ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬ್ಯಾಡಗೊಟ್ಟದಲ್ಲಿ ಕುಡಿಯುವ ನೀರಿನಲ್ಲಿ ಹುಳಗಳು ಪತ್ತೆಯಾಗಿವೆ.
ಬ್ಯಾಡಗೊಡ್ಡದಲ್ಲಿ 300ಕ್ಕೂ ಹೆಚ್ಚು ಆದಿವಾಸಿಗಳ ಕುಟುಂಬ ಹಲವು ದಿನಗಳಿಂದಲೇ ಕೊಳಚೆ ನೀರು ಮತ್ತು ಹುಳಗಳು ಇರುವಂತಹ ನೀರನ್ನೇ ಕುಡಿಯುತ್ತಿದೆ. ಸಂಬಂಧಪಟ್ಟಂತಹ ಅಧಿಕಾರಿಗಳು ಇನ್ನೂ ಇತ್ತ ಗಮನಹರಿಸಿಲ್ಲ ಎಂದು ಬ್ಯಾಡಗೊಟ್ಟ ದಿಡ್ಡಳ್ಳಿಯ ಆದಿವಾಸಿಗಳು ಆರೋಪಿಸಿದ್ದಾರೆ.
Advertisement
ಕುಡಿಯುವ ನೀರಿನ ಟ್ಯಾಂಕ್ ಶುದ್ಧೀಕರಿಸದೆ ಸುಮಾರು 1 ವರ್ಷಗಳೇ ಕಳೆದಿರುವುದರಿಂದ ನೀರಿನಲ್ಲಿ ಹುಳಗಳು ತುಂಬಿಕೊಂಡಿದ್ದು, ಅದೇ ನೀರನ್ನು ಈ ವ್ಯಾಪ್ತಿಯ ಆದಿವಾಸಿಗಳು ಕುಡಿಯುತ್ತಿದ್ದಾರೆ. ಆದರೆ ಇವರಿಗೆ ನೀರಿನ ಸಮಸ್ಯೆ ತುಂಬಾನೇ ಇದೆ ಎಂದು ಸಂಬಂಧಪಟ್ಟಂತ ಇಲಾಖಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಏನು ಪ್ರಯೋಜನ ಆಗಿಲ್ಲ. ಇವರು ಈ ಬ್ಯಾಡಗೊಟ್ಟ ಗ್ರಾಮಕ್ಕೆ ಬಂದು ಎರಡು ವರ್ಷ ಕಳೆದರೂ ಇನ್ನೂ ಇವರಿಗೆ ನೀರಿನ ಸವಲತ್ತು ಸಿಕ್ಕಿಲ್ಲ.
Advertisement
Advertisement
ಪೈಪ್ ಲೈನ್ ಮಾಡಿದ್ದಾರೆ ಆದರೆ ಇವರಿಗೆ ಇನ್ನೂ ಮನೆಗಳಿಗೆ ನೀರನ್ನು ಕೊಟ್ಟಿಲ್ಲ. ದೊಡ್ಡ ಟ್ಯಾಂಕ್ ಆದರೆ ಈ ಟ್ಯಾಂಕನ್ನು ಶುದ್ಧೀಕರಿಸದೆ ಇರುವುದರಿಂದ ಟ್ಯಾಂಕಿನಲ್ಲಿ ಹುಳಗಳು ತುಂಬಿಕೊಂಡು ಇದೇ ನೀರನ್ನೇ ಉಪಯೋಗಿಸುವಂತಹ ಪರಿಸ್ಥಿತಿ ಬ್ಯಾಡಗೊಟ್ಟ ಆದಿವಾಸಿ ಜನಾಂಗದವರಿಗೆ ಬಂದಿದೆ.
Advertisement
ಏನೇ ಆಗಲಿ ಆದಷ್ಟು ಬೇಗನೇ ಮನೆಗಳಿಗೆ ಪೈಪ್ ಹಾಕಿ ನೀರಿನ ವ್ಯವಸ್ಥೆಯನ್ನು ಈ ಆದಿವಾಸಿ ಕುಟುಂಬದವರಿಗೆ ಕೊಡಬೇಕು. ಹಾಗೂ ದೊಡ್ಡ ಟ್ಯಾಂಕ್ ಅನ್ನು ಶುಚಿಗೊಳಿಸಿ ಇವರಿಗೆ ಕುಡಿಯಲು ಒಳ್ಳೆಯ ನೀರನ್ನು ಕೊಡಬೇಕು. ಈ ಆದಿವಾಸಿ ಜನಾಂಗದವರಿಗೆ ಏನಾದರೂ ಕಾಯಿಲೆಗಳು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನೇರ ಹೊಣೆಗಾರರಾಗುತ್ತಾರೆ. ಆದರೆ ಒಂದು ವರ್ಷ ಕಳೆದರೂ ಈ ಟ್ಯಾಂಕನ್ನು ಶುಚಿಗೊಳಿಸದೇ ಇರುವುದರಿಂದ ಟ್ಯಾಂಕಿನಲ್ಲಿ ಹುಳುಗಳು ತುಂಬಿಕೊಂಡಿದೆ ಎಂದು ಆದಿವಾಸಿಗಳ ಆರೋಪವಾಗಿದೆ.