ಚಿಕ್ಕಬಳ್ಳಾಪುರ: ಗ್ರಾಹಕರೊಬ್ಬರು ಬೇಕರಿಯೊಂದರಲ್ಲಿ (Bakery) ಖರೀದಿಸಿದ್ದ ಫ್ರೂಟ್ ಜಾಮ್ ಬಾಟಲ್‌ನಲ್ಲಿ ಹುಳಗಳು ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ನಂದಿ ಗ್ರಾಮದಲ್ಲಿ ನಡೆದಿದೆ.
ನಂದಿ ಗ್ರಾಮದ ಶಾಂತಕುಮಾರ್ ಎಂಬವರು ಗ್ರಾಮದ ಬೇಕರಿಯೊಂದರಲ್ಲಿ ಬಾಟಲಿ ಜಾಮ್ (Bottle Fruit Jam) ಅನ್ನು ಖರೀದಿಸಿದ್ದಾರೆ. ಮನೆಗೆ ಹೋಗಿ ಜಾಮ್ ಬಾಟಲಿಯ ಮುಚ್ಚಳ ತೆರೆದು ಇನ್ನೇನು ತಿನ್ನೋಕೆ ಮುಂದಾಗಿದ್ದಾರೆ, ಅಷ್ಟರಲ್ಲಿ ಬಾಟಲಿಯೊಳಗೆ ಹುಳುಗಳು ಹೌಹಾರಿದ್ದಾರೆ. ಇದನ್ನೂ ಓದಿ: PUBLiC TV Impact – ಮನೆ ತೆರವಿನಿಂದ ನಿರಾಶ್ರಿತರಾಗಿದ್ದ 36 ಕುಟುಂಬಕ್ಕೆ ಸೂರಿನ ಭಾಗ್ಯ

ಬಾಟಲಿಯ ಮೇಲೆ ಜಾಮ್ ತಯಾರಿಸಿದ ದಿನಾಂಕ ಸೆಪ್ಟೆಂಬರ್ 2025 ಹಾಗೂ ಅವಧಿ ಮೀರುವ ದಿನಾಂಕ ಅಕ್ಟೋಬರ್ 2026 ಎಂದು ನಮೂದಿಸಲಾಗಿದೆ. ಜಾಮ್ ತಯಾರಾಗಿ ನಾಲ್ಕು ತಿಂಗಳಾಗಿದೆ. ಆದರೆ ಈಗಾಗಲೇ ಜಾಮ್ ನಲ್ಲಿ ಹುಳ ಬಂದಿದೆ. ಇದನ್ನ ಕಂಡ ಗ್ರಾಹಕರು ಕಕ್ಕಾಬಿಕ್ಕಿಯಾಗಿದ್ದಾರೆ. ಇದನ್ನೂ ಓದಿ: ರೆಡ್ಡಿಯ ಮನೆ ಕಾಂಪೌಂಡ್ ಒಳಗೆ ನುಗ್ಗಿ ಫ್ಲೆಕ್ಸ್ ಹಾಕಿಸಿದ್ದಾರೆ, ಕೈ ಕಾರ್ಯಕರ್ತನ ಸಾವಿಗೆ ಭರತ್ ರೆಡ್ಡಿ ಕಾರಣ: ಅಶೋಕ್

ಈ ಬಗ್ಗೆ ಬೇಕರಿ ಮಾಲೀಕನನ್ನ ಪ್ರಶ್ನೆ ಮಾಡಿದ್ರೆ ನಮಗೇನು ಗೊತ್ತಾಗುತ್ತೆ? ಡಿಸ್ಟ್ರಿಬ್ಯೂಟರ್‌ರನ್ನ ಕೇಳಬೇಕು ಅಂತಾನೆ, ಡಿಸ್ಟ್ರಿಬ್ಯೂಟರ್ ನನ್ನ ಕೇಳಿದ್ರೆ ಕಂಪನಿಯವರನ್ನ ಕೇಳಿ ಅಂತಾರಂತೆ. ಹೀಗಾಗಿ ಈ ಬಗ್ಗೆ ಗ್ರಾಹಕರು ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ: ನೀರು ಇರ್ಲಿಲ್ಲ ಅಂತ ವಿಷ ಕೊಟ್ಟಿದ್ದಾರೆ, ಬಡವರು ಸತ್ತಾಗೆಲ್ಲ ಮೋದಿ ಮೌನವಾಗಿರ್ತಾರೆ – ರಾಹುಲ್ ಗಾಂಧಿ ಕಿಡಿ

