ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ನಡೆಯುತ್ತಿರುವ ಆನೆಯ ತಾಲೀಮಿನಲ್ಲಿ ಆನೆ ರಂಪಾಟ ಮಾಡಿರುವ ಘಟನೆ ಅರಮನೆ ಮೈದಾನಲ್ಲಿ ನಡೆದಿದೆ.
Advertisement
ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದೆ. ದಸರಾ ಅಂಗವಾಗಿ ಇಂದಿನಿಂದ ಗಜಪಡೆಗೆ ಭಾರ ಹೊರಿಸುವ ತಾಲೀಮು ಆರಂಭ ಆಗಿದೆ. ಆದರೆ ತಾಲೀಮು ವೇಳೆ ಆನೆ ರಂಪಾಟ ಮಾಡಿದೆ. ಸರಪಳಿ ಕಿತ್ತುಕೊಂಡು ರೋಷದಿಂದ ಆನೆ ಜೆಮಿನಿ ಓಡಿ ಹೋಗಿದೆ. ಈ ವೇಳೆ ಆನೆಗಳನ್ನು ನಿಯಂತ್ರಿಸಲು ಮಾವುತರು- ಕಾವಾಡಿಗರು ಹರಸಾಹಸ ಪಟ್ಟಿದ್ದಾರೆ. ಆದರೆ ಕೊನೆಗೆ ದಸರಾ ಆನೆಗಳಾದ ಅಭಿಮನ್ಯು, ಧನಂಜಯನಿಂದ ಜೆಮಿನಿಯನ್ನು ನಿಯಂತ್ರಂಣವನ್ನು ಮಾಡಲಾಗಿದೆ. ಕೆಲವು ಸಮಯ ಆನೆ ರಂಪಾಟದಿಂದ ಅರಮನೆ ಆವರಣದಲ್ಲಿ ಆತಂಕ ಉಂಟಾಗಿತ್ತು. ಇದನ್ನೂ ಓದಿ: 2 ತಿಂಗಳ ಬಳಿಕ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಜಾಮೀನು
Advertisement
Advertisement
ಮೈಸೂರಿನ ಅರಮನೆಯಂಗಳದಲ್ಲಿ ಆನೆಗಳಿಗೆ ಸಾಂಪ್ರದಾಯಿಕ ಪೂಜೆ ನಡೆಸಲಾಯಿತು. ಅಭಿಮನ್ಯು, ಧನಂಜಯ, ಗೋಪಾಲಸ್ವಾಮಿ, ಅಶ್ವತ್ಥಾಮ ವಿಕ್ರಮ ಆನೆಗಳಿಗೆ ಮರಳಿನ ಮೂಟೆ ಹೊರಿಸಿ ತಾಲೀಮು ಶುರುವಾಗಿದೆ. ಡಿಸಿಎಫ್ ಕರಿಕಾಳನ್ ವೈದ್ಯ ರಮೇಶ್ ಅರಮನೆ ಎಸಿಪಿ ಚಂದ್ರಶೇಖರ್ ಸೇರಿ ಹಲವು ಅಧಿಕಾರಿಗಳು ಪೂಜೆಯಲ್ಲಿ ಭಾಗಿಯಾಗಿದ್ದರು.
Advertisement