ಮುಂಬೈ: ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಶಮಿ (Mohammed Shami) 50 ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶಮಿ 32.2 ಓವರ್‌ನಲ್ಲಿ ಕೇನ್ ವಿಲಿಯಮ್ಸನ್ (Kane Williamson) ಅವರನ್ನು ಔಟ್ ಮಾಡುವ ಮೂಲಕ ಈ ಮಹತ್ವದ ಮೈಲುಗಲ್ಲು ಸ್ಥಾಪಿಸಿದರು.
ಕೇವಲ 17 ಇನ್ನಿಂಗ್ಸ್‌ಗಳಲ್ಲೇ ಶಮಿ ಈ ಸಾಧನೆ ಮಾಡಿರುವುದು ವಿಶೇಷ. ಆಸ್ಟ್ರೇಲಿಯಾದ ಮೆಚೆಲ್ ಸ್ಟಾರ್ಕ್ 19 ಇನ್ನಿಂಗ್ಸ್‌ಗಲ್ಲಿ 50 ವಿಕೆಟ್ ಪಡೆದ ಸಾಧನೆ ಮಾಡಿದ್ದರು.
Advertisement
Shami has taken most five wicket hauls in the 48 year old history of the World Cup…!!! pic.twitter.com/hUQJuTQiac
— Mufaddal Vohra (@mufaddal_vohra) November 15, 2023
Advertisement
ಅದಕ್ಕಿಂತಲೂ ಮುಖ್ಯವಾಗಿ 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ (World Cup History) ಅತಿಹೆಚ್ಚು ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 3 ಬಾರಿ ಈ ಸಾಧನೆ ಮಾಡಿ 2ನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಶಮಿ 18 ರನ್ ಬಿಟ್ಟುಕೊಟ್ಟು 5 ವಿಕೆಟ್ ಪಡೆದಿದ್ದರು.
Advertisement
Advertisement
ಇದಕ್ಕೂ ಮುನ್ನ ಧರ್ಮಶಾಲಾ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ (New Zealand) ವಿರುದ್ಧದ ಪಂದ್ಯದಲ್ಲಿ 54 ರನ್ ಕೊಟ್ಟು 5 ವಿಕೆಟ್ ಕಿತ್ತಿದ್ದರು. ಇಂದು ಕಿವೀಸ್ ವಿರುದ್ಧ 5 ವಿಕೆಟ್ ಕಿತ್ತು ಮತ್ತೊಂದು ವಿಶೇಷ ಸಾಧನೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ರವೀಂದ್ರ ಜಡೇಜಾ 33 ರನ್ ಬಿಟ್ಟುಕೊಟ್ಟು, ಶಾಹೀನ್ ಶಾ ಅಫ್ರಿದಿ ಆಸ್ಟ್ರೇಲಿಯಾ ವಿರುದ್ಧ 54 ರನ್ ಬಿಟ್ಟುಕೊಟ್ಟು 5 ವಿಕೆಟ್ ಪಡೆದಿದ್ದು ಇದೇ ಟೂರ್ನಿಯಲ್ಲಿ ಎಂಬಿದನ್ನು ಮರೆಯುವಂತಿಲ್ಲ. ಇದನ್ನೂ ಓದಿ: ಸೆಮಿಸ್‌ನಲ್ಲೂ ಶಮಿ ಮಿಂಚು; ಕಿವೀಸ್ ವಿರುದ್ಧ 70 ರನ್‌ಗಳ ಭರ್ಜರಿ ಜಯ – 4ನೇ ಬಾರಿಗೆ ವಿಶ್ವಕಪ್ ಫೈನಲ್‌ಗೆ ಭಾರತ ಎಂಟ್ರಿ
ಈ ಸಾಧನೆಯೊಂದಿಗೆ ಮೊಹಮ್ಮದ್ ಶಮಿ ವಿಶ್ವಕಪ್ ಪಂದ್ಯಾವಳಿಗಳಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಬೌಲರ್ಸ್‌ಗಳ ಎಲೈಟ್ ಪಟ್ಟಿ ಸೇರಿದ್ದು, ಟಾಪ್-10 ಪಟ್ಟಿಯಲ್ಲಿ 6ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಗ್ಲೇನ್ ಮೆಕ್‌ಗ್ರಾತ್ 71 ವಿಕೆಟ್, ಮುತ್ತಯ್ಯ ಮುರಳೀಧರನ್ 68 ವಿಕೆಟ್, ಮಿಚೆಲ್ ಸ್ಟಾರ್ಕ್ 59 ವಿಕೆಟ್, ಲಸಿತ್ ಮಾಲಿಂಗ 56 ವಿಕೆಟ್, ವಾಸಿಂ ಅಕ್ರಮ್ 55 ವಿಕೆಟ್ ಪಡೆದಿದು ಕ್ರಮವಾಗಿ ಮೊದಲ 5 ಸ್ಥಾನಗಳಲ್ಲಿದ್ದರೆ 54 ವಿಕೆಟ್ ಪಡೆದ ಶಮಿ ವಿಶ್ವದ ಟಾಪ್ ಬೌಲರ್‌ಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. ಕೇವಲ 17 ಪಂದ್ಯ 17 ಇನ್ನಿಂಗ್ಸ್‌ಗಳಲ್ಲೇ ಶಮಿ ಈ ಸಾಧನೆ ಮಾಡಿರುವುದು ವಿಶೇಷ. ಇದನ್ನೂ ಓದಿ: ವಿಶ್ವದಾಖಲೆಯ ಶತಕ ಸಿಡಿಸಿದ ಕೊಹ್ಲಿಗೆ ಪಾಕ್ ಕ್ರಿಕೆಟಿಗನಿಂದ ʻಚಕ್ರವರ್ತಿʼ ಬಿರುದು – ಅಭಿನಂದನೆಗಳ ಮಹಾಪೂರ