ನ್ಯೂಯಾರ್ಕ್: ಮಾನವನ ಅಭಿವೃದ್ಧಿಯಲ್ಲಿ ಈ ದಿನ ಒಂದು ಮೈಲಿಗಲ್ಲೆಂದು ಪರಿಗಣಿಸಲಾಗುತ್ತಿದೆ. ಮಂಗಳವಾರ ವಿಶ್ವದ ಜನಸಂಖ್ಯೆ (World population) 8 ಶತಕೋಟಿ ತಲುಪಲಿದೆ ಎಂದು ವಿಶ್ವಸಂಸ್ಥೆ (United Nations) ತಿಳಿಸಿದ್ದು, ಇಂದು ಎಲ್ಲೋ ಹುಟ್ಟಿದ ಮಗು ವಿಶ್ವದ 8 ಶತಕೋಟಿಯ ವ್ಯಕ್ತಿಯಾಗಲಿದೆ ಎಂದು ತಿಳಿಸಿದೆ.
ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ ಜಾಗತಿಕ ಜನಸಂಖ್ಯೆ 2030ರಲ್ಲಿ ಸುಮಾರು 8.5 ಶತಕೋಟಿ ತಲುಪಲಿದೆ. 2050ರಲ್ಲಿ 9.7 ಶತಕೋಟಿ ಹಾಗೂ 2100 ರಲ್ಲಿ 10.4 ಶತಕೋಟಿಯಷ್ಟು ಬೆಳೆಯಬಹುದು ಎಂದು ತಿಳಿಸಿದೆ. ವಿಶ್ವ ಜನಸಂಖ್ಯಾ ದಿನ ಸೋಮವಾರ ಬಿಡುಗಡೆಯಾದ ವಾರ್ಷಿಕ ವಿಶ್ವ ಜನಸಂಖ್ಯಾ ಪ್ರಾಸ್ಪೆಕ್ಟ್ ವರದಿಯಲ್ಲಿ ಜಾಗತಿಕ ಜನಸಂಖ್ಯೆ 1950 ರಿಂದ ನಿಧಾನಗತಿಯಲ್ಲಿ ಬೆಳೆಯುತ್ತಿದೆ ಎಂದು ತಿಳಿಸಲಾಗಿದೆ.
Advertisement
Advertisement
ಜಾಗತಿಕ ಜನಸಂಖ್ಯೆಯು 7 ರಿಂದ 8 ಶತಕೋಟಿಗೆ ಬೆಳೆಯಲು 12 ವರ್ಷಗಳನ್ನು ತೆಗೆದುಕೊಂಡರೆ, ಇದು 9 ಶತಕೋಟಿಯನ್ನು ತಲುಪಲು ಸುಮಾರು 15 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಇದರ ಪ್ರಕಾರ ಜಾಗತಿಕ ಜನಸಂಖ್ಯೆಯ ಒಟ್ಟಾರೆ ಬೆಳವಣಿಗೆಯ ದರ ನಿಧಾನವಾಗುತ್ತಿದೆ ಎಂಬುದರ ಸಂಕೇತವಾಗಿದೆ. ಇದನ್ನೂ ಓದಿ: ಏರ್ ಇಂಡಿಯಾಗೆ 1,000 ಕೋಟಿ ಮರುಪಾವತಿ, ದಂಡ ಪಾವತಿಸಲು ಅಮೆರಿಕ ಆದೇಶ
Advertisement
2022 ರಲ್ಲಿ, 2 ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶಗಳು ಏಷ್ಯಾದಲ್ಲಿವೆ. ಪೂರ್ವ ಮತ್ತು ಆಗ್ನೇಯ ಏಷ್ಯಾ ದಲ್ಲಿ 2.3 ಶತಕೋಟಿ ಜನರಿದ್ದರೆ, ಮಧ್ಯ ಮತ್ತು ದಕ್ಷಿಣ ಏಷ್ಯಾದಲ್ಲಿ 2.1 ಶತಕೋಟಿ ಜನರಿದ್ದಾರೆ. ಚೀನಾ ಮತ್ತು ಭಾರತದಲ್ಲಿಯೇ ವಿಶ್ವದಲ್ಲಿ ಅತ್ಯಂತ ಅಧಿಕ ಜನಸಂಖ್ಯೆಯಿದೆ.
Advertisement
ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, 2023ರಲ್ಲಿ ಜನಸಂಖ್ಯೆಯಲ್ಲಿ ಭಾರತ ಚೀನಾವನ್ನು ಮೀರಿಸಲಿದೆ. ಜನಸಂಖ್ಯೆಯ ಬೆಳವಣಿಗೆ ಮರಣದ ಮಟ್ಟ ಕಡಿಮೆಯಾಗುವುದರಿಂದ ಉಂಟಾಗುತ್ತಿದೆ. ಇದು ಜನರಲ್ಲಿನ ಜೀವಿತಾವಧಿ ಹೆಚ್ಚಳವಾಗುತ್ತಿರುವುದನ್ನು ಪ್ರತಿಫಲಿಸುತ್ತದೆ. ಜಾಗತಿಕವಾಗಿ ಜೀವಿತಾವಧಿ 2019ರಲ್ಲಿ 72.8 ವರ್ಷಗಳನ್ನು ತಲುಪಿದೆ. ಇದು 1990ರಿಂದ ಸುಮಾರು 9 ವರ್ಷಗಳಷ್ಟು ಹೆಚ್ಚಳವಾಗಿದೆ. ಇದನ್ನೂ ಓದಿ: ಉಕ್ರೇನ್‌ನಲ್ಲಿ ಕದನ ವಿರಾಮ, ರಾಜತಾಂತ್ರಿಕತೆ ಮಾರ್ಗ ಕಂಡುಕೊಳ್ಳಬೇಕಿದೆ – ಜಿ20 ಶೃಂಗಸಭೆಯಲ್ಲಿ ಮೋದಿ ಮಾತು