ಕುಸ್ತಿಪಟುಗಳ ಪ್ರತಿಭಟನೆ; ಮಧ್ಯಪ್ರವೇಶಿಸಿದ ವಿಶ್ವ ಕ್ರೀಡಾ ಸಂಸ್ಥೆ – ಮನವಿ ಜೊತೆ ಎಚ್ಚರಿಕೆ

Public TV
1 Min Read
Wrestlers Protest

ನವದೆಹಲಿ: ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಭಾರತೀಯ ಕುಸ್ತಿ ಫೆಡರೇಷನ್‌ (WFI) ಅಧ್ಯಕ್ಷ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ (Brij Bhushan Sharan Singh) ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ಮೇಲೆ ದೌರ್ಜನ್ಯ ನಡೆಸಿದ ದೆಹಲಿ ಪೊಲೀಸರ ನಡೆಗೆ ವಿಶ್ವ ಕುಸ್ತಿ ಆಡಳಿತ ಮಂಡಳಿ ಖಂಡನೆ ವ್ಯಕ್ತಪಡಿಸಿದೆ.

Brij Bhushan Sharan Singh

ಕುಸ್ತಿಪಟುಗಳು ಪ್ರತಿಭಟನೆ (Wrestlers Protest) ಆರಂಭಿಸಿದ್ದ ಸಂದರ್ಭದಲ್ಲಿ ಕ್ರೀಡಾ ಸಚಿವಾಲಯವು WFI ಮತ್ತು ಅದರ ಚಟುವಟಿಕೆಗಳನ್ನು ಅಮಾನತಿನಲ್ಲಿರಿಸಿತ್ತು. ನಂತರ ಸಾಮಾನ್ಯ ಸಭೆಯನ್ನು ಜನವರಿಗೆ ನಿಗದಿಪಡಿಸಿತ್ತು. ಜನವರಿಯಲ್ಲೇ ನಡೆಯಬೇಕಿದ್ದ ಸಾಮಾನ್ಯ ಸಭೆಯ ಬಗ್ಗೆ ಮಾಹಿತಿ ನೀಡದಿದ್ದರೆ ಡಬ್ಯೂಎಫ್‌ಐಯನ್ನು ಅಮಾನತುಗೊಳಿಸಲಾಗುವುದು ಎಂದು ಯುಡಬ್ಲ್ಯೂಡಬ್ಲ್ಯೂ ಎಚ್ಚರಿಸಿದೆ. ಇದನ್ನೂ ಓದಿ: ನನ್ನ ವಿರುದ್ಧ ಒಂದೇ ಒಂದು ಆರೋಪ ಸಾಬೀತಾದರೆ ನೇಣು ಹಾಕಿಕೊಳ್ಳುತ್ತೇನೆ : ಕುಸ್ತಿಪಟುಗಳಿಗೆ ಸಿಂಗ್‌ ಸವಾಲ್‌

ಸಾಮಾನ್ಯ ಸಭೆ ಮಾಡಲು ವಿಫಲವಾದರೆ ಫೆಡರೇಷನನ್ನು UWW ಅಮಾನತುಗೊಳಿಸುತ್ತದೆ. ಈ ವರ್ಷದ ಆರಂಭದಲ್ಲಿ ನವದೆಹಲಿಯಲ್ಲಿ ಆಯೋಜಿಸಲು ಯೋಜಿಸಲಾಗಿದ್ದ ಏಷ್ಯನ್ ಚಾಂಪಿಯನ್‌ಶಿಪ್ ಅನ್ನು ಮರುಹಂಚಿಕೆ ಮಾಡುವ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದೆ.

ಕುಸ್ತಿಪಟುಗಳ ಬಂಧನವನ್ನು UWW ದೃಢವಾಗಿ ಖಂಡಿಸುತ್ತದೆ. ಇದುವರೆಗಿನ ತನಿಖೆಗಳ ಫಲಿತಾಂಶಗಳ ಕೊರತೆಯ ಬಗ್ಗೆ ನಿರಾಸೆ ವ್ಯಕ್ತಪಡಿಸಿದೆ. ಆರೋಪಗಳ ಬಗ್ಗೆ ಸಂಪೂರ್ಣ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಒತ್ತಾಯಿಸಿದೆ. ಇದನ್ನೂ ಓದಿ: ಬಿಜೆಪಿ Vs ಡಿಎಂಕೆ – ಬಿಜೆಪಿ ಕಾರ್ಯಕರ್ತ ಜಡೇಜಾ ಆಟದಿಂದ ಚೆನ್ನೈಗೆ ಜಯ ಎಂದ ಅಣ್ಣಾಮಲೈ

Share This Article