ಬೆಂಗಳೂರು: ವಿಶ್ವ ತಾಯಂದಿರ ದಿನಾಚರಣೆ ಹಿನ್ನೆಲೆಯಲ್ಲಿ 600ಕ್ಕೂ ಹೆಚ್ಚು ಗರ್ಭಿಣಿ ತಾಯಿಯರಿಗೆ ಸೀಮಂತ ಶಾಸ್ತ್ರ ಕಾರ್ಯಕ್ರಮವನ್ನು ಸಾಂಪ್ರದಾಯಿಕವಾಗಿ ನೆರವೇರಿಸಲಾಯಿತು.
Advertisement
ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿಯ ಎಂಇಐ ಮೈದಾನದಲ್ಲಿ ಯಾವುದೇ ಸಮಸ್ಯೆಗಳು ಎದುರಾಗದಂತೆ ಮೃತ್ಯುಂಜಯ, ಗಣಪತಿ ಹೋಮ ಹವನ ಮಾಡುವ ಮೂಲಕ ದೇವರಿಗೆ ಪೂಜೆ ಸಲ್ಲಿಸಿ ಸಾಮೂಹಿಕವಾಗಿ ಸೀಮಂತ ಶಾಸ್ತ್ರ ಮಾಡಲಾಯಿತು. ಟಿ. ದಾಸರಹಳ್ಳಿಯ ಕಾಂಗ್ರೆಸ್ ಮುಖಂಡೆ ಗೀತಾ ಶಿವರಾಂ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದನ್ನೂ ಓದಿ: ನಾನು ಒಳ್ಳೆಯದನ್ನೂ ಮಾಡಿದ್ದೀನಿ, ಅದನ್ನೂ ತೋರಿಸಿ – ಕ್ಯಾಮೆರಾ ಮುಂದೆ ಕೈ ಮುಗಿದ ಕಿಂಗ್‍ಪಿನ್ ಆರ್.ಡಿ.ಪಾಟೀಲ್
Advertisement
Advertisement
ಕಾರ್ಯಕ್ರಮಕ್ಕೆ ಬಂದಿರುವ ಮಹಿಳೆಯರಿಗೆ ಅರಿಶಿನ ಕುಂಕುಮ, ಸೀರೆ, ಬಳೆ ಜೊತೆಗೆ ವಿಶೇಷ ಉಡುಗೊರೆ ನೀಡುವ ಮೂಲಕ ವಿಶ್ವ ತಾಯಂದಿರ ದಿನಾಚರಣೆ ಆಚರಣೆ ಮಾಡಲಾಯಿತು. ಟಿ.ದಾಸರಹಳ್ಳಿಯ ಕ್ಷೇತ್ರದ ಎಲ್ಲಾ ಬಡಾವಣೆಯ ತಾಯಿಯಂದಿರು ಕಾರ್ಯಕ್ರಮದಲ್ಲಿ ನೆರೆದಿದ್ದರು. ಇದನ್ನೂ ಓದಿ: ಪತಿ ಆಸೆ ಈಡೇರಿಸಿದ ಪತ್ನಿ: ಹುತಾತ್ಮ ಯೋಧನ ಪತ್ನಿ ಈಗ ಲೆಫ್ಟಿನೆಂಟ್