ಹೈದರಾಬಾದ್: ವಿಶ್ವದ ಮೊದಲ 3ಡಿ ಪ್ರಿಂಟ್ ದೇವಾಲಯವೊಂದು (3D Printed Temple) ತೆಲಂಗಾಣದಲ್ಲಿ (Telangana) ನಿರ್ಮಾಣಗೊಳ್ಳುತ್ತಿದೆ. ಈ ಮೂಲಕ ದೇಶದ ಮುಡಿಗೆ ಹೊಸ ಗರಿಯೊಂದು ಸೇರಿದೆ.
ಸಿದ್ದಿಪೇಟೆ ಜಿಲ್ಲೆಯ ಚಾರ್ವಿತಾ ಮೆಡೋಸ್‍ನಲ್ಲಿ 3,800 ಚದರ ಅಡಿ ಪ್ರದೇಶದಲ್ಲಿ ಈ ದೇವಾಲಯ ನಿರ್ಮಿಸಲಾಗುತ್ತಿದೆ. ಹೈದರಾಬಾದ್ (Hyderabad) ಮೂಲದ ಕಟ್ಟಡ ನಿರ್ಮಾಣ ಕಂಪನಿ ಅಪ್ಸುಜಾ ಇನ್ಫ್ರಾಟೆಕ್ ಮತ್ತು ಸಿಂಪ್ಲಿಫೋರ್ಜ್ ಕ್ರಿಯೇಷನ್ಸ್ ಸಹಯೋಗದಲ್ಲಿ ದೇವಾಲಯ ನಿರ್ಮಾಣ ಕಾರ್ಯ ನಡೆದಿದೆ. ದೇವಾಲಯವನ್ನು ನಿರ್ಮಿಸಲು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 3ಡಿ ತಂತ್ರಜ್ಞಾನ ಮತ್ತು ಸಾಫ್ಟ್‍ವೇರ್‍ಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ. ಇದನ್ನೂ ಓದಿ: 23 ವರ್ಷ ಸೇವೆ ಸಲ್ಲಿಸಿ ತಾಯ್ನಾಡಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ
Advertisement
Advertisement
ಅಪ್ಸುಜಾ ಇನ್ಫ್ರಾಟೆಕ್ ವ್ಯವಸ್ಥಾಪಕ ನಿರ್ದೇಶಕ ಹರಿ ಕೃಷ್ಣ ಅವರು ಈ ಬಗ್ಗೆ ಮಾತನಾಡಿ, ದೇವಾಲಯವು ಮೂರು ಗರ್ಭಗುಡಿಗಳನ್ನು ಹೊಂದಿದೆ. ಅದರಲ್ಲಿ ಎರಡು ಮೋದಕ ಆಕಾರದ (ಗಣೇಶನಿಗೆ ಇಷ್ಟವಾದ ಸಿಹಿ) ಗುಡಿಗಳು, ಭಗವಾನ್ ಶಿವನಿಗೆ (ಶಿವಾಲಯ) ಮೀಸಲಾದ ಚೌಕಾಕಾರದ ಸ್ಥಳ ಮತ್ತು ಪಾರ್ವತಿ ದೇವಿಗೆ ಕಮಲದ ಆಕಾರದ ಆಸನ ರಚಿಸಲಾಗಿದೆ ಎಂದಿದ್ದಾರೆ.
Advertisement
Advertisement
ತೆಲಂಗಾಣ ರಚನೆಯ ದಿನಾಚರಣೆ ಒಂದು ದಿನದ ಮುಂಚೆ ಈ ವಿಷಯ ಪ್ರಕಟವಾಗಿದೆ. 2014ರ ಜೂನ್ 2 ರಂದು ಆಂಧ್ರಪ್ರದೇಶದಿಂದ ಹೊರ ಬಂದು 29 ನೇ ರಾಜ್ಯವಾಗಿ ತೆಲಂಗಾಣ ರಚನೆಯಾಗಿತ್ತು. ಇದನ್ನೂ ಓದಿ: ಫ್ರೀ ಎಜುಕೇಷನ್ ಕೊಡಿಸ್ತೀನಿ ಅಂತ ವಿದ್ಯಾರ್ಥಿಗಳಿಗೆ 18 ಕೋಟಿ ವಂಚನೆ – ಆರೋಪಿ ಅರೆಸ್ಟ್