ಬೀಜಿಂಗ್: ಚೀನಾದಲ್ಲಿ ವಿಶಿಷ್ಟ ರೈಲೊಂದನ್ನ ಲೋಕಾರ್ಪಣೆ ಮಾಡಲಾಗಿದ್ದು ಇದನ್ನ ಜಗತ್ತಿನ ಮೊದಲ ಸ್ಮಾರ್ಟ್ ಟ್ರೇನ್ ಎಂದೇ ಕರೆಯಲಾಗುತ್ತಿದೆ.
ಜೂನ್‍ನಲ್ಲಿ ಅನಾವರಣಗೊಳಿಸಲಾದ ಈ ರೈಲನ್ನು ಕಳೆದ ವಾರ ಚೀನಾದ ಹುನಾನ್ ಪ್ರಾಂತ್ಯದ ಝಝೌನಲ್ಲಿ ಪ್ರಯೋಗಿಕ ಸಂಚಾರ ಪರೀಕ್ಷೆ ನಡೆಯಿತು. ಆಟೋನಾಮಸ್ ರೇಲ್ ರ‍್ಯಾಪಿಡ್ ಟ್ರಾನ್ಸಿಟ್ (ಎಆರ್‍ಟಿ) ಎಂದು ಕರೆಯಲ್ಪಡುವ ಈ ರೈಲು ಮೂರು ಬೋಗಿಗಳನ್ನು ಹೊಂದಿದ್ದು, ಸುಮಾರು 300 ಪ್ರಯಾಣಿಕರು ಇದರಲ್ಲಿ ಪ್ರಯಾಣಿಸಬಹುದು. ಒಂದು ಗಂಟೆಗೆ ಗರಿಷ್ಠ 70 ಕಿ.ಮೀ ವೇಗದಲ್ಲಿ ಈ ರೈಲು ಸಂಚರಿಸುವ ಸಾಮರ್ಥ್ಯ ಹೊಂದಿದೆ.
Advertisement
Advertisement
ನಗರದ ಟ್ರಾಫಿಕ್ ಮಧ್ಯೆಯೂ ಸಂಚಾರ ಮಾಡಲು ನೆರವಾಗುವಂತೆ ರೈಲನ್ನು ವಿನ್ಯಾಸಗೊಳಿಸಲಾಗಿದೆ. ಕೇವಲ 10 ನಿಮಿಷ ಚಾರ್ಜ್ ಮಾಡಿದ್ರೆ 25 ಕಿಲೋಮೀಟರ್‍ವರೆಗೆ ರೈಲನ್ನು ಓಡಿಸಬಹುದಾಗಿದೆ.
Advertisement
ಈ ಹೈಬ್ರಿಡ್ ರೈಲು ಆಧುನಿಕ ಟ್ರಾಮ್ ಮತ್ತು ಬಸ್‍ಗಳ ಅನುಕೂಲತೆಗಳ ಸಂಯೋಜನೆಯಾಗಿದೆ. ನಗರದ ರಸ್ತೆಗಳಲ್ಲಿ ಬಿಳಿ ಬಣ್ಣದ ಪೇಂಟ್‍ನಿಂದ ಗೆರೆಗಳಂತೆ ಮಾರ್ಕ್ ಮಾಡಲಾದ ವರ್ಚುವಲ್ ಹಳಿ ಮೇಲೆ ಈ ರೈಲು ಚಲಿಸುತ್ತದೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
Advertisement
ಟ್ರ್ಯಾಕ್‍ಗಳ ಮೇಲೆ ಚಲಿಸುವ ಅರ್ಬನ್ ರೈಲು ಅಥವಾ ಟ್ರಾಮ್‍ಗೆ ಹೋಲಿಸಿದರೆ ಈ ವರ್ಚುವಲ್ ರೈಲ್ವೆ ವ್ಯವಸ್ಥೆಯ ನಿರ್ಮಾಣಕ್ಕೆ ತಗುಲುವ ವೆಚ್ಚ ತುಂಬಾ ಕಡಿಮೆ ಎಂದು ರೈಲಿನ ಮುಖ್ಯ ಎಂಜಿನಿಯರ್ ಫೆಂಗ್ ಜಿಯಾಂಗುವಾ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಚೀನಾದಲ್ಲಿ 1 ಕಿ.ಮೀ ಟ್ರಾಮ್ ಹಳಿ ನಿರ್ಮಾಣಕ್ಕೆ 150ರಿಂದ 200 ಮಿಲಿಯನ್ ಯುವಾನ್(ಅಂದಾಜು 145 ರಿಂದ 195 ಕೋಟಿ ರೂ.) ವೆಚ್ಚವಾಗುತ್ತದೆ. ಆದ್ರೆ ಅಷ್ಟೇ ದೂರಕ್ಕೆ ಈ ಹೈ ಟೆಕ್ ವರ್ಚುವಲ್ ಲೈನ್‍ಗೆ 50 ರಿಂದ 100 ಮಿಲಿಯನ್ ಯುವಾನ್(ಅಂದಜು 48 ಕೋಟಿಯಿಂದ 97 ಕೋಟಿ ರೂ.) ಆಗುತ್ತದೆ ಎಂದು ಫೆಂಗ್ ಹೇಳಿದ್ದಾರೆ.
ಈ ರೈಲು ಪಾದಚಾರಿ ಮಾರ್ಗವನ್ನ ಗುರುತಿಸುತ್ತದೆ. ಜೊತೆಗೆ ಪ್ರಯಾಣದ ಮಾಹಿತಿ ಸಂಗ್ರಹಿಸಲು ಅನೇಕ ಸೆನ್ಸರ್ ಗಳನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ಇಂತಹ 3 ಎಲೆಕ್ಟ್ರಿಕ್ ರೈಲುಗಳನ್ನ ಝುಜೌ ನಲ್ಲಿ ಟೆಸ್ಟ್ ಮಾಡಲಾಗುತ್ತಿದೆ. ಕೇವಲ 4 ನಿಲ್ದಾಣಗಳೊಂದಿಗೆ ಸುಮಾರು 3.1 ಕಿಮೀ ದೂರ ಮಾತ್ರ ಸಂಚಾರ ಮಾಡುತ್ತಿದೆ. ಈ ಸ್ಮಾಟ್ ಟ್ರೈನ್ ಮುಂದಿನ ವರ್ಷದಿಂದ ನಿಯಮಿತ ಸೇವೆಗೆ ಬರಲಿದೆ.