ಲಂಡನ್: ಮೊದಲ ಮಹಾಯುದ್ಧದ ವೇಳೆ ತಯಾರಿಸಿದ್ದ ಮಿಲ್ಸ್ ಗ್ರೆನೇಡ್ ಸಜೀವ ಬಾಂಬ್ ಅನ್ನು ಯುಕೆಯ ಉತ್ತರ ಐರ್ಲೆಂಡ್ ಕಡಲತೀರದಲ್ಲಿ ಚಿಕ್ಕ ಹುಡುಗನೊಬ್ಬ ಪತ್ತೆ ಮಾಡಿದ್ದಾನೆ.
ಕಲ್ಟ್ರಾ ಬೀಚ್ ಬಳಿ ಬಾಂಬ್ ಪತ್ತೆಯಾದ ಬಳಿಕ ಹುಡುಗ ಉತ್ತರ ಐರ್ಲೆಂಡ್‌ನ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸೇನೆಯ ತಾಂತ್ರಿಕ ಅಧಿಕಾರಿಯೊಬ್ಬರು ಇದು ಸಜೀವ WW-1 `ಮಿಲ್ಸ್ ಬಾಂಬ್’ ಹ್ಯಾಂಡ್ ಗ್ರೆನೇಡ್ (ಕೈಯಲ್ಲಿ ಹಿಡಿದು ಎಸೆಯುವ ಬಾಂಬ್) ಎಂದು ದೃಢಪಡಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ಹುಡುಗನ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಇದು ಮೊದಲ ಮಹಾಯುದ್ಧದಲ್ಲಿ ಬಳಸಲಾಗಿದ್ದ ಹ್ಯಾಂಡ್ ಗ್ರೆನೇಡ್ ಎಂದು ತಿಳಿಯಿತು. ಬಳಿಕ ಬಾಂಬ್ ಅನ್ನು ಕ್ರಾಫೋರ್ಡ್ಸ್ ಬರ್ನ್ ಕಂಟ್ರಿ ಪಾರ್ಕ್‌ಗೆ ಕೊಂಡೊಯ್ದು ಸ್ಫೋಟಿಸಲಾಯಿತು ಎಂದು ಹೇಳಿದರು. ಬಾಂಬ್ ಬಗ್ಗೆ ಸುಳಿವುಕೊಟ್ಟ ಯುವಕನಿಗೆ ಅಭಿನಂದನೆ ಸಲ್ಲಿಸಿದರು.
ಮಿಲ್ಸ್ ಬಾಂಬ್ ಗ್ರೆನೇಡ್ ಅನ್ನು 1915 ರಲ್ಲಿ ಅಭಿವೃದ್ಧಿಪಡಿಸಿದಾಗ ಬ್ರಿಟನ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಿತು. 2019 ರಲ್ಲಿಯೂ 7 ಅಡಿ ಅಷ್ಟು ಎತ್ತರದ ಎಲ್‌ಆಫ್‌ವೈಟ್ ಜರ್ಮನ್ ಸ್ಫೋಟಕ ಕರಾವಳಿಯ ಮೀನುಗಾರಿಕಾ ಪ್ರದೇಶದಲ್ಲಿ ಪತ್ತೆಯಾಗಿತ್ತು. ಅನಂತರ 2020ರಲ್ಲಿ ಡಬ್ಲ್ಯೂಡಬ್ಲ್ಯೂ-2 ಲಂಡನ್‌ನ ಸೊಹೊದ ಭಾಗದಲ್ಲಿ ಪತ್ತೆಯಾಗಿತ್ತು.