ನವದೆಹಲಿ/ವಾಷಿಂಗ್ಟನ್/ಬೀಜಿಂಗ್: ಕೊರೊನಾ ವಿಶ್ವವ್ಯಾಪಿ ಮತ್ತೆ ಸದ್ದು ಮಾಡುತ್ತಿದೆ. ಕೋವಿಡ್-19 ಹೊಸ ವಿಶ್ವ ದಾಖಲೆ ಬರೆದಿದೆ. ಒಂದೇ ದಿನ 20 ಲಕ್ಷಕ್ಕೂ ಹೆಚ್ಚು ಪ್ರಕರಣ ವರದಿ ಆಗಿದೆ. ಇದರಲ್ಲಿ ಅರ್ಧ ಪಾಲು ಕೇವಲ ಅಮೆರಿಕಾದಿಂದಲೇ ವರದಿ ಆಗಿದೆ.
Advertisement
ನಿನ್ನೆ ದಿನ ಅಮೆರಿಕಾದಲ್ಲಿ ಬರೋಬ್ಬರಿ 10.42 ಲಕ್ಷ ಮಂದಿಗೆ ಸೋಂಕು ದೃಢಪಟ್ಟಿದೆ. ಕಳೆದ ಗುರುವಾರ 5.91 ಲಕ್ಷ ಕೇಸ್ ವರದಿ ಆಗಿತ್ತು. ಕೇವಲ ನಾಲ್ಕು ದಿನದಲ್ಲಿ ಇದು ದುಪ್ಪಟ್ಟಾಗಿದೆ. ಪ್ರತಿ ಆರು ಮಂದಿಯಲ್ಲಿ ಒಬ್ಬರಿಗೆ ಸೋಂಕು ತಗುಲಿದೆ. ಅಮೆರಿಕಾದ ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ತುಳುಕುತ್ತಿದೆ. ಸದ್ಯ 1 ಲಕ್ಷಕ್ಕೂ ಹೆಚ್ಚು ಸೋಂಕಿತರು ಆಸ್ಪತ್ರೆ ಸೇರಿದ್ದಾರೆ. ಇವರಲ್ಲಿ 18 ಸಾವಿರ ಮಂದಿ ಐಸಿಯುನಲ್ಲಿದ್ದಾರೆ. ಪ್ರತಿ ದಿನ 500ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆ ಪಾಲಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಬೂಸ್ಟರ್ ಡೋಸ್ ನೀಡಲು ಅಮೆರಿಕಾ ಚಿಂತನೆ ನಡೆಸಿದೆ. ಇದನ್ನೂ ಓದಿ: ಕೊರೊನಾ ಸ್ಫೋಟ ಒಟ್ಟು 2,479 ಪ್ರಕರಣ – ಬೆಂಗ್ಳೂರಲ್ಲಿ 2,053 ಕೇಸ್
Advertisement
Advertisement
ಚೀನಾ ಹೊಸ ಪ್ಲಾನ್:
ಚೀನಾದಲ್ಲಿ ಶೂನ್ಯ ಕೋವಿಡ್‍ಗಾಗಿ ಚಿತ್ರ ವಿಚಿತ್ರ ಕಾನೂನುಗಳು ಜಾರಿ ಆಗ್ತಿವೆ. ಕೋವಿಡ್ ನಿಯಮ ಉಲ್ಲಂಘಿಸಿದವರನ್ನು ಸಾರ್ವಜನಿಕವಾಗಿ ಅಪಮಾನಿಸುವ ಶೇಮಿಂಗ್ ಪದ್ಧತಿ ಜಾರಿಗೆ ತಂದಿದ್ದಾರೆ. ಷಿಯಾನ್ ನಗರದಲ್ಲಿ ಸೋಂಕಿತರನ್ನು ರಾತ್ರೋರಾತ್ರಿ ಕ್ವಾರಂಟೈನ್ ಕೇಂದ್ರಗಳಿಗೆ ಶಿಫ್ಟ್ ಮಾಡುವ ಕೆಲಸವೂ ನಡೆದಿದೆ. 1.30 ಕೋಟಿ ಮಂದಿಯನ್ನು ಮನೆಗಳಲ್ಲೇ ನಿರ್ಬಂಧಿಸಿರುವ ಸರ್ಕಾರ, ಯಾರನ್ನು ಹೊರಗೆ ಕಾಲಿಡದಂತೆ ನೋಡಿಕೊಳ್ತಿದೆ. ಸ್ಥಳೀಯ ಆಡಳಿತವೇ ಮನೆ ಮನೆಗೂ ಉಚಿತವಾಗಿ ಆಹಾರ ಪೂರೈಸುತ್ತಿದೆ. ಹೆನಾನ್ ಪ್ರಾಂತ್ಯದ ಯಜೌ ಎಂಬಲ್ಲಿ ಕೇವಲ ಮೂರೇ ಕೇಸ್ ಬಂದಿದ್ದಕ್ಕೆ ಆ ನಗರವನ್ನು ಲಾಕ್‍ಡೌನ್ ಮಾಡಲಾಗಿದೆ. ಇದನ್ನೂ ಓದಿ: ಆಸ್ತಿ ವಿವಾದಕ್ಕೆ 70ರ ತಂದೆಯ ಕತ್ತು ಸೀಳಿ ಹತ್ಯೆಗೈದ ಮಗ
Advertisement
ಭಾರತದಲ್ಲೂ ಕೊರೊನಾ ಅಬ್ಬರ:
ದೇಶದಲ್ಲಿ ಕೊರೊನಾ ವೈರಸ್ ವಿಜೃಂಭಿಸುತ್ತಿದೆ. ಸತತ ಎರಡನೇ ದಿನವೂ 30 ಸಾವಿರಕ್ಕೂ ಹೆಚ್ಚು ಕೇಸ್ ವರದಿ ಆಗಿವೆ. ನಿನ್ನೆ 11.54 ಲಕ್ಷ ಟೆಸ್ಟ್ ನಡೆಸಿದ್ರೆ ಇಂದು 37,379 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಸದ್ಯ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1.71 ಲಕ್ಷ ದಾಟಿದೆ. ಆದ್ರೆ ಶೇಕಡಾ 90 ರಷ್ಟು ಮಂದಿಯಲ್ಲಿ ಸೋಂಕು ಲಕ್ಷಣ ಕಾಣಿಸಿಲ್ಲ ಎಂಬುದು ಗಮನಾರ್ಹ ವಿಚಾರ ಮತ್ತು ಸಮಾಧಾನದ ವಿಚಾರ ಅಂದ್ರೆ ಆಸ್ಪತ್ರೆಗೆ ದಾಖಲಾದ ಸೋಂಕಿತರ ಪೈಕಿ, ಕೇವಲ 0.5 ರಷ್ಟು ಮಂದಿಗೆ ಮಾತ್ರ ಆಕ್ಸಿಜನ್ ಸಪೋರ್ಟ್ ಬೇಕಾಗುತ್ತದೆ. ಆಸ್ಪತ್ರೆಗೆ ದಾಖಲಾದ ಸೋಂಕಿತರು ಮೂರು ದಿನಗಳಲ್ಲಿ ಡಿಸ್ಚಾರ್ಜ್ ಆಗುತ್ತಿದ್ದಾರೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಕೇಂದ್ರ ಮಂತ್ರಿ ಮಹೇಂದ್ರನಾಥ್ ಪಾಂಡೇಗೆ ಸೋಂಕು ತಗುಲಿದೆ. ಛತ್ತೀಸ್‍ಘಡದಲ್ಲಿ ಕಾರ್ಯನಿರ್ವಹಿಸ್ತಿರುವ ಕೋಬ್ರಾ ಪಡೆ 36 ಯೋಧರಿಗೆ ಸೋಂಕು ತಗುಲಿದೆ. ಕೊರೊನಾದೊಂದಿಗೆ ದೇಶದಲ್ಲಿ ಒಮಿಕ್ರಾನ್ ಕೇಸ್‍ಗಳ ಸಂಖ್ಯೆ 2 ಸಾವಿರ ಗಡಿ ದಾಟಿದೆ. ಇದನ್ನೂ ಓದಿ: ಟಾಯ್ಲೆಟ್ ಬಾಗಿಲು ತೆರೆದಾಗ ಮನೆಯೊಡತಿಗೆ ಶಾಕ್ – ಬುಸುಗುಟ್ಟಿದ ನಾಗಪ್ಪ