ರಷ್ಯಾ: ಭಾರತದ ಸ್ಟಾರ್ ಮಹಿಳಾ ಬಾಕ್ಸರ್ ಮೇರಿ ಕೋಮ್ ವಿಶ್ವ ಚಾಂಪಿಯನ್ ಶಿಪ್‍ನಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟರು. ಸೆಮಿಫೈನಲ್ ನಲ್ಲಿ ಯುರೋಪಿಯನ್ ಚಾಂಪಿಯನ್ ಟಿರ್ಕಿಯ ಬುಸೆನಾಜ್ ಕೈಕಿರೊಗ್ಲೂ ವಿರುದ್ಧ 4-1 ಅಂತರದಿಂದ ಮೇರಿ ಕೋಮ್ ಶರಣಾಗುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯ್ತು.
36 ವರ್ಷದ ಮೇರಿ ಕೋಮ್ ಇಂದು ನಡೆದ ಪಂದ್ಯದಲ್ಲಿ ಆರಂಭದಿಂದ ತಾಳ್ಮೆಯ ಪ್ರದರ್ಶನ ತೋರಿದರು. ಮೊದಲ ಸುತ್ತಿನಲ್ಲಿ ಮೇರಿ ಕೋಮ್ ಅಂಕವನ್ನು ತಮ್ಮದಾಗಿಸಿಕೊಂಡರು. ಮುಂದಿನ ಮೂರು ಸುತ್ತುಗಳಲ್ಲಿ ಕೈಕಿರೊಗ್ಲೂ ಮುನ್ನಡೆ ಕಾಯ್ದುಕೊಂಡು ಫೈನಲ್ ಗೆ ಲಗ್ಗೆ ಇಟ್ಟರು. ವಿಶ್ವ ಚಾಂಪಿಯನ್ ಶಿಪ್‍ನಲ್ಲಿ ಕಂಚು ಸೇರಿದಂತೆ (ಚಿನ್ನ-6, ಬೆಳ್ಳಿ-1, ಕಂಚು-1) ಒಟ್ಟು ಎಂಟು ಪದಕಗಳನ್ನು ಪಡೆದುಕೊಂಡಿದ್ದಾರೆ.
World Women's Boxing Championships: #MaryKom
wins Bronze ???? in Ulan-Ude, Russia#WBC pic.twitter.com/Dy7bSrpGev
— DD News (@DDNewslive) October 12, 2019
ಇತ್ತ ಭಾರತದಿಂದ ಲೊವಲಿನಾ ಬೊರಗೊಹೆನ (69 ಕೆ.ಜಿ.), ಜಮುನಾ ಬೋರೋ (54 ಕೆಜಿ) ಮತ್ತು ಮಂಜು ರಾಣಿ (48 ಕೆಜಿ) ಇಂದು ಸೆಮಿಫೈನಲ್ ನಲ್ಲಿ ಆಡಲಿದ್ದಾರೆ. ಮೇರಿಕೋಮ್ ಮೊದಲ ಬಾರಿಗೆ 2001ರಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 2002, 2005, 2006, 2008, 2010 ಮತ್ತು 2018ರಲ್ಲಿ ಚಿನ್ನದ ಪದಕದ ಒಡತಿಯಾಗಿದ್ದಾರೆ.