ಯೆಯ ಬಗ್ಗೆ ತಮ್ಮದೇ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ದೇಶದ ಕನಸುಗಳು ದೊಡ್ಡದಾಗಿದೆ. ಆದರೆ ಸಂಪನ್ಮೂಲಗಳು ಸೀಮಿತವಾಗಿವೆ. ದೇಶದಲ್ಲಿ 1.5 ಕೋಟಿ ಹುದ್ದೆಗಳು ಖಾಲಿ ಇದ್ದರೂ ನಿರುದ್ಯೋಗಿಗಳು ಹೆಚ್ಚುತ್ತಿದ್ದರು. ಕೋಟ್ಯಂತರ ನಿರುದ್ಯೋಗಿಗಳಿಗೆ ಮುಂದೆ ಏನಾಗುತ್ತದೆ ಎಂದು ತಿಳಿದಿಲ್ಲ ಎಂದು ಕಿಡಿಕಾರಿದರು.

ನಮ್ಮ ಹೋರಾಟ ಉದ್ಯೋಗ ಮತ್ತು ಆರ್ಥಿಕ ಸಮಾನತೆಗಾಗಿ ಆಗಿದೆ. ಸಂವಿಧಾನವು ಎಲ್ಲರಿಗೂ ಸಮಾನ ಆರ್ಥಿಕ ಅವಕಾಶಗಳನ್ನು ಪಡೆಯಬೇಕೆಂದು ಹೇಳುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಶ್ರಮಿಸಿದಾಗ ಇದು ಸಾಧ್ಯವಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಮಳೆಯಬ್ಬರಕ್ಕೆ ಮಾವು ಸೇರಿದಂತೆ ವಿವಿಧ ಬೆಳೆಗಳು ನಾಶ

ಇದೇ ವೇಳೆ ಕೇಂದ್ರದ ವಿರುದ್ಧ ತೆಗೆದುಕೊಂಡ ಅವರು, 2 ಕೋಟಿ ಜನರಿಗೆ ಉದ್ಯೋಗಗಳನ್ನು ನೀಡಿಲ್ಲ. ಜೊತೆಗೆ ಯಾರೊಬ್ಬರ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲ. ರೈತರ ಆದಾಯವೂ ದ್ವಿಗುಣಗೊಂಡಿಲ್ಲ ಆಕ್ರೋಶ ವ್ಯಕ್ತಪಡಿಸಿದರು.

ರಾಜಕೀಯವು ದೇಶವನ್ನು ಕಟ್ಟುವ ಸಾಧನವಾಗಿದೆ. ನಮ್ಮ ದೇಶದ ನಿಜವಾದ ಹೋರಾಟವೆಂದರೆ ನಿರುದ್ಯೋಗ ಮತ್ತು ಭ್ರಷ್ಟಾಚಾರದ ವಿರುದ್ಧವಾಗಿದೆ. ಇದರಿಂದಾಗಿ ರಾಜಕೀಯ ಪಕ್ಷಗಳು ಮತ್ತು ನಾಯಕರು ತಮ್ಮ ಪೈಪೋಟಿಯನ್ನು ಬಿಟ್ಟು ದೇಶದ ಭವಿಷ್ಯದ ಬಗ್ಗೆ ಯೋಚಿಸಬೇಕು ಎಂಸು ಸಲಹೆ ನೀಡಿದರು. ಇದನ್ನೂ ಓದಿ: ಹುಬ್ಬಳ್ಳಿ ಗಲಾಟೆ ಹಿಂದೆ ಯಾರೇ ಇರಲಿ, ಎತ್ತಾಕೊಂಡು ಒಳಗೆ ಹಾಕಿ: ಪ್ರಹ್ಲಾದ್ ಜೋಶಿ

Leave a Reply

Your email address will not be published.

Back to top button